ಮಿಲ್ಕಿ ಬ್ಯೂಟಿ ತಮನ್ನಾ ಗರ್ಭಿಣಿಯಂತೆ, ಅಬಾರ್ಷನ್ ಸಹ ಆಗಿತ್ತಂತೆ, ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆದ ರೂಮರ್….!

Follow Us :

ಸಿನಿರಂಗದಲ್ಲಿ ಕಡಿಮೆ ಸಮಯದಲ್ಲೇ ಭಾರಿ ಕ್ರೇಜ್ ಪಡೆದುಕೊಳ್ಳುವ ನಟಿಯರು ಕಡಿಮೆ ಮಂದಿ ಇರುತ್ತಾರೆ ಅವರ ಸಾಲಿಗೆ ಮಿಲ್ಕಿ ಬ್ಯೂಟಿ ಎಂದೇ ಖ್ಯಾತಿ ಪಡೆದ ತಮನ್ನಾ ಸಹ ಒಬ್ಬರಾಗಿದ್ದಾರೆ. ಸಣ್ಣ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ತಮನ್ನಾ ಬಳಿಕ ಸ್ಟಾರ್‍ ನಟರೊಂದಿಗೆ ನಟಿಸುವ ಆಫರ್‍ ಗಳನ್ನು ಪಡೆದುಕೊಂಡು ಕಡಿಮೆ ಸಮಯದಲ್ಲೇ ಸ್ಟಾರ್‍ ಡಂ ಗಿಟ್ಟಿಸಿಕೊಂಡರು. ಇತ್ತೀಚಿಗೆ ತಮನ್ನಾ ವೈಯುಕ್ತಿಕ ವಿಚಾರಗಳಿಂದ ಹೆಚ್ಚು ಸುದ್ದಿಯಾಗುತ್ತಿದ್ದಾರೆ. ಇದೀಗ ಆಕೆ ಗರ್ಭಿಣಿಯಾಗಿದ್ದರೆಂಬ ಸುದ್ದಿಯೊಂದು ಸಖತ್ ವೈರಲ್ ಆಗುತ್ತಿದೆ.

ಸೌತ್ ಸಿನಿರಂಗದಲ್ಲಿ ಕಡಿಮೆ ಸಮಯದಲ್ಲೆ ಸ್ಟಾರ್‍ ಡಂ ಪಡೆದುಕೊಂಡ ತಮನ್ನಾ ಭಾಟಿಯಾ ಇತ್ತೀಚಿಗೆ ಕೆಲವೊಂದು ವೈಯುಕ್ತಿಕ ವಿಚಾರಗಳ ಕಾರಣದಿಂದ ಸುದ್ದಿಯಾಗುತ್ತಿದ್ದಾರೆ. ಸಾಮಾನ್ಯವಾಗಿ ಸಿನೆಮಾ ಸೆಲೆಬ್ರೆಟಿಗಳ ಬಗ್ಗೆ ಗಾಸಿಫ್ ಗಳು ಹರಿದಾಡುವುದು ಸರ್ವೆ ಸಾಮಾನ್ಯವಾಗಿರುತ್ತದೆ. ಸೆಲೆಬ್ರೆಟಿಗಳ ಬಗ್ಗೆ ಏನಾದರೂ ಸುದ್ದಿಗಳು ಕೇಳಿಬಂದರೇ ಸಾಕು ಅದು ಕಡಿಮೆ ಸಮಯದಲ್ಲೇ ಸಖತ್ ವೈರಲ್ ಆಗಿಬಿಡುತ್ತದೆ. ಅದು ನಿಜನಾ ಸುಳ್ಳಾ ಎಂಬುದನ್ನು ಪಕ್ಕಕ್ಕಿಟ್ಟು ಸುದ್ದಿಯನ್ನು ವೈರಲ್ ಮಾಡುತ್ತಾರೆ. ಈ ಹಾದಿಯಲ್ಲೆ ತಮನ್ನಾ ಈ ಹಿಂದೆ ಗರ್ಭಿಣಿಯಾಗಿದ್ದಾಗಿ, ಅಬಾರ್ಷನ್ ಆಗಿದ್ದರಂತೆ ಎಂಬ ಸುದ್ದಿಯೊಂದು ಇದೀಗ ಕೇಳಿಬರುತ್ತಿದೆ.

ಸದ್ಯ ಸಿನೆಮಾಗಳಲ್ಲಿ ಪುಲ್ ಬ್ಯುಸಿಯಾಗಿರುವಂತಹ ತಮನ್ನಾ ವೈಯುಕ್ತಿಕ ವಿಚಾರಗಳಿಂದಲೂ ಸುದ್ದಿಯಾಗುತ್ತಿರುತ್ತಾರೆ. ಈ ಹಿಂದೆ ತಮನ್ನಾ ಕಾಲಿವುಡ್ ನಟನೊಂದಿಗೆ ಡೇಟಿಂಗ್ ನಡೆಸಿದ್ದರಂತೆ. ಆತನಿಂದಲೇ ಆಕೆ ಗರ್ಭಿಣಿಯಾಗಿದ್ದರಂತೆ. ಈ ಸುದ್ದಿಯನ್ನು ಅನೇಕ ಸೆಲೆಬ್ರೆಟಿಗಳೂ ಸಹ ನಂಬಿದ್ದರಂತೆ ಇನ್ನೂ ತಮನ್ನಾಗೂ ಆ ನಟನಿಗೂ ವಿಬೇದಗಳು ಉಂಟಾಗಿ ಅವರಿಬ್ಬರೂ ಬೇರೆಯಾದರಂತೆ. ಬಳಿಕ ಆಕೆ ಅಬಾರ್ಷನ್ ಸಹ ಮಾಡಿಸಿಕೊಂಡರಂತೆ. ಸದ್ಯ ಆ ನಟನೊಂದಿಗೆ ಮಾತನಾಡುವುದನ್ನೂ ಸಹ ಬಿಟ್ಟಿದ್ದಾರಂತೆ. ಅಷ್ಟೇಅಲ್ಲದೇ ಆ ನಟನೊಂದಿಗೆ ನಟಿಸುವ ಅವಕಾಶ ಬಂದರೂ ಸಹ ನೋ ಎಂದು ಹೇಳುತ್ತಿದ್ದಾರಂತೆ. ಆದರೆ ಆ ನಟ ಯಾರು ಎಂಬುದು ಮಾತ್ರ ಹೊರಬಂದಿಲ್ಲ. ಆದರೆ ಸುದ್ದಿ ಮಾತ್ರ ಸಖತ್ ವೈರಲ್ ಆಗುತ್ತಿದೆ.

ಸದ್ಯ ತಮನ್ನಾ ಬಾಲಿವುಡ್ ನಟ ವಿಜಯ್ ವರ್ಮಾ ಜೊತೆಗೆ ಪ್ರೀತಿಗೆ ಬಿದ್ದಿದ್ದಾರಂತೆ. ಜೊತೆಗೆ ಅವರಿಬ್ಬರೂ ಸಹ ಜೊತೆಯಾಗಿ ಕಾಣಿಸಿಕೊಂಡಿರುವ ಪೊಟೋಗಳು ಸಹ ವೈರಲ್ ಆಗುತ್ತಿವೆ. ಆದರೆ ತಮನ್ನಾ ಇದೆಲ್ಲವೂ ಸುಳ್ಳು ಸುದ್ದಿ ಎಂದು ಹೇಳುತ್ತಿದ್ದರೂ ರೂಮರ್‍ ಗಳು ಮಾತ್ರ ಹರಿದಾಡುತ್ತಲೇ ಇದೆ. ಇನ್ನೂ ತಮನ್ನಾ ತೆಲುಗು ಸಿನೆಮಾಗಳ ಜೊತೆಗೆ ಬಾಲಿವುಡ್ ನಲ್ಲೂ ಸಹ ಒಳ್ಳೆಯ ಪ್ರಾಜೆಕ್ಟ್ ಗಳಲ್ಲಿ ನಟಿಸುತ್ತಾ ಬ್ಯುಸಿಯಾಗಿದ್ದಾರೆ.