Film News

ಪ್ರಿನ್ಸ್ ಮಹೇಶ್ ಬಾಬು, ನಮ್ರತಾ ನಡುವೆ ಆ ನಟಿಯಿಂದ ವಿಬೇದಗಳು ಸೃಷ್ಟಿಯಾಗಿತ್ತಂತೆ, ವೈರಲ್ ಆದ ಹಳೇಯ ಸುದ್ದಿ…..!

ತೆಲುಗು ಸಿನಿರಂಗದಲ್ಲಿ ಮದುವೆಯಾದ ಸ್ಟಾರ್ ಜೋಡಿಗಳಲ್ಲಿ ಮಹೇಶ್ ಬಾಬು ಹಾಗೂ ನಮ್ರತಾ ಜೋಡಿ ಅನೇಕರಿಗೆ ಮಾದರಿಯಾಗಿದೆ ಎನ್ನಬಹುದಾಗಿದೆ. ಕ್ಯೂಟೆಸ್ಟ್ ಕಪಲ್ಸ್ ಎಂಬ ಖ್ಯಾತಿಗೂ ಸಹ ಪಾತ್ರವಾಗಿದೆ. ಮಹೇಶ್ ಬಾಬು ರವರಿಗಿಂತ ನಾಲ್ಕು ವರ್ಷ ನಮತ್ರಾ ದೊಡ್ಡವರು. ಇಬ್ಬರ ನಡುವೆ ಒಳ್ಳೆಯ ಹೊಂದಾಣಿಕೆಯಿದ್ದು, ಸಂತೋಷದಿಂದ ಜೀವನ ಸಾಗಿಸುತ್ತಿದ್ದಾರೆ. ಆದರೆ ಈ ಹಿಂದೆ ಅವರಿಬ್ಬರ ನಡುವೆ ಓರ್ವ ನಟಿಯ ಕಾರಣದಿಂದ ವಿಬೇದಗಳು ಸೃಷ್ಟಿಯಾಗಿದ್ದವಂತೆ. ಇದೀಗ ಹಳೇಯ ಸುದ್ದಿಯೊಂದು ಸೋಷಿಯಲ್ ಮಿಡಿಯಾದಲ್ಲಿ ಕೇಳಿಬರುತ್ತಿದೆ.

ಪ್ರಿನ್ಸ್ ಮಹೇಶ್ ಬಾಬು ಹಾಗೂ ನಮ್ರತಾ ಶಿರೋಡ್ಕರ್‍ ಮದುವೆಯಾದಾಗಿನಿಂದ ಇಬ್ಬರೂ ಅನ್ಯೋನ್ಯವಾಗಿ ಜೀವನ ಸಾಗಿಸುತ್ತಿದ್ದಾರೆ. ಇಲ್ಲಿಯವರೆಗೂ ಅವರ ನಡುವೆ ಯಾವುದೇ ಗಲಾಟೆಗಳು ನಡೆದಿಲ್ಲ ಎನ್ನಲಾಗಿದೆ. ಇನ್ನೂ ಮಹೇಶ್ ಬಾಬು ರವರಿಗೆ ಕೊಟ್ಟ ಮಾತಿನಂತೆ ನಮ್ರತಾ ಮದುವೆಯ ನಂತರ ಸಿನೆಮಾಗಳಿಂದ ಸಂಪೂರ್ಣವಾಗಿ ದೂರ ಉಳಿದು, ಮಹೇಶ್ ಬಾಬು ರವರ ವ್ಯಾಪಾರಗಳನ್ನು ನೋಡಿಕೊಳ್ಳುತ್ತಾ, ಕುಟುಂಬ ನಿರ್ವಹಣೆ ಮಾಡಿಕೊಳ್ಳುತ್ತಾ ಸಾಗುತ್ತಿದ್ದಾರೆ. ಈ ಎಲ್ಲ ಕಾರಣಗಳಿಂದ ಈ ಜೋಡಿಯನ್ನು ಮೇಡ್ ಫಾರ್‍ ಈಚ್ ಅದರ್‍ ಎಂದು ಕರೆಯಲಾಗುತ್ತಿದೆ. ಆದರೆ ಈ ಹಿಂದೆ ನಮ್ರತಾ ಹಾಗೂ ಮಹೇಶ್ ಬಾಬು ವಿಚ್ಚೇದನ ಪಡೆದುಕೊಳ್ಳುವವರೆಗೂ ಹೋಗಿದ್ದರಂತೆ. ಅದಕ್ಕೆ ಕಾರಣ ಆ ಸ್ಟಾರ್‍ ನಟಿಯಂತೆ. ಆ ನಟಿಯ ಕಾರಣದಿಂದ ಮಹೇಶ್ ಬಾಬು ಹಾಗೂ ನಮ್ರತಾ ನಡುವೆ ವಿಬೇದಗಳು ಸೃಷ್ಟಿಯಾಗಿದೆ ಎಂಬ ಸುದ್ದಿಗಳು ಅಂದು ಜೋರಾಗಿಯೇ ಕೇಳಿಬಂದವು. ಅಷ್ಟಕ್ಕೂ ಆ ನಟಿಯಾರು ಎಂಬ ವಿಚಾರಕ್ಕೆ ಬಂದಿದ್ದಾರೆ.

ಪ್ರಿನ್ಸ್ ಮಹೇಶ್ ಬಾಬು ಹಾಗೂ ನಮ್ರತಾ ನಡುವೆ ವಿಬೇದಗಳು ಹುಟ್ಟಿಕೊಳ್ಳಲು ಸ್ಟಾರ್‍ ನಟಿ ತ್ರಿಷಾ ಕಾರಣವಂತೆ. ತ್ರಿಷಾ ಕಾರಣದಿಂದಲೇ ಮಹೇಶ್ ಬಾಬು ಹಾಗೂ ನಮ್ರತಾ ನಡುವೆ ವಿಬೇದಗಳ ಹುಟ್ಟಿಕೊಂಡವು ಎಂದು ಸಿನಿರಂಗದಲ್ಲಿ ಕೆಲವೊಂದು ಸುದ್ದಿಗಳು ಕೇಳಿಬಂದವು. ಮಹೇಶ್ ಬಾಬು ಹಾಗೂ ತ್ರಿಷಾ ಕಾಂಬಿನೇಷನ್ ನಲ್ಲಿ ಮೂಡಿ ಬಂದ ಅತಡು ಹಾಗೂ ಸೈನಿಕುಡು ಸಿನೆಮಾದ ಬಳಿಕ ಅವರಿಬ್ಬರ ನಡುವೆ ರಿಲೇಷನ್ ಶಿಪ್ ಶುರುವಾಯ್ತು ಎಂದು ಹೇಳಲಾಗಿತ್ತು. ಸಿನಿರಂಗದಲ್ಲಿ ಎರಡು ಸಿನೆಮಾಗಳು ಮಾಡಿದರೇ ಸಾಕು ಆ ಸಿನೆಮಾದ ನಟ-ನಟಿಯರ ನಡುವೆ ಏನೋ ಇದೆ ಎಂಬ ರೂಮರ್‍ ಗಳು ಕೇಳಿಬರುತ್ತವೆ. ಈ ಹಾದಿಯಲ್ಲೇ ತ್ರಿಷಾ ಹಾಗೂ ಮಹೇಶ್ ಬಾಬು ನಡುವೆ ಕೂಡ ಲವ್ ಟ್ರಾಕ್ ಶುರುವಾಗಿದೆ ಎಂಬ ರೂಮರ್‍ ಗಳು ಜೋರಾಗಿಯೇ ಹರಿದಾಡಿತ್ತು.

ಈ ಕಾರಣದಿಂದಲೇ ಮಹೇಶ್ ಬಾಬು ಹಾಗೂ ನಮ್ರತಾ ನಡುವೆ ವಿಬೇಧಗಳು ಉಂಟಾಗಿದೆ ಎಂಬ ರೂಮರ್‍ ಗಳು ಈ ಹಿಂದೆ ಜೋರಾಗಿಯೇ ಕೇಳಿಬಂತು. ಆದರೆ ಈ ಬಗ್ಗೆ ಎಷ್ಟು ನಿಜ, ಎಷ್ಟು ಸುಳ್ಳು ಎಂಬುದು ಇಂದಿಗೂ ಸಹ ತಿಳಿಯದು. ಆದರೆ ಈ ಸುದ್ದಿ ಆಗಾಗ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿರುತ್ತದೆ.

Most Popular

To Top