Film News

ಮತ್ತೊಮ್ಮೆ ರೊಮ್ಯಾಂಟಿಕ್ ಪೊಟೋ ಹಂಚಿಕೊಂಡ ಮಹಾಲಕ್ಷ್ಮೀ ರವಿಂದರ್, ಮತ್ತೆ ಟ್ರೋಲ್ ಆದ ಜೋಡಿ…!

ತಮಿಳು ಸಿನಿರಂಗದ ಖ್ಯಾತ ನಿರ್ಮಾಪಕ ರವಿಂದರ್‍ ಹಾಗೂ ಕಿರುತೆರೆ ನಟಿ ಮಹಾಲಕ್ಷ್ಮೀ ಕಳೆದ ವರ್ಷ ಮದುವೆಯಾದರು. ಇಬ್ಬರಿಗೂ ಇದು ಎರಡನೇ ಮದುವೆಯಾಗಿದ್ದು, ಮದುವೆಯಾದಾಗಿನಿಂದ ಸದಾ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುತ್ತಿದ್ದರು.  ಸ್ಟಾರ್‍ ಸೆಲೆಬ್ರೆಟಿಗಳಿಗಿಂತಲೂ ಈ ಜೋಡಿಯ ಮದುವೆ ತುಂಬಾನೆ ಸದ್ದು ಮಾಡಿತ್ತು. ಮದುವೆಯಾದಾಗಿನಿಂತ ರವಿಂದರ್‍ ಹಾಗೂ ಮಹಾಲಕ್ಷ್ಮಿ ರೊಮ್ಯಾಂಟಿಕ್ ಪೊಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಈ ಜೋಡಿಯನ್ನು ಮತ್ತೊಮ್ಮೆ ಟ್ರೋಲ್ ಮಾಡಿದ್ದಾರೆ.

ಮದುವೆಯಾದಾಗಿನಿಂದ ಈ ಜೋಡಿ ಟ್ರೋಲ್ ಆಗುತ್ತಲೇ ಇದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ಅವರನ್ನು ಟ್ರೋಲ್ ಮಾಡುತ್ತಲೇ ಇದ್ದರು. ಮೊದಲಿಗೆ ಮಹಾಲಕ್ಷ್ಮೀ ಸಹ ತಮ್ಮನ್ನ ಟ್ರೋಲ್ ಮಾಡಬೇಡಿ ಎಂದು ಕೇಳಿಕೊಂಡಿದ್ದರು. ಆದರೂ ಸಹ ಟ್ರೋಲ್ ಗಳು ನಿಲ್ಲದ ಕಾರಣ ಯಾವ ಟ್ರೋಲ್ ಗಳನ್ನು ಸಹ ಕಿವಿಗೆ ಹಾಕಿಕೊಳ್ಳದೇ ತಮ್ಮ ವೈವಾಹಿಕ ಜೀವನವನ್ನು ಸಂತೋಷದಿಂದ ಕಳೆಯುತ್ತಿದ್ದಾರೆ. ಇನ್ನೂ ನಿರ್ಮಾಪಕ ರವಿಂದರ್‍ ಚಂದ್ರಶೇಖರ್‍ ಆಗಾಗ ತನ್ನ ಮಡದಿಯನ್ನು ಹೊಗಳುತ್ತಾ ಕೆಲವೊಂದು ರೊಮ್ಯಾಂಟಿಕ್ ಪೊಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇನ್ನೂ ಇದೀಗ ಅವರ ಹೊಸ ಪೊಟೋ ಒಂದು ಸೋಷಿಯಲ್ ಮಿಡಿಯಾದಲ್ಲಿ ಹೊರಬಂದಿದ್ದು, ಹಣ ಇದ್ದರೇ ಎಲ್ಲವೂ ನಡೆಯುತ್ತದೆ ಎಂದು ಅನೇಕರು ಟ್ರೋಲ್ ಮಾಡುತ್ತಿದ್ದಾರೆ.

ಇನ್ನೂ ರವಿಂದರ್‍ ಟ್ರೋಲರ್‍ ಗಳಿಗೆ ಹೆದರಿ ಸುಮ್ಮನಿಲ್ಲ. ಪ್ರತಿಯೊಂದು ವಿಶೇಷ ದಿನಗಳಂದು ಆತ ರೊಮ್ಯಾಂಟಿಕ್ ಪೊಟೋಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಸರಳವಾಗಿ ಮದುವೆಯಾದಂತಹ ಈ ಜೋಡಿ ಐಶಾರಾಮಿ ಲೈಪ್ ಲೀಡ್ ಮಾಡುತ್ತಿದ್ದಾರೆ. ಮದುವೆಯಾದ ಬಳಿಕ ರವಿಂದರ್‍ ಮಹಾಲಕ್ಷ್ಮೀಗೆ ಕೊಟ್ಯಂತರ ಬೆಲೆ ಬಾಳುವಂತಹ ಉಡುಗೊರೆಗಳನ್ನು ಕೊಟ್ಟಿದ್ದರು ಎನ್ನಲಾಗಿದೆ. ಜೊತೆಗೆ ಮಹಾಲಕ್ಷ್ಮೀ ಜೀವನಕ್ಕೆ ಯಾವುದೇ ರೀತಿಯಲ್ಲೂ ಸಮಸ್ಯೆ ಎದುರಾಗದಂತೆ ಆಸ್ತಿಯನ್ನು ಸಹ ಆಕೆಯ ಹೆಸರಿಗೆ ಬರೆದಿದ್ದಾರೆ ಎಂಬ ಮಾತುಗಳು ಸಹ ಕೇಳಿಬಂದಿವೆ. ಇನ್ನೂ ಇತ್ತೀಚಿಗಷ್ಟೆ ಈ ಜೋಡಿಗೆ ಮದುವೆಯಾಗಿ ನೂರು ದಿನ ಪೂರೈಸಿದ ಕಾರಣದಿಂದ ಈ ಸಂಭ್ರಮವನ್ನು ಅದ್ದೂರಿಯಾಗಿ ಆಚರಿಸಿಕೊಂಡಿದ್ದರು. ಈ ವೇಳೆ ಸಹ ಪೊಟೋ ಒಂದನ್ನು ಹಂಚಿಕೊಂಡಿದ್ದರು ರವಿಂದರ್‍.

ಇನ್ನೂ ರವಿಂದರ್‍ ಹಂಚಿಕೊಂಡ ಪೋಸ್ಟ್ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಇನ್ನೂ ಅನೇಕರು ಸೋಷಿಯಲ್ ಮಿಡಿಯಾದಲ್ಲಿ ಶುಭಾಷಯಗಳನ್ನು ಕೋರುತ್ತಿದ್ದರೇ, ಮತ್ತೆ ಕೆಲವರು ಈ ಹಿಂದೆಯಂತೆ ಟ್ರೋಲ್ ಮಾಡುತ್ತಿದ್ದಾರೆ. ಆದರೆ ರವಿಂದರ್‍ ಹಾಗೂ ಮಹಾಲಕ್ಷ್ಮೀ ಮಾತ್ರ ಯಾವುದೇ ಟ್ರೋಲ್ ಗಳನ್ನು ಕಿವಿಗೆ ಹಾಕಿಕೊಳ್ಳದೇ ಸಂತೋಷದಿಂದ ಜೀವನ ಸಾಗಿಸುತ್ತಿದ್ದಾರೆ.

Most Popular

To Top