ಆ ದೃಶ್ಯದಲ್ಲಿ ಲಿಪ್ ಅಗತ್ಯವಿತ್ತು, ಲಿಪ್ ಕಿಸ್ ಮಾಡಿದೆ ಅದರಲ್ಲಿ ಏನು ತಪ್ಪು ಎಂದ ಅಮಲಾಪಾಲ್….!

Follow Us :

ಕಾಲಿವುಡ್ ಸಿನಿರಂಗದಲ್ಲಿ ವಿಭಿನ್ನ ಹಾಗೂ ನೇರ ವ್ಯಕ್ತಿತ್ವ ಉಳ್ಳ ನಟಿಯರ ಸಾಲಿನಲ್ಲಿ ಡಸ್ಕಿ ಬ್ಯೂಟಿ ಅಮಲಾಪಾಲ್ ಮೊದಲ ಸ್ಥಾನದಲ್ಲಿದ್ದಾರೆ ಎಂದು ಹೇಳಬಹುದು. ಆಕೆ ವಿಭಿನ್ನವಾದ ಸಿನೆಮಾಗಳನ್ನು ಆಯ್ಕೆ ಮಾಡಿಕೊಂಡು ಸದಾ ಸುದ್ದಿಯಾಗುತ್ತಲೇ ಇರುತ್ತಾರೆ. ಈಗಾಗಲೇ ಬೋಲ್ಡ್ ಪಾತ್ರಗಳ ಮೂಲಕ ಗಮನ ಸೆಳೆದಂತಹ ಅಮಲಾಪಾಲ್ ಆಡು ಜೀವಿತಂ ಎಂಬ ಸಿನೆಮಾದಲ್ಲಿ ಮಲಯಾಳಂ ಸ್ಟಾರ್‍ ಪೃಥ್ವಿರಾಜ್ ಸುಕುಮಾರನ್ ಜೊತೆಗೆ ನಟಿಸಿದ್ದು, ಈ ಸಿನೆಮಾದ ಟ್ರೈಲರ್‍ ನಲ್ಲಿ ಆಕೆ ಪೃಥ್ವಿರಾಜ್ ಜೊತೆ ಲಿಪ್ ಲಾಕ್ ಮಾಡುವ ಸನ್ನಿವೇಶವಿದ್ದು, ಈ ಬಗ್ಗೆ ಅಮಲಾಪಾಲ್ ಪ್ರತಿಕ್ರಿಯೆ ನೀಡಿದ್ದಾರೆ.

ನಟಿ ಅಮಲಾಪಾಲ್ ಎಲ್ಲ ನಟಿಯರಿಗಿಂತ ವಿಭಿನ್ನ ಎಂದೇ ಹೇಳಬಹುದಾಗಿದೆ. ಆಕೆ ಪಾತ್ರ ಡಿಮ್ಯಾಂಡ್ ಮಾಡಿದರೇ ನ್ಯೂಡ್ ಆಗಿ ನಟಿಸಲು ಸಹ ಸಿದ್ದವಾಗಿರುತ್ತಾರೆ. ಅದಕ್ಕೆ ಆಮೆ ಎಂಬ ಸಿನೆಮಾ ಒಳ್ಳೆಯ ಉದಾಹರಣೆಯಾಗಿದೆ ಎನ್ನಬಹುದಾಗಿದೆ. ಇನ್ನೂ ಸಿನೆಮಾಗಳ ಜೊತೆಗೆ ಆಕೆ ವೈಯುಕ್ತಿಕ ವಿಚಾರಗಳಿಂದಲೂ ಸುದ್ದಿಯಾಗುತ್ತಿರುತ್ತಾರೆ. ಆಕೆ ರಿಯಲ್ ಲೈಫ್ ನಲ್ಲಿ ನೇರ ನುಡಿಗಳನ್ನಾಡುವ ಮೂಲಕ ಎಲ್ಲರ ಗಮನ ಸಹ ಸೆಳೆಯುತ್ತಾರೆ. ಜೊತೆಗೆ ಸೋಷಿಯಲ್ ಮಿಡಿಯಾದಲ್ಲಂತೂ ಆಕೆ ತುಂಬಾನೆ ಬೋಲ್ಡ್ ಆಗಿ ಪೊಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇತ್ತಿಚಿಗೆ ಆಕೆ ವಿವಿಧ ತಾಣಗಳಿಗೆ ಭೇಟಿ ಕೊಟ್ಟು ಅಲ್ಲಿನ ಸುಂದರ ತಾಣಗಳಲ್ಲಿ ಎಂಜಾಯ್ ಮಾಡಿ ಕೆಲವೊಂದು ಹಾಟ್ ಪೊಟೋಗಳನ್ನು ಸೊಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದರು. ಈ ಪೊಟೋಗಳು ಕಡಿಮೆ ಸಮಯದಲ್ಲೇ ಸಖತ್ ವೈರಲ್ ಸಹ ಆಗಿತ್ತು.

ಇನ್ನೂ ಅಮಲಾಪಾಲ್ ಇದೀಗ ಆಡು ಜೀವಿತಂ ಎಂಬ ಸಿನೆಮಾದಲ್ಲಿ ಪೃಥ್ವಿರಾಜ್ ಸುಕುಮಾರನ್ ಜೊತೆಗೆ ರೊಮ್ಯಾನ್ಸ್ ಮಾಡಲಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೆ ಈ ಸಿನೆಮಾ ಟ್ರೈಲರ್‍ ಲೀಕ್ ಆಗಿತ್ತು. ಇನ್ನೂ ಈ ಟ್ರೈಲರ್‍ ನಲ್ಲಿ ಅಮಲಾ ಪಾಲ್ ಹಾಗೂ ಪೃಥ್ವಿರಾಜ್ ಡೀಪ್ ಲಿಪ್ ಲಾಕ್ ಮಾಡಿಕೊಂಡಿದ್ದು, ಈ ಬಗ್ಗೆ ಜೋರಾದ ಚರ್ಚೆ ಸಹ ನಡೆಯಿತು. ಈಸಿನೆಮಾ ಮರಳು ಭೂಮಿಯಲ್ಲಿ ಕಷ್ಟಪಡುವಂತಹ ವ್ಯಕ್ತಿಯ ಕುರಿತ ಜೀವನ ಕಥೆಯನ್ನು ಆಧರಿಸಿ ಸಿನೆಮಾ ಸೆಟ್ಟೇರಿದೆ. ಪೃಥ್ವಿರಾಜ್ ಈ ಸಿನೆಮಾದಲ್ಲಿ ವಿಭಿನ್ನವಾದ ಗೆಟಪ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸುಕುಮಾರನ್ ಪತ್ನಿಯ ಪಾತ್ರದಲ್ಲಿ ಅಮಲಾ ಪಾಲ್ ನಟಿಸುತ್ತಿದ್ದಾರೆ. ಇದೀಗ ಬಿಡುಗಡೆಯಾದ ಟ್ರೈಲರ್‍ ನಲ್ಲಿ ಅಮಲಾಪಾಲ್ ಲಿಪ್ ಲಾಕ್ ದೃಶ್ಯದ ಬಗ್ಗೆ ದೊಡ್ಡ ಮಟ್ಟದ ಚರ್ಚೆ ನಡೆದಿತ್ತು. ಈ ಬಗ್ಗೆ ಅಮಲಾಪಾಲ್ ರಿಯಾಕ್ಟ್ ಆಗಿದ್ದಾರೆ ಎಂದು ಹೇಳಲಾಗುತ್ತಿದೆ.

ಇನ್ನೂ ಲಿಪ್ ಲಾಕ್ ದೃಶ್ಯದ ಬಗ್ಗೆ ಅಮಲಾಪಾಲ್ ರಿಯಾಕ್ಟ್ ಆಗಿದ್ದಾರಂತೆ. ಸಿನೆಮಾದಲ್ಲಿ ಆ ದೃಶ್ಯ ಅವಶ್ಯಕವಾಗಿತ್ತು. ಅದರಂತೆ ನಾನು ನಟಿಸಿದ್ದೇನೆ ಎಂದು ನೇರವಾಗಿಯೇ ಉತ್ತರ ನೀಡಿದ್ದಾರಂತೆ. ಈ ಬಗ್ಗೆ ಕೆಲ ಮಾದ್ಯಮಗಳು ವರದಿ ಸಹ ಮಾಡಿದೆ. ಇನ್ನೂ ಈ ಸಿನೆಮಾ ಈಗಾಗಲೇ ತೆರೆಕಾಣಬೇಕಿತ್ತು. ಕೆಲವೊಂದು ಕಾರಣಗಳಿಂದ ಸಿನೆಮಾ ತಡವಾಗಿದೆ.