Film News

ಸೈಲೆಂಟ್ ಆಗಿ NTR30 ಸಿನೆಮಾ ಅಪ್ಡೇಟ್ ಕೊಟ್ಟ ತಂಡ, ಶೂಟಿಂಗ್ ಸಹ ಶೀಘ್ರದಲ್ಲೇ ಆರಂಭ….!

ತೆಲುಗು ಖ್ಯಾತ ನಟ ಜೂನಿಯರ್‍ ಎನ್.ಟಿ.ಆರ್‍ ರವರ 30ನೇ ಸಿನೆಮಾ ಕೊರಟಾಲ ಶಿವ ನಿರ್ದೇಶನ ಮಾಡಲಿದ್ದಾರೆ. ಈಗಾಗಲೇ ಈ ಸಿನೆಮಾದ ಪೋಸ್ಟರ್‍ ಸಹ ರಿಲೀಸ್ ಆಗಿದ್ದು, ಪೋಸ್ಟರ್‍ ಮೂಲಕವೇ ಸಿನೆಮಾದ ಮೇಲೆ ತುಂಬಾ ನಿರೀಕ್ಷೆಯನ್ನು ಹುಟ್ಟಿಸಿದ್ದರು. ಅನೇಕ ತಿಂಗಳುಗಳಿಂದ ಎನ್.ಟಿ.ಆರ್‍ ಅಭಿಮಾನಿಗಳು ಈ ಸಿನೆಮಾದ ಅಪ್ಡೇಟ್ ಗಾಗಿ ಕಾಯುತ್ತಿದ್ದರು. ಇದೀಗ ಯಾರೂ ಊಹಿಸಿದ ರೀತಿಯಲ್ಲಿ ಸೈಲೆಂಟ್ ಆಗಿ NTR30 ಸಿನೆಮಾ ತಂಡ ಭರ್ಜರಿ ಅಪ್ಡೇಟ್ ನೀಡಿದೆ. ಈ ಸಂಬಂಧ ಪೋಸ್ಟರ್‍ ಒಂದನ್ನು ಹಂಚಿಕೊಂಡಿದ್ದಾರೆ.

ಜೂನಿಯರ್‍ ಎನ್.ಟಿ.ಆರ್‍ ಹಾಗೂ ರಾಮ್ ಚರಣ್ ಕಾಂಬಿನೇಷನ್ ನಲ್ಲಿ ಮೂಡಿಬಂದ RRR ಸಿನೆಮಾ ಬಿಡುಗಡೆಯಾಗಿ ಭರ್ಜರಿಯಾಗಿ ಪ್ರದರ್ಶನ ಕಂಡಿದೆ. ಇನ್ನೂ ರಾಮ್ ಚರಣ್ ಸಹ RC15 ಸಿನೆಮಾ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಜೂನಿಯರ್‍ ಎನ್.ಟಿ.ಆರ್‍ ಸಿನೆಮಾ ಮಾತ್ರ ಇನ್ನೂ ಸೆಟ್ಟೇರಲಿಲ್ಲ. ಇದರಿಂದ ಚಿತ್ರತಂಡ ಮೇಲೆ ಎನ್.ಟಿ.ಆರ್‍ ಅಭಿಮಾನಿಗಳು ತುಂಬಾನೆ ಕೋಪಗೊಂಡಿದ್ದರು. ಆದರೆ ಕೆಲವು ದಿನಗಳ ಹಿಂದೆ ಚಿತ್ರತಂಡ ಪ್ರೀ ಪ್ರೊಡಕ್ಷನ್ ಕೆಲಸಗಳನ್ನು ಶುರು ಮಾಡಿದ್ದಾಗಿ ಚಿತ್ರತಂಡ ತಿಳಿಸಿತ್ತು. ಜೊತೆಗೆ ಶೂಟಿಂಗ್ ಗಾಗಿ ವೆಕೇಷನ್ ಗಳನ್ನು ಸಹ ಹುಡುಕಲು ತಂಡ ಶುರು ಮಾಡಿತ್ತು. ಇದೀಗ ಈ ಚಿತ್ರತಂಡ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದೆ. ಅದು ಹೊಸ ವರ್ಷದ ಕೊಡುಗೆ ಎನ್ನಲಾಗುತ್ತಿದೆ.

ಹೊಸ ವರ್ಷದ ಅಂಗವಾಗಿ NTR30 ಚಿತ್ರತಂಡ ಪವರ್‍ ಪುಲ್ ಪೋಸ್ಟರ್‍ ಒಂದನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟರ್‍ ನಲ್ಲಿ ನಟ ಎನ್.ಟಿ.ಆರ್‍ ತನ್ನ ಎರಡೂ ಕೈಗಳಲ್ಲಿ ಎರಡು ಕತ್ತಿಗಳನ್ನು ಹಿಡಿದು ರಗಡ್ ಲುಕ್ಸ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನೂ ಈ ಪೋಸ್ಟರ್‍ ನಲ್ಲಿ ಸಿನೆಮಾ ರಿಲೀಸ್ ದಿನಾಂಕವನ್ನು ಸಹ ಘೋಷಣೆ ಮಾಡಿದ್ದಾರೆ. ಅದರಂತೆ 2024 ಏಪ್ರಿಲ್ 5 ರಂದು ಅದ್ದೂರಿಯಾಗಿ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಣೆ ಮಾಡಿದೆ. ಜೊತೆಗೆ ಫೆಬ್ರವರಿ ಮಾಹೆಯಿಂದ ಶೂಟಿಂಗ್ ಸಹ ಶುರುವಾಗುವುದಾಗಿ ತಿಳಿಸಿದ್ದಾರೆ ಇನ್ನೂ ಈ ಪೋಸ್ಟರ್‍ ನೋಡಿದ ಅಭಿಮಾನಿಗಳು ಖುಷಿಯಾಗಿದ್ದಾರೆ ಆದರೆ ಸಿನೆಮಾ ಮುಂದಿನ ವರ್ಷ ಬಿಡುಗಡೆಯಾಗುತ್ತಿರುವ ಕಾರಣದಿಂದ ಕೊಂಚ ನಿರಾಸೆಯಾಗಿಯೂ ಸಹ ಇದ್ದಾರೆ ಎನ್ನಲಾಗಿದೆ.

ಎನ್.ಟಿ.ಆರ್‍ ರವರ 30ನೇ ಸಿನೆಮಾವನ್ನು ವಿಭಿನ್ನವಾದ ಹಾಗೂ ಬಲವಾದ ಕಥೆಯನ್ನು ಆಧರಿಸಿ ಈ ಸಿನೆಮಾ ತೆರೆ ಮೇಲೆ ಬರಲಿದೆ. ಇನ್ನೂ ಈ ಸಿನೆಮಾವನ್ನು ನಂದಮೂರಿ ತಾರಕ ರಾಮಾರಾವ್ ಆರ್ಟ್ಸ್ ಹಾಗೂ ಯುವಸುಧ ಆರ್ಟ್ಟ್ ಬ್ಯಾನರ್‍ ನಡಿ ಸಂಯುಕ್ತವಾಗಿ ನಿರ್ಮಾಣ ಮಾಡಲಾಗುತ್ತಿದೆ. ಸಂಗೀತವನ್ನು ಯಂಗ್ ಮ್ಯೂಸಿಕ್ ಡೈರೆಕ್ಟರ್‍ ಅನಿರುಧ್ ಶ್ರವಣ್ ಸಂಗೀತ ನೀಡಲಿದ್ದಾರೆ. ಈ ಸಿನೆಮಾದಲ್ಲಿ ನಟಿಯಾರು ಎಂಬ ವಿಚಾರದ ಬಗ್ಗೆ ಅನೇಕ ರೂಮರ್‍ ಗಳು ಕೇಳಿಬರುತ್ತಲೇ ಇದೆ.

Most Popular

To Top