Film News

ಸೆಕೆಂಡ್ ಇನ್ನಿಂಗ್ಸ್ ನಲ್ಲಿ ಭಾರಿ ಮೊತ್ತದ ಸಂಭಾವನೆ ಏರಿಸಿದ ಕಾಜಲ್ ಅಗರ್ವಾಲ್, ಮದುವೆಯಾದರೂ ತಗ್ಗೆದೇ ಲೇ ಎಂದ ಬ್ಯೂಟಿ…..!

ಸೌತ್ ನ ಬಹುಬೇಡಿಕೆ ನಟಿ ಹಾಗೂ ಸ್ಟಾರ್‍ ನಟಿ ಕಾಜಲ್ ಅಗರ್ವಾಲ್ ಸಿನೆಮಾಗಳಿಂದ ದೂರ ವುಳಿದರೂ ಸಹ ಆಕೆಯ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ. ಇತ್ತೀಚಿಗಷ್ಟೆ ಆಕೆ ಗಂಡು ಮಗುವಿಗೆ ಜನ್ಮ ನೀಡಿದ್ದು, ಮಗುವಿನೊಂದಿಗೆ ಸಂತಸದಿಂದ ಕಾಲ ಕಳೆಯುತ್ತಿದ್ದಾರೆ. ಮಗನೊಂದಿಗೆ ಆಟವಾಡುವಂತಹ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಜೊತೆಗೆ ಆಗಾಗ ಪೊಟೋಶೂಟ್ ಮೂಲಕ ಸಹ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. ಇದೀಗ ಆಕೆಯ ಸಂಭಾವನೆಯ ವಿಚಾರ ಹಾಟ್ ಟಾಪಿಕ್ ಆಗಿದೆ.

ನಟಿ ಕಾಜಲ್ ಮದುವೆ, ಮಗು ಬಳಿಕ ಇದೀಗ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದಾರೆ. ಇದೀಗ ಅನೇಕ ಸಿನೆಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಸಿನೆಮಾಗಳು, ವೆಬ್ ಸೀರಿಸ್ ಗಳಲ್ಲೂ ಸಹ ನಟಿಸುತ್ತಿದ್ದಾರೆ. ಇನ್ನೂ ಈಗಾಗಲೇ ಇಂಡಿಯನ್ 2 ಸಿನೆಮಾದಲ್ಲಿ ನಟಿ ಕಾಜಲ್ ನಟಿಸುತ್ತಿದ್ದಾರೆ. ಇದೀಗ ಸೆಕೆಂಡ್ ಇನ್ನಿಂಗ್ಸ್ ನಲ್ಲೂ ಸಹ ನಟಿ ಕಾಜಲ್ ಭಾರಿ ಮೊತ್ತದ ಸಂಭಾವನೆಯನ್ನು ಏರಿಸಿದ್ದಾರಂತೆ. ಈಗಾಗಲೇ ಸೌತ್ ಸಿನಿರಂಗದಲ್ಲಿ ಮದುವೆಯಾದ ಬಳಿಕವೂ ಸಹ ಕೆಲ ನಟಿಯರು ಭಾರಿ ಸಂಭಾವನೆಯನ್ನು ಪಡೆದುಕೊಳ್ಳುತ್ತಿದ್ದಾರೆ. ಸೀನಿಯರ್‍ ನಟಿಯರಾದ ನಯನತಾರಾ, ತ್ರಿಷಾ ಸೇರಿದಂತೆ ಅನೇಕರು ಭಾರಿ ಮೊತ್ತದ ಸಂಭಾವನೆನ್ನು ಪಡೆದುಕೊಳ್ಳುವ ಜೊತೆಗೆ ಕ್ರೇಜಿ ಆಫರ್‍ ಗಳನ್ನು ಸಹ ಪಡೆದುಕೊಳ್ಳುತ್ತಿದ್ದಾರೆ. ಇದೀಗ ಕಾಜಲ್ ಸಹ ತನ್ನ ಸಂಭಾವನೆಯನ್ನು ಏರಿಸಿದ್ದಾರೆ ಎನ್ನಲಾಗುತ್ತಿದೆ.

ಸದ್ಯ ಕೇಳಿಬರುತ್ತಿರುವ ಸುದ್ದಿಯಂತೆ ನಟಿ ಕಾಜಲ್ ಅಗರ್ವಾಲ್ ಒಂದು ಸಿನೆಮಾಗೆ ಬರೊಬ್ಬರಿ ಮೂರು ಕೋಟಿ ಸಂಭಾವನೆ ಪಡೆದುಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ. ಆಕೆ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದು, ಇಂಡಿಯನ್ -2 ಸಿನೆಮಾದ ಮೂಲಕ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದಾರೆ. ಇದೀಗ ವೆಬ್ ಸೀರಿಸ್ ಒಂದಕ್ಕಾಗಿ ಆಕೆ ಭಾರಿ ಮೊತ್ತದ ಸಂಭಾವನೆಯನ್ನು ಸಹ ಪಡೆದುಕೊಳ್ಳುತ್ತಿದ್ದಾರಂತೆ. ಕಾಜಲ್ ಗೆ ಬ್ಯಾಕ್ ಟು ಬ್ಯಾಕ್ ಆಫರ್‍ ಗಳು ಹರಿದು ಬರುತ್ತಿವೆ. ಮದುವೆಯಾದ ಬಳಿಕ ಕಾಜಲ್ ಗ್ಲಾಮರ್‍ ಪಾತ್ರಗಳಿಗೆ ದೂರವಾಗಿಯೇ ಇದ್ದಾರೆ ಎನ್ನಲಾಗುತ್ತಿದೆ. ಸೀನಿಯರ್‍ ನಟರಿಗೆ ಜೋಡಿಯಾಗಿ ಕಾಜಲ್ ಗೆ ಆಫರ್‍ ಗಳು ಹರಿದು ಬರುತ್ತಿವೆ ಎನ್ನಲಾಗುತ್ತಿದೆ.

ಸದ್ಯ ಕಾಜಲ್ ಅಗವಾಲ್ ಗೆ 37 ವರ್ಷ ವಯಸ್ಸಾಗಿದೆ. ಆಕೆ ಮತಷ್ಟು ವರ್ಷಗಳ ಕಾಲ ಸಿನೆಮಾಗಳಲ್ಲಿ ಕ್ರೇಜಿ ಅಫರ್‍ ಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಾರೆ ಎಂಬ ಮಾತುಗಳೂ ಸಹ ಕೇಳಿಬರುತ್ತಿವೆ. ಇದೀಗ ಆಕೆ ಸಂಭಾವನೆಯನ್ನು ಏರಿಸಿದ್ದು ಯಾವ ರೀತಿಯ ಆಫರ್‍ ಗಳನ್ನು ಪಡೆದುಕೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

Most Popular

To Top