ಆ ಹಿರೋಯಿನ್ ಕಾರಣದಿಂದಲೇ ಮುಂಬೈಗೆ ಬಂದೆ, ಹೈದರಾಬಾದ್ ನಲ್ಲಿ ನನ್ನು ನೋಡಿ ಎದ್ದು ನಿಲ್ಲುತ್ತಾರೆ ಎಂದ ಮಂಚು ಲಕ್ಷ್ಮೀ…..!

ತೆಲುಗಿನ ಖ್ಯಾತ ನಟ ಮೋಹನ್ ಬಾಬು ರವರ ಪುತ್ರಿ ಮಂಚು ಲಕ್ಷ್ಮೀ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಆಕ್ಟೀವ್ ಆಗಿರುತ್ತಾರೆ. ಫನ್ನಿ ವಿಡಿಯೋಗಳನ್ನು, ಪೊಟೋಗಳನ್ನು ಹಂಚಿಕೊಳ್ಳುವ ಮೂಲಕ ಫೇಮ್ ದಕ್ಕಿಸಿಕೊಂಡಿದ್ದಾರೆ. ಆಕೆ ಅಭಿನಯದ ಮೊದಲನೇ ಅನಗನಗಾ…

ತೆಲುಗಿನ ಖ್ಯಾತ ನಟ ಮೋಹನ್ ಬಾಬು ರವರ ಪುತ್ರಿ ಮಂಚು ಲಕ್ಷ್ಮೀ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಆಕ್ಟೀವ್ ಆಗಿರುತ್ತಾರೆ. ಫನ್ನಿ ವಿಡಿಯೋಗಳನ್ನು, ಪೊಟೋಗಳನ್ನು ಹಂಚಿಕೊಳ್ಳುವ ಮೂಲಕ ಫೇಮ್ ದಕ್ಕಿಸಿಕೊಂಡಿದ್ದಾರೆ. ಆಕೆ ಅಭಿನಯದ ಮೊದಲನೇ ಅನಗನಗಾ ಓ ಧೀರುಡು ಎಂಬ ಸಿನೆಮಾದಲ್ಲಿ ಲೇಡಿ ವಿಲನ್ ಪಾತ್ರಧಾರಿಯಾಗಿ ಕಾಣಿಸಿಕೊಂಡು ಸಿನಿರಂಗಕ್ಕೆ ಎಂಟ್ರಿಕೊಟ್ಟರು. ಇದೀಗ ಆಕೆ ಸಂದರ್ಶನವೊಂದರಲ್ಲಿ ಕೆಲವೊಂದು ಕಾಮೆಂಟ್ಸ್ ಮಾಡಿದ್ದು, ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ.

ನಟಿ ಮಂಚು ಲಕ್ಷ್ಮೀ ಸಹ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಆಕ್ಟೀವ್ ಆಗಿರುತ್ತಾರೆ. ಒಂದಲ್ಲ ಒಂದು ರೀತಿಯ ಪೋಸ್ಟ್ ಗಳನ್ನು ಹಂಚಿಕೊಳ್ಳುತ್ತಾ ಸುದ್ದಿಯಾಗುತ್ತಿರುತ್ತಾರೆ. ಮಂಚು ಕುಟುಂಬದ ಲಕ್ಷ್ಮೀ ಏನೆ ಮಾಡಿದರೂ ಸಹ ವಿಭಿನ್ನವಾಗಿಯೇ ಮಾಡುತ್ತಾರೆ. ಅಮೇರಿಕಾದಲ್ಲಿ ಕೆಲವೊಂದು ಶೋಗಳ ಮೂಲಕ ಹಾಗೂ ಕೆಲವೊಂದು ಸಿರೀಸ್ ಗಳಲ್ಲೂ ಸಹ ನಟಿಸಿದ್ದಾರೆ. ಇನ್ನೂ ನಟಿಯಾಗಿ ಕ್ರೇಜ್ ಸಂಪಾದಿಸಿಕೊಳ್ಳಲು ತುಂಬಾನೆ ಪ್ರಯತ್ನ ಮಾಡುತ್ತಿದ್ದಾರೆ. ಸಿನೆಮಾಗಳ ಜೊತೆಗೆ ಆಕೆ ಟಾಕ್ ಶೋಗಳನ್ನು ಸಹ ಪರಿಚಯಿಸಿದರು. ಈ ಟಾಕ್ ಶೋ ಟ್ರೆಂಡ್ ಕ್ರಿಯೇಟ್ ಮಾಡಿದ್ದು ಮಂಚು ಲಕ್ಷ್ಮೀ ಯವರೇ ಎಂದರೇ ತಪ್ಪಾಗಲಾರದು. ಇನ್ನೂ ಸಿನೆಮಾಗಳ ಜೊತೆಗೆ ಆಕೆ ಅನೇಕ ಸೇವಾ ಕಾರ್ಯಕ್ರಮಗಳನ್ನು ಸಹ ಮಾಡುತ್ತಿರುತ್ತಾರೆ. ಸಿನಿರಂಗದಲ್ಲಿ ಮಂಚು ಲಕ್ಷ್ಮೀ ಅಂದರೇ ಅನೇಕ ನಟ-ನಟಿಯರು ಗೌರವ ಕೊಡುತ್ತಿರುತ್ತಾರೆ.

ಸದ್ಯ ಮಂಚು ಲಕ್ಷ್ಮೀಗೆ ಸಿನೆಮಾಗಳ ಅವಕಾಶಗಳು ಕಡಿಮೆಯಾಗಿದೆ ಎನ್ನಲಾಗಿದೆ. ಅವಕಾಶಗಳಿಗಾಗಿ ಆಕೆ ಭಾರಿ ಪ್ರಯತ್ನಗಳನ್ನು ಸಹ ಮಾಡುತ್ತಿದ್ದಾರೆ. ಈ ಹಾದಿಯಲ್ಲೇ ಆಕೆ ಮುಂಬೈನಲ್ಲಿ ಮೊಕ್ಕಾಂ ಹೂಡಿ ಅವಕಾಶಗಳಿಗಾಗಿ ಬೇಟೆ ಶುರು ಮಾಡಿದ್ದಾರೆ. ಇದೀಗ ಸಂದರ್ಶನವೊಂದರಲ್ಲಿ ಮಂಚು ಲಕ್ಷ್ಮೀ ಕೆಲವೊಂದು ಕಾಮೆಂಟ್ಸ್ ಮಾಡಿದ್ದು, ಕಾಮೆಂಟ್ ಗಳು ಸಖತ್ ವೈರಲ್ ಆಗುತ್ತಿವೆ. ಟಾಲಿವುಡ್ ಸಿನಿರಂಗದಲ್ಲಿ ಮಂಚು ಲಕ್ಷ್ಮೀ ಒಳ್ಳೆಯ ಹೆಸರು ಪಡೆದುಕೊಂಡಿದ್ದಾರೆ. ಅದನ್ನು ಆಕೆ ವಿಭಿನ್ನವಾಗಿ ಹೇಳಿದ್ದಾರೆ. ಹೈದರಾಬಾದ್ ನಲ್ಲಾದರೇ ನನ್ನನ್ನು ನೋಡಿ ನಿಂತುಕೊಳ್ಳುತ್ತಾರೆ. ಆದರೆ ಮುಂಬೈನಲ್ಲಿ ಪ್ರತಿಯೊಂದನ್ನು ಮೊದಲಿನಿಂದ ಪ್ರಾರಂಭಿಸಬೇಕು. ನನ್ನನ್ನು ನಾನು ಪರಿಚಯಿಸಿಕೊಳ್ಳಬೇಕು. ಆದರೆ ನನಗೆ ಚಾಲೆಂಜ್ ಮಾಡುವುದೆಂದರೇ ಇಷ್ಟ. ಸದಾ ಒಂದೇ ಸ್ಥಾನದಲ್ಲಿರಬೇಕು ಎಂದರೇ ನನಗೆ ಇಷ್ಟವಿಲ್ಲ ಎಂದು ಮಂಚು ಲಕ್ಷ್ಮೀ ಕಾಮೆಂಟ್ ಮಾಡಿದ್ದಾರೆ. ಆಕೆಯ ಈ ಕಾಮೆಂಟ್ ಗಳು ಸೋಷಿಯಲ್ ಮಿಡಿಯಾದಲ್ಲಿ ವಯರಲ್ ಆಗುತ್ತಿದೆ.

ಇನ್ನೂ ಮುಂಬೈನಲ್ಲಿ ಮನೆ ದೊರೆಯುವುದು ತುಂಬಾನೆ ಕಷ್ಟ. ನನ್ನ ಬೆಸ್ಟ್ ಪ್ರೆಂಡ್ ರಕುಲ್ ಪ್ರೀತ್ ಸಿಂಗ್ ಸಹಾಯ ಮಾಡಿದಳು. ನನಗಾಗಿ ಸುಮಾರು 100 ಮನೆಗಳನ್ನು ಹುಡುಕಿದ್ದಾಳೆ. ಅದರಲ್ಲಿ ಉತ್ತಮವಾದ ಮನೆಯನ್ನು ಆಯ್ಕೆ ಮಾಡಿಕೊಂಡೆ. ಅಮೇರಿಕಾದಲ್ಲೂ ನಾನು ಕೆಲವೊಂದು ಶೋ ಗಳನ್ನು ಮಾಡಿದ್ದೇನೆ. ಸೌತ್ ಇಂಡಸ್ಟ್ರಿಯಲ್ಲಿ ಈಗಾಗಲೇ ಕೆಲವೊಂದು ಸಿನೆಮಾಗಳನ್ನು ಮಾಡಿದ್ದು, ಹಿಂದಿಯಲ್ಲಿ ಮಾತನಾಡುವುದು, ಇಲ್ಲಿ ಇದ್ದು ಅವಕಾಶಗಳನ್ನು ಸಾಧಿಸುವುದು ನನಗೆ ನಿಜವಾದ ಚಾಲೆಂಜ್ ಎಂದು ಹೇಳಿದ್ದಾರೆ.