ಮತ್ತೊಮ್ಮೆ ನಿಗೂಡಾರ್ಥದ ಪೋಸ್ಟ್ ಮಾಡಿದ ನಯನತಾರಾ, IM LOST ಎಂದ ನಯನತಾರಾ, ಏಕೆ ಎಂದ ಫ್ಯಾನ್ಸ್…..!

ಸಿನಿರಂಗದಲ್ಲಿ ಲವ್-ಬ್ರೇಕಪ್, ಮದುವೆ-ವಿಚ್ಚೇದನ ಎಲ್ಲವೂ ನಡೆದು ಹೋಗುತ್ತಿರುತ್ತವೆ. ಈ ಹಾದಿಯಲ್ಲೇ ಕೆಲವು ದಿನಗಳ ಹಿಂದೆಯಷ್ಟೆ ನಟಿ ನಯನತಾರಾ ಹಾಗೂ ವಿಘ್ನೇಶ್ ಶಿವನ್ ವಿಚ್ಚೇದನ ಪಡೆದುಕೊಳ್ಳಲಿದ್ದಾರೆ ಎಂಬ ಸುದ್ದಿಯೊಂದು ಹರಿದಾಡಿತ್ತು. ಅದರ ಬೆನ್ನಲ್ಲೆ ಅವರಿಬ್ಬರ ನಡುವೆ ಯಾವುದೇ ಸಮಸ್ಯೆಯಿಲ್ಲ ಎಂದು ವಿಡಿಯೋ ಒಂದನ್ನು ಹಂಚಿಕೊಂಡು ಸ್ಪಷ್ಟನೆ ನೀಡಿದ್ದರು. ಇದೀಗ ಮತ್ತೊಂದು ನಿಗೂಡಾರ್ಥ ಬರುವಂತಹ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ಪೊಸ್ಟ್ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಸೌತ್ ಸಿನಿರಂಗದ ಲೇಡಿ ಸೂಪರ್‍ ಸ್ಟಾರ್‍ ನಯನತಾರಾ ಹಾಗೂ ಖ್ಯಾತ ನಿರ್ದೇಶಕ ವಿಘ್ನೇಶ್ ಶಿವನ್ ಕಳೆದ 2022 ಜೂನ್ 9 ರಂದು ಅದ್ದೂರಿಯಾಗಿ ಮದುವೆಯಾದರು. ಮದುವೆಯಾದಾಗಿನಿಂದ ಈ ಜೋಡಿ ಒಂದಲ್ಲ ಒಂದು ಕಾರಣದಿಂದ ವಿವಾದಗಳ ಮೂಲಕ ಸುದ್ದಿಯಾಗುತ್ತಿದ್ದಾರೆ. ಅವರು ಕಳೆದ ವರ್ಷ ಸೆರಗೋಸಿ ಪದ್ದತಿಯ ಮೂಲಕ ಅವಳಿ ಗಂಡು ಮಕ್ಕಳನ್ನು ಪಡೆದುಕೊಂಡರು. ಇದರಿಂದಲೂ ಅವರು ಕೆಲವೊಂದು ವಿವಾದಗಳಿಗೆ ಗುರಿಯಾದರು. ಎಲ್ಲವನ್ನೂ ಮೆಟ್ಟಿ ನಿಂತು ಅನ್ಯೋನ್ಯತೆಯಿಂದ ಜೀವನ ಸಾಗಿಸುತ್ತಿದ್ದರು. ಸೋಷಿಯಲ್ ಮಿಡಿಯಾದಲ್ಲಿ ಸಹ ಆಕ್ಟೀವ್ ಆಗಿರುವ ಈ ಜೋಡಿ ಅನೇಕ ಪೊಟೋಗಳನ್ನು ಹಂಚಿಕೊಳ್ಳುತ್ತಿದ್ದರು. ತಮ್ಮ ಸಂತಸದ ಕ್ಷಣಗಳನ್ನು ಸೋಷಿಯಲ್ ಮಿಡಿಯಾ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿದ್ದರು. ತಮ್ಮ ಕುಟುಂಬದೊಂದಿಗೆ ಖುಷಿಯಾಗಿ ಜೀವನ ಸಾಗಿಸುತ್ತಿದ್ದಾರೆ. ಆದರೆ ಕಳೆದೆರಡು ದಿನಗಳ ಹಿಂದೆ ಈ ಜೋಡಿ ಬೇರೆಯಾಗಲಿದ್ದಾರೆ ಎಂಬ ಸುದ್ದಿಯೊಂದು ವೈರಲ್ ಆಗಿತ್ತು.

ಕಳೆದೆರಡು ದಿನಗಳ ಹಿಂದೆ ವಿಘ್ನೇಶ್ ಶಿವನ್ ರವರನ್ನು ನಯನತಾರಾ ತಮ್ಮ ಇನ್ಸ್ಟಾ ಖಾತೆಯಲ್ಲಿ ಅನ್ ಫಾಲೋ ಮಾಡಿದ್ದರು ಎಂದಬ ಸುದ್ದಿ ವೈರಲ್ ಆಗಿತ್ತು. ಬಳಿಕ ಅವರು ಮತ್ತೆ ಫಾಲೋ ಮಾಡಿದರು. ಈ ವಿವಾದಕ್ಕೆ ಉತ್ತರ  ಎಂಬಂತೆ ವಿಘ್ನೇಶ್ ಕೊಳಲು ವಾದಕರೊಬ್ಬರ ವಾದನ ಕೇಳುತ್ತಾ ನಯನ್ ಹಾಗೂ ವಿಕ್ಕಿ ಮುದ್ದಾಡುತ್ತಾ ಇರುವ ವಿಡಿಯೋ ಒಂದನ್ನು ಹಂಚಿಕೊಂಡಿದ್ದರು. ಆ ಮೂಲಕ ಎಲ್ಲವೂ ಫೇಕ್ ಸುದ್ದಿ ಎಂದು ತಿಳಿದುಬಂತು. ಈ ನಡುವೆ ಮತ್ತೆ ನಯನತಾರಾ ಇನ್ಸ್ಟಾ ಸ್ಟೋರಿಯಲ್ಲಿ ಹಂಚಿಕೊಂಡ ಪೋಸ್ಟ್ ಇಂಟರ್‍ ನೆಟ್ ನಲ್ಲಿ ಮತ್ತೆ ಸದ್ದು ಮಾಡುತ್ತಿದೆ. umm… I’m Lost! ಎಂದು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಮೂಲಕ ಈ ನಿಗೂಡ ಪೋಸ್ಟ್ ನ ಅರ್ಥವಾದರೂ ಏನು ಎಂಬ ಗೊಂದಲಕ್ಕೀಡಾಗಿದ್ದಾರೆ ಆಕೆಯ ಫ್ಯಾನ್ಸ್.

ಸದ್ಯ ನಯನತಾರಾ ಹಂಚಿಕೊಂಡ ಪೋಸ್ಟ್ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ನಯನತಾರಾ ಏಕೆ ಈ ರೀತಿಯ ಪೋಸ್ಟ್ ಹಾಕಿದ್ದಾರೆ. ನಯನತಾರಾ ಜೊತೆಗೆ ಯಾರಾದರೂ ಮಾತನಾಡಿ, ಅವರು ಮೊದಲಿನಂತೆ ಬದಲಾಗಬೇಕು. ಇದು ಸಿನೆಮಾ ಪ್ರಚಾರವೋ ಅಥವಾ ನಿಜಕ್ಕೂ ನಯನತಾರಾ ಜೀವನದಲ್ಲಿ ಸಮಸ್ಯೆ ಏನಾದರೂ ಹುಟ್ಟಿಕೊಂಡಿದೆಯೇ ಎಂಬೆಲ್ಲಾ ಪ್ರಶ್ನೆಗಳನ್ನು ಕಾಮೆಂಟ್ ರೂಪದಲ್ಲಿ ಹರಿಬಿಡುತ್ತಿದ್ದಾರೆ.