ನನ್ನನ್ನು ಖರೀದಿ ಮಾಡಿ ನಿಮ್ಮ ಮಗನನ್ನು ಸ್ಲಿಮ್ ಮಾಡುತ್ತೇನೆ ಎಂದ ರಾಖಿ ಸಾವಂತ್, ಅನಂತ್ ಅಂಬಾನಿ ದೇಹದ ಬಗ್ಗೆ ಕಾಮೆಂಟ್ ಮಾಡಿದ ನಟಿ…..!

Follow Us :

ಕೆಲವು ದಿನಗಳ ಹಿಂದೆಯಷ್ಟೆ ಇಡೀ ವಿಶ್ವವೇ ಬೆರಗಾಗುವಂತೆ ಮುಕೇಶ್ ಅಂಬಾನಿ ತಮ್ಮ ಪುತ್ರ ಅನಂತ್ ಅಂಬಾನಿ ಮದುವೆಯನ್ನು ಮಾಡಿದರು. ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಮದುವೆಯ ಖರ್ಚು ಬರೊಬ್ಬರಿ 1200 ಕೋಟಿಗೂ ಹೆಚ್ಚಾಗಿದೆ ಎಂದು ಸುದ್ದಿಗಳು ಕೇಳಿಬರುತ್ತಿದೆ. ಹಾಲಿವುಡ್ ಪಾಪ್ ಸಿಂಗರ್‍ ರಿಹಾನಾ ಗೆ ಬರೊಬ್ಬರಿ 50 ಕೋಟಿ ನೀಡಿದ್ದಾರೆ ಎಂದೂ ಸಹ ಹೇಳಲಾಗುತ್ತಿದೆ. ಇದೀಗ ಅನಂತ್ ಅಂಬಾನಿ ದೇಹದ ಬಗ್ಗೆ ನಟಿ ರಾಖಿ ಸಾವಂತ್ ಕಾಮೆಂಟ್ ಮಾಡಿದ್ದು, ಆಕೆಯ ಕಾಮೆಂಟ್ ಗಳು ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.

ಸದಾ ಒಂದಲ್ಲ ಒಂದು ಕಾಂಟ್ರವರ್ಸಿ ಮಾಡುವ ನಟಿ ರಾಖಿ ಸಾವಂತ್ ಇದೀಗ ಅನಂತ್ ಅಂಬಾನಿ ಬಗ್ಗೆ ಮಾತನಾಡಿ ಸುದ್ದಿಯಾಗಿದ್ದಾರೆ. ಅನಂತ್ ಅಂಬಾನಿ ಹೆಚ್ಚು ತೂಕವನ್ನು ಹೊಂದಿದ್ದಾರೆ. ಬೃಹದಾಕಾರದ ದೇಹವನ್ನು ಹೊಂದಿ ಅವರು ಸಮಸ್ಯೆ ಎದುರಿಸುತ್ತಿದ್ದಾರೆ ಎನ್ನಲಾಗಿದೆ. ಇದೀಗ ರಾಖಿ ಸಾವಂತ್ ಅಂಬಾನಿ ತನ್ನನ್ನು 5 ದಿನಗಳಿಗೆ ಖರೀದಿ ಮಾಡಿದರೇ ಅನಂತ್ ಅಂಬಾನಿಯನ್ನು ಸ್ಲಿಮ್ ಆಗಿ ಕಡ್ಡಿಯಂತೆ ತಯಾರು ಮಾಡಿ ಕಳುಹಿಸುತ್ತೇನೆ ಎಂದು ಹೇಳಿದ್ದಾರೆ. ಈ ಸಂಬಂಧ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಅಷ್ಟಕ್ಕೂ ರಾಖಿ ಸಾವಂತ್ ಹಂಚಿಕೊಂಡ ವಿಡಿಯೋದಲ್ಲಿ ಏನಿದೆ ಎಂಬ ವಿಚಾರಕ್ಕೆ ಬಂದರೇ,

ರಾಖಿ ಸಾವಂತ್ ಹಂಚಿಕೊಂಡ ವಿಡಿಯೋದಲ್ಲಿ ಅಂಬಾನಿಜಿ ನಮಸ್ತೆ, ನಾನು ನಿಮಗೆ ತುಂಬಾ ಉಪಯೋಗಕ್ಕೆ ಬರುತ್ತೇನೆ. ನನ್ನನ್ನು ನೀವು 5 ದಿನಗಳ ಕಾಲ ಖರೀದಿಸಿ, ಅನಂತ್ ಅಂಬಾನಿಯನ್ನು ನನ್ನ ಹತ್ತಿರ ಕಳುಹಿಸಿ, ಆತ ತುಂಬಾ ದಪ್ಪ ಇದ್ದಾರೆ. ನಿಮ್ಮ ಸೊಸೆ ದಾಳಿಂಬೆ ಹಣ್ಣಿನ ಮಾದರಿಯಲ್ಲಿದ್ದಾರೆ. ಅದಕ್ಕಾಗಿ ನನ್ನ ಬಳಿ 5 ದಿನ ಅನಂತ್ ರವರನ್ನು ಕಳುಹಿಸಿ. ಆತನಿಗೆ ಎಂತಹ ಎಕ್ಸರ್‍ಸೈಜ್ ಮಾಡಿಸುತ್ತೇನೆ ಎಂದರೇ ಆತ ತುಂಬಾ ತೃಪ್ತಿ ಪಡುತ್ತಾರೆ. ಜೊತೆಗೆ ಸಣ್ಣ ಆಗುತ್ತಾರೆ. ನಾನು ಏನು ಮಾಡುತ್ತಾನೋ ನೀವೆ ಅರ್ಥ ಮಾಡಿಕೊಳ್ಳಿ. 100 ರಲ್ಲಿ 10 ತೆಗೆದರೇ ಸೊನ್ನೆ ಮಾತ್ರ ಉಳಿಯುತ್ತದೆ. ನಿಮ್ಮ ಮಗ ಜಿರೋ ಸೈಜ್ ಆಗುತ್ತಾರೆ. ಆಗ ನಿಮ್ಮ ಸೊಸೆ ಸಹ ಪುಲ್ ಖುಷಿಯಾಗುತ್ತಾರೆ. ನನ್ನನ್ನು ಕೂಡಲೇ ಖರೀದಿ ಮಾಡಿ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಇನ್ನೂ ರಾಖಿ ಸಾವಂತ್ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ. ಅನಂತ್ ಅಂಬಾನಿ ಆರೋಗ್ಯ ಸಮಸ್ಯೆಯಿಂದ ನೋವು ಪಡುತ್ತಿದ್ದಾರೆ. ಅಂತಹ ವ್ಯಕ್ತಿಯ ಬಗ್ಗೆ ಈ ರೀತಿಯಾಗಿ ಕೆಟ್ಟದಾಗಿ ಮಾತನಾಡುವುದು ಸರಿಯಲ್ಲ. ನಿನಗೆ ನಾಚಿಕೆಯಿಲ್ಲವೇ ಎಂದು ಆಕೆಯ ವಿರುದ್ದ ಆಕ್ರೋಷ ಹೊರಹಾಕುತ್ತಿದ್ದಾರೆ.