ಸ್ಟಾರ್ ನಟರೂ ಶಾಕ್ ಆಗುವಂತಹ ಸಂಭಾವನೆ ಪಡೆಯುತ್ತಾರೆ ನಯನತಾರಾ, ಸೌತ್ ಸಿನಿರಂಗದಲ್ಲೇ ಅತೀ ಹೆಚ್ಚು ಸಂಭಾವನೆ ಪಡೆಯುತ್ತಾರೆ ಲೇಡಿ ಸ್ಟಾರ್…..!

ಸೌತ್ ಸಿನಿರಂಗದಲ್ಲಿ ಮದುವೆಯಾದರು ಸ್ಟಾರ್‍ ನಟಿಯಾಗಿ ಮುನ್ನುಗ್ಗುತ್ತಿರುವವರಲ್ಲಿ ನಯನತಾರಾ ಮೊದಲ ಸ್ಥಾನದಲ್ಲಿರುತ್ತಾರೆ. ಮದುವೆಯಾದರು ದುಬಾರಿ ಸಂಭಾವನೆಯನ್ನು ಪಡೆದುಕೊಳ್ಳುತ್ತಾ ಸಾಲು ಸಾಲು ಆಫರ್‍ ಗಳನ್ನು ಗಿಟ್ಟಿಸಿಕೊಳ್ಳುತ್ತಿದ್ದಾರೆ. ಸೌತ್ ಸಿನಿರಂಗದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆದುಕೊಳ್ಳುವ ಟಾಪ್ ಸ್ಥಾನದಲ್ಲಿ ನಯನತಾರಾ ಇರುತ್ತಾರೆ. ಆಕೆಯ ಸಂಭಾವನೆ ಎಷ್ಟು ಎಂಬುದನ್ನು ಕೇಳಿ ಸ್ಟಾರ್‍ ನಟರೂ ಸಹ ಶಾಕ್ ಆಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಸಿನಿರಂಗದಲ್ಲಿ ಲೇಡಿ ಸೂಪರ್‍ ಸ್ಟಾರ್‍ ಎಂಬ ಟ್ಯಾಗ್ ಪಡೆದುಕೊಂಡಿದ್ದ ನಟಿಯರಲ್ಲಿ ಕೆಲವೇ ಮಂದಿ ಇರುತ್ತಾರೆ. ಈ ಹಿಂದೆ ಸೀನಿಯರ್‍ ನಟಿ ಸಾವಿತ್ರಿ, ದಿವಂಗತ ಶ್ರೀದೇವಿ, ವಿಜಯ ಶಾಂತಿ ರವರಂತಹ ಬೆರಳಣಿಕೆಯಷ್ಟು ನಟಿಯರು ಮಾತ್ರ ಲೇಡಿ ಸೂಪರ್‍ ಸ್ಟಾರ್‍ ಟ್ಯಾಗ್ ಪಡೆದುಕೊಂಡಿದ್ದರು. ಅನೇಕ ಸೂಪರ್‍ ಹಿಟ್ ಸಿನೆಮಾಗಳಲ್ಲಿ ಅದ್ಬುತವಾಗಿ ನಟಿಸಿ ಫೇಂ ಪಡೆದುಕೊಂಡ ನಯನತಾರಾ ಲೇಡಿ ಸೂಪರ್‍ ಸ್ಟಾರ್‍ ಆಗಿ ಫೇಂ ಪಡೆದುಕೊಂಡಿದ್ದಾರೆ  ಕೆಲವು ತಿಂಗಳುಗಳ ಹಿಂದೆಯಷ್ಟೆ ನಯನತಾರಾ ನಿರ್ದೇಶಕ ವಿಘ್ನೇಶ್ ಶಿವನ್ ಜೊತೆಗೆ ಸಪ್ತಪದಿ ತುಳಿದರು. ಮದುವೆಯಾದ ಬಳಿಕವೂ ಸಹ ಭಾರಿ ಸಿನೆಮಾಗಳಲ್ಲಿ ನಟಿಸುತ್ತಾ ಸಕ್ಸಸ್ ಕಂಡುಕೊಳ್ಳುತ್ತಾ ಕೆರಿಯರ್‍ ಸಾಗಿಸುತ್ತಿದ್ದಾರೆ. ಮದುವೆಯಾದರೂ ಸಹ ಆಕೆಯ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ ಎಂದೇ ಹೇಳಲಾಗುತ್ತದೆ.

ಲೇಡಿ ಸೂಪರ್‍ ಸ್ಟಾರ್‍ ನಯನತಾರಾ ಕಮರ್ಷಿಯಲ್ ಸಿನೆಮಾಗಳ ಜೊತೆಗೆ ಲೇಡಿ ಓರಿಯೆಂಟೆಡ್ ಸಿನೆಮಾಗಳಲ್ಲೂ ಸಹ ನಟಿಸುತ್ತಾ ಬ್ಯುಸಿಯಾಗಿದ್ದಾರೆ. ಆಕೆ ಇತ್ತೀಚಿಗೆ ಜವಾನ್ ಸಿನೆಮಾದ ಮೂಲಕ ಒಳ್ಳೆಯ ಸಕ್ಸಸ್ ಕಂಡುಕೊಂಡರು. ಈ ಸಿನೆಮಾಗಿಂತ ಮುಂಚೆ ಆಕೆ ಗಾಡ್ ಫಾದರ್‍, ಮಲಯಾಳಂನಲ್ಲಿ ಗೋಲ್ಡ್, ತಮಿಳಿನಲ್ಲಿ ಕನೆಕ್ಟ್, ಕಾಥುವಾಕು ರೆಂಡು ಕಾದಲ್, ರಜನಿಮಾಖತ್ ಅನ್ನಾತ್ತೆ, ನೆಟರಿಕನ್, ನಿಜಲ್, ಆರಡುಗುಲ ಬುಲ್ಲೆಟ್, ಇರೈವನ್ ಅನ್ನಪೂರನಿ ಮೊದಲಾದ ಸಿನೆಮಾಗಳಲ್ಲಿ ನಟಿಸಿದ್ದು, ಈ ಸಿನೆಮಾಗಳು ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿತ್ತು. ಇದೀಗ ನಯನತಾರಾ ತೆಗೆದುಕೊಳ್ಳುತ್ತಿರುವ ಸಂಭಾವನೆ ವಿಚಾರ ಹಾಟ್ ಟಾಪಿಕ್ ಆಗಿದೆ. ಹಿಟ್, ಫ್ಲಾಪ್ ಗಳಿಗೆ ಸಂಬಂಧವಿಲ್ಲದೇ ಆಕೆ ಭಾರಿ ರೆನ್ಯುಮರೇಷನ್ ಪಡೆದುಕೊಳ್ಳುತ್ತಿದ್ದಾರೆ.

ಇನ್ನೂ ನಟಿ ನಯನತಾರಾ ಪಡೆದುಕೊಳ್ಳುತ್ತಿರುವ ಸಂಭಾವನೆಯ ವಿಚಾರವೊಂದು ಲೀಕ್ ಆಗಿದೆ. ಆಕೆ ಸಿನೆಮಾ ಒಂದಕ್ಕೆ ಬರೊಬ್ಬರಿ 12 ಕೋಟಿವರೆಗೂ ಸಂಭಾವನೆ ಡಿಮ್ಯಾಂಡ್ ಮಾಡುತ್ತಾರಂತೆ. ಪಾತ್ರ, ಪಾತ್ರದ ಪ್ರಿಯಾರಿಟಿಯನ್ನು ಗಮನದಲ್ಲಿಟ್ಟುಕೊಂಡು ಆಕೆ ಹತ್ತರಿಂದ ಹನ್ನೆರಡು ಕೋಟಿಯವರೆಗೂ ಸಂಭಾವನೆ ಪಡೆದುಕೊಳ್ಳುತ್ತಾರೆ ಎಂದು ಹೇಳಲಾಗುತ್ತಿದೆ.  ಇದು ಸೌತ್ ನಲ್ಲಿರುವ ಸ್ಟಾರ್‍ ನಟಿಯರಿಗಿಂತ ಅದರಲ್ಲೂ ಕೆಲವು ಸ್ಟಾರ್‍ ನಟರಿಗಿಂತಲೂ ಆಕೆ ಹೆಚ್ಚು ಸಂಭಾವನೆ ಡಿಮ್ಯಾಂಡ್ ಮಾಡುತ್ತಾರೆ ಎಂದು ಸುದ್ದಿ ಹರಿದಾಡುತ್ತಿದೆ.