Film News

ಮೈಕೊರೆಯುವ ಚಳಿಯಲ್ಲೂ ಬಿಕಿನಿ ಧರಿಸಿ ಬಿಸಿಯನ್ನೇರಿಸಿದ ಮಂಚು ಲಕ್ಷ್ಮೀ, ವೈರಲ್ ಆದ ಹಾಟ್ ವಿಡಿಯೋ……!

ಟಾಲಿವುಡ್ ಸಿನಿರಂಗದ ದೊಡ್ಡ ಕುಟುಂಬಗಳಲ್ಲಿ ಒಂದಾದ ಮಂಚು ಕುಟುಂಬದ ಮಂಚು ಲಕ್ಷ್ಮೀ ನಲವತ್ತರ ವಯಸ್ಸಿನಲ್ಲೂ ಸಹ ಗ್ಲಾಮರಸ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ತನ್ನಲ್ಲಿನ ಗ್ಲಾಮರ್‍ ಎಂಬ ಅಂಗವನ್ನು ಇದೀಗ ಶೋ ಮಾಡುತ್ತಿದ್ದಾರೆ. ಸೋಷಿಯಲ್ ಮಿಡಿಯಾ ವೇದಿಕೆಯನ್ನಾಗಿಸಿಕೊಂಡು ಆಕೆ ನೆವರ್‍ ಬಿಪೋರ್‍ ಅನ್ನೋ ಹಾಗೆ ಹಾಟ್ ಟ್ರೀಟ್ ನೀಡುತ್ತಿದ್ದಾರೆ. ಸಿನೆಮಾಗಳಲ್ಲಿ ಸಕ್ಸಸ್ ಕಾಣಲು ಆಕೆ ಬಾಲಿವುಡ್ ನತ್ತ ಸಹ ಮುಖಮಾಡಿದ್ದಾರೆ. ಇದೀಗ ಆಕೆ ಮೈ ಕೊರೆಯುವ ಚಳಿಯಲ್ಲಿ ಬಿಕಿನಿ ಧರಿಸಿ ಹಾಟ್ ಪೋಸ್ ಕೊಟ್ಟಿದ್ದು, ಈ ವಿಡಿಯೋ ಇದೀಗ ವೈರಲ್ ಆಗುತ್ತಿದೆ.

ಮೋಹನ್ ಬಾಬು ಪುತ್ರಿ ಮಂಚು ಲಕ್ಷ್ಮೀ ಸಹ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಆಕ್ಟೀವ್ ಆಗಿರುತ್ತಾರೆ. ಒಂದಲ್ಲ ಒಂದು ರೀತಿಯ ಪೋಸ್ಟ್ ಗಳನ್ನು ಹಂಚಿಕೊಳ್ಳುತ್ತಾ ಸುದ್ದಿಯಾಗುತ್ತಿರುತ್ತಾರೆ. ಮಂಚು ಕುಟುಂಬದ ಲಕ್ಷ್ಮೀ ಏನೆ ಮಾಡಿದರೂ ಸಹ ವಿಭಿನ್ನವಾಗಿಯೇ ಮಾಡುತ್ತಾರೆ. ಅಮೇರಿಕಾದಲ್ಲೂ ಸಹ ಆಕೆ ಬಣ್ಣದ ಲೋಕದಲ್ಲಿ ನಟಿಸಿದ್ದರು. ಅಮೇರಿಕಾದಲ್ಲಿ ಕೆಲವೊಂದು ಶೋಗಳ ಮೂಲಕ ಹಾಗೂ ಕೆಲವೊಂದು ಸಿರೀಸ್ ಗಳಲ್ಲೂ ಸಹ ನಟಿಸಿದ್ದಾರೆ. ಸದ್ಯ ಆಕೆ ಸಿನೆಮಾಗಳ ಅವಕಾಶಗಳನ್ನು ಪಡೆದುಕೊಳ್ಳಲು ಮುಂಬೈನಲ್ಲಿ ಸೆಟಲ್ ಆಗಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಹಾದಿಯಲ್ಲೇ ಆಕೆ ಬ್ಯಾಕ್ ಟು ಬ್ಯಾಕ್ ಹಾಟ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಾ ಮೇಕರ್ಸ್ ಗಮನ ಸೆಳೆಯುತ್ತಿದ್ದಾರೆ ಎನ್ನಲಾಗಿದೆ.

ಇದೀಗ ಮಂಚು ಲಕ್ಷ್ಮೀ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದಾರೆ. ಫಿನ್ ಲ್ಯಾಂಡ್ ವೆಕೇಷನ್ ನಲ್ಲಿರುವ ಮಂಚು ಲಕ್ಷ್ಮೀ ಐಸ್ ವಾಟರ್‍ ನಲ್ಲಿ ಬಿಕಿನಿಯಲ್ಲಿ ಮುಳುಗುತ್ತಾ ಕಾಣಿಸಿಕೊಂಡಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ. ಅದರಲ್ಲೂ ಕೆಲವರು ಈ ವಿಡಿಯೋ ಬಗ್ಗೆ ವಿಮರ್ಶೆ ಮಾಡುತ್ತಿದ್ದಾರೆ. ಐಸ್ ಬಾತ್ ಮಾಡುವಂತಹ ವಿಡಿಯೋ ಕಂಡ ಅನೇಕರು ಮಂಚು ಲಕ್ಷ್ಮೀ ಮಂಜಿನಲ್ಲಿ ಮುಳಗುತ್ತಿದ್ದಾರೆ ಎಂದು ಕಾಮೆಂಟ್ಸ್ ಮಾಡುತ್ತಿದ್ದಾರೆ. ಗಡ್ಡೆಯಾಗುವಂತಹ ಚಳಿಯಲ್ಲಿ ಮಂಚು ಲಕ್ಷ್ಮೀ ಐಸ್ ಬಾತ್ ಚಾಲೆಂಜ್ ತೆಗೆದುಕೊಂಡಿದ್ದು. ಅನೇಕರು ಮೆಚ್ಚುಗೆ ಸಹ ವ್ಯಕ್ತಪಡಿಸುತ್ತಿದ್ದಾರೆ. 46ರ ವಯಸ್ಸಿನಲ್ಲಿ ಮಂಚು ಲಕ್ಷ್ಮೀ ಐಸ್ ಬಾತ್ ಮಾಡಿದ್ದು ದೊಡ್ಡ ಸಾಧನೆ ಎಂದು ಅನೇಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

Most Popular

To Top