ಯಾವ ಸಿನೆಮಾ ಹಿಟ್ ಆಗುತ್ತದೆ, ಯಾವ ಸಿನೆಮಾ ಫ್ಲಾಪ್ ಆಗುತ್ತದೆ ಅನ್ನೋದು ನನಗೆ ಗೊತ್ತು ಎಂದ ನಯನತಾರಾ, ವೈರಲ್ ಆದ ಕಾಮೆಂಟ್ಸ್…..!

Follow Us :

ಸೌತ್ ಸಿನಿರಂಗದಲ್ಲಿ ಮದುವೆಯಾದರೂ ಸಹ ಭಾರಿ ಆಫರ್‍ ಗಳನ್ನು ಪಡೆದುಕೊಳ್ಳುತ್ತಿರುವ ನಯನತಾರಾ ಲೇಡಿ ಸೂಪರ್‍ ಸ್ಟಾರ್‍ ಆಗಿಯೇ ಫೇಮಸ್ ಆಗಿದ್ದಾರೆ. ತುಂಬಾ ಕಷ್ಟ ಪಟ್ಟು ಸಿನಿರಂಗದಲ್ಲಿ ಬೆಳೆದು ಇದೀಗ ಲೇಡಿ ಸೂಪರ್‍ ಸ್ಟಾರ್‍ ಆಗಿ ಅನೇಕ ಸ್ಟಾರ್‍ ನಟರ ಸಿನೆಮಾಗಳಲ್ಲಿ ನಟಿಸಿ ಅನೇಕ ಹಿಟ್ ಗಳನ್ನು ನೀಡಿದ್ದಾರೆ. ಇತ್ತೀಚಿಗೆ ಬ್ಲಾಕ್ ಬ್ಲಸ್ಟರ್‍ ಹಿಟ್ ಪಡೆದುಕೊಂಡ ಜವಾನ್ ಸಿನೆಮಾದ ಬಗ್ಗೆ ನಯನತಾರಾ ಕೆಲವೊಂದು ಕಾಮೆಂಟ್ ಗಳನ್ನು ಮಾಡಿದ್ದು, ಆಕೆಯ ಕಾಮೆಂಟ್ ಗಳು ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ಲೇಡಿ ಸೂಪರ್‍ ಸ್ಟಾರ್‍ ನಯನತಾರಾ ಜವಾನ್ ಸಿನೆಮಾದ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ಟರು. ಈ ಸಿನೆಮಾ ಬ್ಲಾಕ್ ಬ್ಲಸ್ಟರ್‍ ಹಿಟ್ ಪಡೆದುಕೊಂಡಿತ್ತು. ಸಿನೆಮಾ ಬಿಡುಗಡೆಯಾಗಿ ವರ್ಷ ಕಳೆದರೂ ಇನ್ನೂ ಸಿನೆಮಾದ ಮೇಲೆ ಟಾಕ್ ಕೇಳಿಬರುತ್ತಿದೆ. ತಮಿಳು ನಿರ್ದೇಶಕ ಅಟ್ಲಿ ನಿರ್ದೇಶನದಲ್ಲಿ ಈ ಸಿನೆಮಾ ತೆರೆಗೆ ಬಂದಿತ್ತು.  ಶಾರುಖ್ ಖಾನ್ ಈ ಸಿನೆಮಾದಲ್ಲಿ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಈ ಸಿನೆಮಾದಲ್ಲಿ ನಯನತಾರಾ ಜೊತೆಗೆ ಸ್ಟಾರ್‍ ನಟಿ ದೀಪಿಕಾ ಪಡುಕೋಣೆ ಸಹ ನಟಿಸಿದ್ದಾರೆ. ಸಿನೆಮಾದಲ್ಲಿ ದೀಪಿಕಾ ಪಡುಕೋಣೆ ಪಾತ್ರ ಹೈಲೈಟ್ ಎಂಬ ಮಾತುಗಳು ಕೇಳಿಬಂದಿತ್ತು. ಇದರಿಂದ ನಯನತಾರಾ ಮುನಿಸಿಕೊಂಡಿದ್ದರು ಎಂಬ ರೂಮರ್‍ ಗಳು ಸಹ ಕೇಳಿಬಂದವು. ಇದೀಗ ನಯನತಾರಾ ಜವಾನ್ ಸಿನೆಮಾದ ಬಗ್ಗೆ ಹಾಗೂ ಆಕೆಯ ಪಾತ್ರದ ಬಗ್ಗೆ ಕೆಲವೊಂದು ಇಂಟ್ರಸ್ಟಿಂಗ್ ಕಾಮೆಂಟ್ಸ್ ಮಾಡಿದ್ದಾರೆ.

ಜವಾನ್ ಸಿನೆಮಾದಲ್ಲಿ ನಟಿ ನಯನತಾರಾ ಪಾತ್ರಕ್ಕೆ ಒಳ್ಳೆಯ ಪ್ರಶಂಸೆಗಳು ಸಹ ದೊರೆತಿದೆ. ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ನಯನತಾರಾ ಮಾತನಾಡುತ್ತಾ, ನಾನು ಜವಾನ್ ನಂತಹ ಸಿನೆಮಾಗಾಗಿ ಕಾಯುತ್ತಿದೆ. ತುಂಬಾ ಕಾಸ್ಟ್ಲೀ ಹಾಗೂ ದೊಡ್ಡ ಮಟ್ಟದಲ್ಲಿ ಸಿನೆಮಾ ಇರಬೇಕೆಂದು, ನನ್ನ ಪಾತ್ರಕ್ಕೂ ತೂಕ ಇರಬೇಕು ಎಂದುಕೊಂಡಿದ್ದೆ. ಅದೇ ರೀತಿ ಈ ಸಿನೆಮಾ ಬಂತು. ಜವಾನ್ ಸಿನೆಮಾ ಮಾಡೋಕೆ ಪ್ರಮುಖ ಕಾರಣ ಶಾರುಖ್ ಖಾನ್ ರವರು. ಶಾರುಖ್ ರವರ ಜೊತೆ ನಟಿಸಬೇಕೆಂದು ಅನೇಕರು ಕಾಯುತ್ತಿರುತ್ತಾರೆ. ಅದೇ ಕಾರಣದಿಂದ ನಾನು ಜವಾನ್ ಸಿನೆಮಾ ಒಪ್ಪಿಕೊಂಡೆ. ನಾನೂ ಸಹ ಶಾರುಖ್ ರವರ ಅಭಿಮಾನಿ ಅವರ ಸಿನೆಮಾಗಳನ್ನು ನೋಡಿ ಬೆಳೆದಿದ್ದೇನೆ. ಅವರು ಮಹಿಳೆಯರನ್ನು ತುಂಬಾ ಗೌರವಿಸುತ್ತಾರೆ.

ಜವಾನ್ ಸಿನೆಮಾ ದೊಡ್ಡ ಮಟ್ಟದಲ್ಲಿ ಸಾಧನೆ ಮಾಡುತ್ತೆ ಎಂಬುದು ನನಗೆ ಗೊತ್ತು. ಇಷ್ಟು ವರ್ಷಗಳ ಕಾಲ ನಾನು ಸಿನೆಮಾಗಳಲ್ಲಿ ನಟಿಸುತ್ತಿದ್ದೇನೆ. ಯಾವ ಸಿನೆಮಾ ಹಿಟ್ ಆಗುತ್ತೆ, ಯಾವ ಸಿನೆಮಾ ಫ್ಲಾಪ್ ಆಗುತ್ತೆ ಎಂಬುದು ನನಗೆ ಗೊತ್ತು ಎಂದು ಹೇಳಿದ್ದಾರೆ. ಆಕೆಯ ಈ ಕಾಮೆಂಟ್ ಗಳು ಇದೀಗ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ. ಸದ್ಯ ಆಕೆ ಮನ್ನಂಗಟ್ಟಿ ಸೀನ್ಸ್ 1960 ಎಂಬ ಸಿನೆಮಾದಲ್ಲಿ ಬ್ಯುಸಿಯಾಗಿದ್ದಾರೆ.