Film News

ಇನ್ಸ್ಟಾ ಖಾತೆ ತೆರೆದ ಲೇಡಿ ಸೂಪರ್ ಸ್ಟಾರ್, ಮಕ್ಕಳ ಮುಖ ಪರಿಚಯಿಸಿದ ನಯನತಾರ, ವೈರಲ್ ಆದ ವಿಡಿಯೋ…!

ಸೌತ್ ಸಿನಿರಂಗದಲ್ಲಿ ಲೇಡಿ ಸೂಪರ್‍ ಸ್ಟಾರ್‍ ಎಂದೇ ಖ್ಯಾತಿ ಪಡೆದುಕೊಂಡಿರುವ ನಯನತಾರಾ ಮದುವೆಯಾದ ಬಳಿಕವೂ ಸಿನೆಮಾಗಳಲ್ಲಿ ನಟಿಸುತ್ತಾ ಕೆರಿಯರ್‍ ಸಾಗಿಸುತ್ತಿದ್ದಾರೆ. ಕಳೆದ ವರ್ಷವಷ್ಟೆ ನಯನತಾರಾ ಹಾಗೂ ವಿಘ್ನೇಶ್ ಮದುವೆ ಅದ್ದೂರಿಯಾಗಿ ನೆರವೇರಿದ್ದು, ಸೆರಗೋಸಿ ಪದ್ದತಿಯ ಮೂಲಕ ಅವಳಿ ಮಕ್ಕಳನ್ನು ಪಡೆದುಕೊಂಡರು. ಇನ್ನೂ ಆಕೆಯ ಕೆರಿಯರ್‍ ಆರಂಭದಿಂದಲೂ ಸೋಷಿಯಲ್ ಮಿಡಿಯಾದಿಂದ ದೂರವೇ ಉಳಿದ್ದಿದ್ದರು. ಇದೀಗ ನಯನತಾರಾ ಇನ್ಸ್ಟಾ ಖಾತೆ ತೆರೆದು ಅದರಲ್ಲಿ ತನ್ನ ಇಬ್ಬರೂ ಮಕ್ಕಳೊಂದಿಗೆ ವಿಡಿಯೋ ಮಾಡಿ ಹಂಚಿಕೊಂಡಿದ್ದಾರೆ. ಕಡಿಮೆ ಸಮಯದಲ್ಲೇ ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ.

ಲೇಡಿ ಸೂಪರ್‍ ಸ್ಟಾರ್‍ ನಯನತಾರಾ ಸೌತ್ ಸಿನಿರಂಗದಲ್ಲಿ ಅನೇಕ ಸೂಪರ್‍ ಹಿಟ್ ಸಿನೆಮಾಗಳ ಮೂಲಕ ಭಾರಿ ಫೇಂ ಪಡೆದುಕೊಂಡರು. ಆಕೆಯ ಸಮಕಾಲೀನರಾದ ನಟಿಯರು ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಆಕ್ಟೀವ್ ಆಗಿರುತ್ತಾರೆ. ಆದರೆ ನಯನತಾರಾ ಸೋಷಿಯಲ್ ಮಿಡಿಯಾದಿಂದ ದೂರವೇ ಉಳಿದಿದ್ದರು. ಆಗಾಗ ಕೆಲವೊಂದು ಪೋಸ್ಟ್ ಗಳನ್ನು ಬಿಟ್ಟರೇ ಆಕೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ. ಇದೀಗ ಇನ್ಸ್ಟಾ ಖಾತೆಯನ್ನು ತೆರೆದಿದ್ದಾರೆ. ತಮ್ಮ ಅಭಿಮಾನಿಗಳಿಗೆ ಮತಷ್ಟು ಹತ್ತಿರವಾಗಿರಲು ಆಕೆ ಇನ್ಸ್ಟಾ ಖಾತೆ ತೆರೆದಿದ್ದಾರೆ. ಅಧಿಕೃತವಾಗಿ ಇನ್ಸ್ಟಾ ಗ್ರಾಂ ಗೆ ಎಂಟ್ರಿ ಕೊಟ್ಟಿದ್ದಾರೆ. ಈ ವೇಳೆ ಆಕೆ ಹಂಚಿಕೊಂಡ ಮೊದಲ ಪೋಸ್ಟ್ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಇನ್ನೂ ನಯನತಾರಾ ಇನ್ಸ್ಟಾಗ್ರಾಂಗೆ ಎಂಟ್ರಿ ಕೊಟ್ಟಿದ್ದಕ್ಕೆ ಅಭಿಮಾನಿಗಳು ಪುಲ್ ಖುಷಿಯಾಗಿದ್ದಾರೆ. ನೇರವಾಗಿ ತಮ್ಮ ಅಭಿಮಾನದ ನಟ-ನಟಿಯರನ್ನು ಭೇಟಿಯಾಗಲು, ಮಾತನಾಡಲು ಆಗದೇ ಇದ್ದರೂ ಸೋಷಿಯಲ್ ಮಿಡಿಯಾ ಮೂಲಕ ಅವರ ಬಗ್ಗೆ ತಿಳಿದುಕೊಳ್ಳಬಹುದಾಗಿದೆ. ಆದ್ದರಿಂದ ನಯನತಾರಾ ಸಹ ಅಭಿಮಾನಿಗಳೊಂದಿಗೆ ಟಚ್ ನಲ್ಲಿರಲು ಇನ್ಸ್ಟಾ ಖಾತೆ ತೆರೆದಿದ್ದಾರೆ. ಇನ್ನೂ ಆಕೆ ಹಂಚಿಕೊಂಡ ಮೊದಲ ವಿಡಿಯೋ ಸಖತ್ ವೈರಲ್ ಆಗಿದೆ. ಅದರಲ್ಲಿ ಆಕೆ ತಮ್ಮ ಅವಳಿ ಮಕ್ಕಳಾದ ಉಯರ್‍, ಉಲಾಗ್ ರವರನ್ನು ತೋರಿಸಿದ್ದಾರೆ. ಮೊದಲ ಬಾರಿಗೆ ತಮ್ಮ ಇಬ್ಬರೂ ಮಕ್ಕಳ ಮುಖಗಳನ್ನು ತಮ್ಮ ಅಭಿಮಾನಿಗಳಿಗೆ ತೋರಿಸಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಇನ್ನೂ ನಯನತಾರಾ ಇನ್ಸ್ಟಾ ಖಾತೆ ತೆರೆದ ಮೊದಲನೇ ದಿನವೇ ಬರೊಬ್ಬರಿ 891 ಸಾವಿರ ಫಾಲೋವರ್ಸ್‌ಗಳನ್ನು ಪಡೆದುಕೊಂಡಿದ್ದಾರೆ. ಜೊತೆಗೆ ತಮ್ಮ ಅಭಿನಯದ ಜವಾನ್ ಸಿನೆಮಾ ಟ್ರೈಲರ್‍ ಸಹ ಆಕೆ ತನ್ನ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಸಿನೆಮಾ ಇದೇ ಸೆ.7 ರಂದು ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಈ ಸಿನೆಮಾಗಾಗಿ ನಯನತಾರಾ ಭಾರಿ ಸಂಭಾವನೆಯನ್ನು ಸಹ ಪಡೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

Most Popular

To Top