Film News

ಸೂಪರ್ ಸ್ಟಾರ್ ರಜನಿಕಾಂತ್ ರವರ ತಲೈವರ್ 171 ಸಿನೆಮಾದ ಟೈಟಲ್ ರಿವೀಲ್, ಟೈಟಲ್ ಟೀಸರ್ ರಿಲೀಸ್…..!

ದೇಶದ ಸಿನಿರಂಗದ ಸ್ಟಾರ್‍ ನಟ ಸೂಪರ್‍ ಸ್ಟಾರ್‍ ರಜನಿಕಾಂತ್ ರವರು ಸ್ವಯಂ ಕೃಷಿಯಿಂದ ದೊಡ್ಡ ಸ್ಟಾರ್‍ ನಟನಾಗಿದ್ದಾರೆ. ಅವರ 73ನೇ ವಯಸ್ಸಿನಲ್ಲೂ ಸಹ ಯಂಗ್ ನಟರನ್ನು ನಾಚಿಸುವಂತೆ ಸಿನೆಮಾಗಳನ್ನು ಮಾಡುತ್ತಿದ್ದಾರೆ. ಕೊನೆಯದಾಗಿ ಅವರು ಜೈಲರ್‍ ಎಂಬ ಸಿನೆಮಾದ ಮೂಲಕ ಬ್ಲಾಕ್ ಬ್ಲಸ್ಟರ್‍ ಪಡೆದುಕೊಂಡರು. ಬಾಕ್ಸ್ ಆಫೀಸ್ ನಲ್ಲಿ ಜೈಲರ್‍ ಸಿನೆಮಾ ಭಾರಿ ಕಲೆಕ್ಷನ್ ಮಾಡಿತ್ತು. ಬಳಿಕ ತಮ್ಮ ಪುತ್ರಿ ಐಶ್ವರ್ಯ ರಜನಿಕಾಂತ್ ನಿರ್ದೇಶನದಲ್ಲಿ ತೆರೆಕಂಡ ಲಾಲ್ ಸಲಾಂ ಸಿನೆಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆದರೆ ಈ ಸಿನೆಮಾ ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿತ್ತು.

ಸದ್ಯ ರಜನಿಕಾಂತ್ ತಲೈವರ್‍ 171 ಸಿನೆಮಾ ಘೋಷಣೆಯಾಗಿತ್ತು. ಈ ಸಿನೆಮಾವನ್ನು ಲೋಕೇಶ್ ಕನಗರಾಜ್ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನೆಮಾದ ಮೇಲೆ ಭಾರಿ ನಿರೀಕ್ಷೆ ಮೂಡಿದೆ. ಇದೀಗ ಈ ಸಿನೆಮಾ ಟೈಟಲ್ ಟೀಸರ್‍ ಬಿಡುಗಡೆ ಮಾಡಿದ್ದು ಭಾರಿ ಸದ್ದು ಮಾಡುತ್ತಿದೆ. ಶೀಘ್ರದಲ್ಲೇ ಈ ಸಿನೆಮಾದ ಶೂಟಿಂಗ್ ಸಹ ಆರಂಭವಾಗಲಿದೆ ಎಂದು ಹೇಳಲಾಗಿದೆ. ಸದ್ಯ ಈ ಸಿನೆಮಾದ ಟೈಟಲ್ ಟೀಸರ್‍ ಬಿಡುಗಡೆ ಮಾಡಲಾಗಿದ್ದು, ಈ ಸಿನೆಮಾಗೆ ಕೂಲಿ ಎಂಬ ಟೈಟಲ್ ಇಡಲಾಗಿದೆ. ಟೈಟಲ್ ಟೀಸರ್‍ ನೋಡಿ ಅಭಿಮಾನಿಗಳು ಪುಲ್ ಖುಷಿಯಾಗಿದ್ದಾರೆ. ಜೊತೆಗೆ ರಜನಿಕಾಂತ್ ರವರ ಲುಕ್ಸ್ ಕಂಡು ಸಿನೆಮಾದ ಮೇಲೆ ನಿರೀಕ್ಷೆ ಮತಷ್ಟು ದುಪ್ಪಟ್ಟಾಗಿದೆ ಎನ್ನಲಾಗಿದೆ. ಜೊತೆಗೆ ಸೂಪರ್‍ ಸ್ಟಾರ್‍ ರಜನಿಕಾಂತ್ ರವರ ರಗಡ್ ಲುಕ್ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ.

ಸದ್ಯ ಬಿಡುಗಡೆಯಾದ ಕೂಲಿ ಟೈಟಲ್ ಟೀಸರ್‍ ನಲ್ಲಿ ರಜನಿಕಾಂತ್ ರವರು ತೋಳಿನಲ್ಲಿ ಕೂಲಿ ಎಂಬ ಹೆಸರು ಇರುವ ಬ್ಯಾಡ್ಜ್ ಧರಿಸಿ ಎಂಟ್ರಿ ಕೊಟ್ಟಿದ್ದಾರೆ. ಬ್ಲಾಕ್ ಅಂಡ್ ವೈಟ್ ಥೀಮ್ ನಲ್ಲಿ ಇಡೀ ಟೀಸರ್‍ ಮೂಡಿಬಂದಿದೆ. ಟೀಸರ್‍ ನಲ್ಲಿ ಬಂಗಾರದ ವಸ್ತುಗಳನ್ನು ಮಾತ್ರ ಬಣ್ಣದಲ್ಲಿ ತೋರಿಸಲಾಗಿದೆ. ಈ ಸಿನೆಮಾ ಗೋಲ್ಡ್ ಸ್ಮಗ್ಲಿಂಗ್ ಕುರಿತ ಸಿನೆಮಾ ಆಗಿರುತ್ತದೆ ಎಂಬ ಕುತೂಹಲ ಮೂಡಿದೆ. ಗೋಲ್ಡ್ ಬಿಸ್ಕೆಟ್, ಗೋಲ್ಡ್ ವಾಚ್ ಹಾಗೂ ಚಿನ್ನದ ರಾಶಿಯೇ ಇರುವ ಜಾಗಕ್ಕೆ ರಜನಿಕಾಂತ್ ಎಂಟ್ರಿ ನೀಡುತ್ತಾರೆ. ಅಲ್ಲಿದ್ದ ಕಳ್ಳರಿಗೆ ಗೋಲ್ಡ್ ವಾಚ್ ಗಳಿಂದ ಮಾಡಿದ ಚೈನ್ ಗಳಿಂದ ಚಳಿ ಬಿಡಿಸುತ್ತಾರೆ. ಆಕ್ಷನ್ ದೃಶ್ಯದ ಮೂಲಕ ರಜನಿಕಾಂತ್ ರವರ ಪಾತ್ರದ ಪರಿಚಯ ಮಾಡಿಕೊಡಲಾಗಿದೆ. ಸದ್ಯ ಟೈಟಲ್ ಟೀಸರ್‍ ಮಾತ್ರ ರಜನಿಕಾಂತ್ ರವರ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡುವಂತೆ ಮಾಡಿದೆ.ಇನನೂ ಈ ಸಿನೆಮಾಗೆ ಅನಿರುದ್ದ್ ರವಿಚಂದರ್‍ ಮ್ಯೂಸಿಕ್ ಕಂಪೋಸ್ ಮಾಡುತ್ತಿದ್ದು. ಟೈಟಲ್ ಟೀಸರ್‍ ನ ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಎಲ್ಲರ ಗಮನ ಸೆಳೆದಿದೆ ಎನ್ನಬಹುದಾಗಿದೆ.

Most Popular

To Top