ರಾಖಿ ನಹೀ…., ಫಾತಿಮಾ ಬೋಲೋ….. ಎಂದ ಕಾಂಟ್ರವರ್ಸಿ ಕ್ವೀನ್ ರಾಖಿ ಸಾವತ್……!

ಸದಾ ಒಂದಲ್ಲ ಒಂದು ವಿಚಾರಕ್ಕಾಗಿ ಸುದ್ದಿಯಾಗುವ ಬಾಲಿವುಡ್ ಹಾಟ್ ಬಾಂಬ್ ರಾಖಿ ಸಾವಂತ್ ಕೆಲವು ದಿನಗಳ ಹಿಂದೆಯಷ್ಟೆ ಮೆಕ್ಖಾ ಯಾತ್ರೆಗೆ ಹೋಗಿದ್ದರು. ಇಅಲ್ಲಿನ ಕೆಲವೊಂದು ಪೊಟೋಗಳನ್ನು ಸಹ ಆಕೆ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದರು. ದೀಗ ಮೆಕ್ಕಾದ ಉಮ್ರಾ ಯಾತ್ರೆಯಿಂದ ವಾಪಸ್ಸಾಗಿದ್ದಾರೆ. ಈ ವೇಳೆ ವಿಮಾನ ನಿಲ್ದಾಣದಲ್ಲಿ ಆಕೆಯನ್ನು ರಾಖಿ ರಾಖಿ ಎಂದು ಕೂಗಿದ್ದಾರೆ. ಆಕೆ ರಾಖಿ ನಹೀ ಫಾತಿಮಾ ಬೊಲೋ ಎಂದು ಹೇಳಿದ್ದಾರೆ. ಸದ್ಯ ಈ ಸಂಬಂಧ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

ಸದಾ ವಿವಾದಗಳಿಂದಲೇ ಸುದ್ದಿಯಾಗುವ ರಾಖಿ ಸಾವಂತ್ ಕೆಲವು ತಿಂಗಳುಗಳ ಹಿಂದೆಯಷ್ಟೆ ಮೈಸೂರು ಮೂಲದ ಆದಿಲ್ ಖಾನ್ ದುರಾನಿ ಎಂಬಾತನೊಂದಿಗೆ ವಿವಾಹವಾದರು. ಬಳಿಕ ಆತನೊಂದಿಗೆ ಗಲಾಟೆ ಮಾಡಿಕೊಂಡು, ಆತನ ಮೇಲೆ ಅನೇಕ ಆರೋಪಗಳನ್ನು ಮಾಡಿ ಆತನನ್ನು ಜೈಲಿಗೆ ಸಹ ಕಳುಹಿಸಿದ್ದರು. ಕೆಲವು ದಿನಗಳ ಹಿಂದೆಯಷ್ಟೆ ಜೈಲಿನಿಂದ ಹೊರಬಂದ ಆದಿಲ್‌ ಆಕೆಯ ಮೇಲೆ ಸಹ ಕೆಲವೊಂದು ಆರೋಪಗಳನ್ನು ಮಾಡಿದ್ದರು. ರಾಖಿ ಸಹ ನನ್ನ ಬೆತ್ತಲೇ ವಿಡಿಯೋ ಮಾಡಿ ದುಬೈನಲ್ಲಿ ಮಾರಾಟ ಮಾಡಿದ್ದಾನೆ ಎಂಬೆಲ್ಲಾ ಆರೋಪಗಳನ್ನು ಮಾಡಿದ್ದರು. ಕೆಲವು ದಿನಗಳ ಹಿಂದೆಯಷ್ಟೆ ರಾಖಿ ಮುಸ್ಲೀಂರ ಪವಿತ್ರ ಸ್ತಳ ಮೆಕ್ಕಾಗೆ ಭೇಟಿ ನೀಡಿದ್ದರು. ಇದೀಗ ಆಕೆ ಮೆಕ್ಕಾದಿಂದ ವಾಪಸ್ಸಾಗಿದ್ದಾರೆ. ಬಿಳಿ ಬಣ್ಣದ ಬುರ್ಖಾ ಧರಿಸಿ ಕಾಣಿಸಿಕೊಂಡಿದ್ದಾರೆ. ಇನ್ನೂ ಮುಂಬೈನಲ್ಲಿ ಆಕೆಯ ಅಭಿಮಾನಿಗಳನ್ನು ಸ್ವಾಗತಿಸಿದ್ದಾರೆ. ಈ ವೇಳೆ ಆಕೆ ಮಾದ್ಯಮಗಳೊಂದಿಗೆ ಸಹ ಮಾತನಾಡಿ ಮೆಕ್ಕಾದ ಉಮ್ರಾ ಯಾತ್ರೆಯ ಅನುಭವವನ್ನು ಹಂಚಿಕೊಂಡಿದ್ದಾರೆ.

ಈ ವೇಳೆ ರಾಖಿ ಮಾತನಾಡಿ, ಇನ್ನು ಮುಂದೆ ನನ್ನನ್ನು ರಾಖಿ ಎಂದು ಕರೆಯಬೇಡಿ ಫಾತಿಮಾ ಎಂದು ಕರೆಯಬೇಕು ಎಂದು ಹೇಳಿದ್ದಾರೆ. ಇನ್ನೂ ಅಧಿಕೃತ ದಾಖಲೆಗಳಲ್ಲೂ ಸಹ ನಿಮ್ಮ ಹೆಸರು ಬದಲಿಸಿಕೊಂಡಿದ್ದೀರಾ ಎಂದು ಪ್ರಶ್ನೆ ಎದುರಾಗಿದೆ. ಅದಕ್ಕೂ ಸಹ ಉತ್ತರಿಸಿದ ರಾಖಿ ಆ ದೇವರಿಗೆ ನಾನು ಇರುವ ಹಾಗೆ ಇರೋದು ಇಷ್ಟ. ಅದಕ್ಕಾಗಿ ನಾನು ಯಾವುದೇ ದಾಖಲೆಗಳಲ್ಲಿ ಹೆಸರು ಬದಲಿಸುವ ಅವಶ್ಯಕತೆಯಿಲ್ಲ. ಆದರೆ ನನ್ನನ್ನು ಇನ್ನು ಮುಂದೆ ಫಾತಿಮಾ ಎಂದು ಕರೆದಿದ್ದಾರೆ. ಇನ್ನೂ ಆದಿಲ್ ಜೊತೆಗೆ ಆಕೆ ಗಲಾಟೆ ಮಾಡಿಕೊಂಡು ದೂರವಾಗಿದ್ದಾರೆ. ಈ ನಡುವೆ ಆಕೆ ದಿಢೀರ್‍ ನೇ ಹೆಸರು ಬದಲಿಸಿಕೊಂಡಿರುವುದು ಅನೇಕರು ಅಚ್ಚರಿ ಮೂಡಿಸಿದೆ.

ಇನ್ನೂ ರಾಖಿ ಸಾವಂತ್ ಮೆಕ್ಕಾಗೆ ಭೇಟಿ ನೀಡಿದ ಕೆಲವೊಂದು ವಿಡಿಯೋಗಳನ್ನು ಸಹ ಹಂಚಿಕೊಂಡಿದ್ದಾರೆ. ಈ ವೇಳೆ ಆಕೆ ದೇವರ ಎದುರು ನಿಂತು ಅಳುತ್ತಿರುವ ಪೊಟೋ ಸಹ ವೈರಲ್ ಆಗಿದೆ. ಇದೆಲ್ಲಾ ಕೇವಲ ಪಾಪ್ಯುಲಾರಿಟಿ ಪಡೆದುಕೊಳ್ಳಲು ಮಾಡಿರೋದು ಎಂಬ ಕಾಮೆಂಟ್ ಗಳು ಕೇಳಿಬರುತ್ತಿವೆ. ಇನ್ನೂ ಆಕೆ ಈ ವಿಡಿಯೋ ಕಾರಣದಿಂದ ಸಖತ್ ಟ್ರೋಲ್ ಆಗುತ್ತಿದ್ದಾರೆ.