ಕಾಲಿವುಡ್ ಸ್ಟಾರ್ ನಟ ಅಜಿತ್ ಕುಮಾರ್ ಗೆ ಶಸ್ತ್ರಚಿಕಿತ್ಸೆ, 4 ಗಂಟೆಗಳ ಕಾಲ ಸರ್ಜರಿ ಮಾಡಿದ ವೈದ್ಯರು….!

Follow Us :

ಕಾಲಿವುಡ್ ಸೂಪರ್‍ ಸ್ಟಾರ್‍ ತಮಿಳಿನ ಖ್ಯಾತ ನಟ ಅಜಿತ್ ಕುಮಾರ್‍ ನಿನ್ನೆಯಷ್ಟೆ ಚೆನೈನ ಅಪೊಲೋ ಆಸ್ಪತ್ರೆಗೆ ದಾಖಲಾಗಿದ್ದರು. ಇದ್ದಕ್ಕಿಂದ್ದಂತೆ ಅವರು ಆಸ್ಪತ್ರೆಗೆ ದಾಖಲಾಗಿರುವುದು ಅನೇಕ ಊಹಾಪೋಹಗಳಿಗೆ ಕಾರಣವಾಗಿತ್ತು. ಅಜಿತ್ ರವರಿಗೆ ಮೆದುಳಿನ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ ಎಂದು ಅಜಿತ್ ಮ್ಯಾನೇಜರ್‍ ಸುರೇಶ್ ಚಂದ್ರ ಎಂಬುವವರು ಸ್ಪಷ್ಟನೆ ನೀಡಿದ್ದಾರೆ. ಅಜಿತ್ ರವರ ಮೆದುಳಿನಲ್ಲಿ ಸಣ್ಣ ಶಸ್ತ್ರ ಚಿಕಿತ್ಸೆ ನಡೆದಿದೆ ಎಂದು ಹೇಳಿದ್ದಾರೆ.

ಕಾಲಿವುಡ್ ನಟ ಅಜಿತ್ ಕುಮಾರ್‍ ಸೌತ್ ನಲ್ಲಿ ಸ್ಟಾರ್‍ ಇಮೇಜ್ ಪಡೆದುಕೊಂಡಿದ್ದಾರೆ. ವಿವಾದಗಳಿಗೆ ದೂರವಾಗಿ ಪ್ರಶಾಂತತೆಯಿಂದ ಜೀವಿಸಲು ಇಷ್ಟಪಡುತ್ತಾರೆ. ಸಿನೆಮಾಗಳಲ್ಲಿ ಬ್ಯುಸಿಯಾಗಿರುತ್ತಾರೆ. ಫಾರಿನ್ ಟ್ರಿಪ್ಸ್, ಬೈಕ್ ಟ್ರಿಪ್ ಗಳನ್ನು ಕೈಗೊಳ್ಳುತ್ತಾ ಬ್ಯುಸಿಯಾಗಿ ಸಮಯ ಕಳೆಯುತ್ತಿರುತ್ತಾರೆ. ಕಳೆದ ಎರಡು ವರ್ಷಗಳಿಂದ ಬೈಕ್ ರೈಡ್ ಮಾಡುತ್ತಾ ವಿಶ್ವವನ್ನು ಸುತ್ತಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅಜಿತ್ ಸದಾ ಆರೋಗ್ಯವನ್ನು ಪರೀಕ್ಷೆ ಮಾಡಿಸಿಕೊಳ್ಳುತ್ತಾ ಎಚ್ಚರಿಕೆ ಪಡೆದುಕೊಳ್ಳುತ್ತಿರುತ್ತಾರೆ. ಈ ಹಿನ್ನೆಲೆಯಲ್ಲಿ ಕಳೆದ ಬುಧವಾರ ವೈದ್ಯಕೀಯ ಪರೀಕ್ಷೆ ಮಾಡಿಸಿಕೊಳ್ಳುವ ನಿಟ್ಟಿನಲ್ಲಿ ಅಪೊಲೋ ಆಸ್ಪತ್ರೆಗೆ ಹೋಗಿದ್ದರು. ಅಲ್ಲಿ ನಡೆದ ಪರೀಕ್ಷೆಯಲ್ಲಿ ಅಜಿತ್ ರವರ ಮೆದುಳಿನಲ್ಲಿ ಗಡ್ಡೆ ಇರುವುದಾಗಿ ತಿಳಿದುಬಂದಿದೆ. ಇದಕ್ಕಾಗಿ ಸಣ್ಣ ಸರ್ಜರಿಯೊಂದು ಮಾಡಬೇಕೆಂದು ವೈದ್ಯರು ಸೂಚನೆ ನೀಡಿದ್ದಾರೆ.

ವೈದ್ಯರ ಸೂಚನೆಯ ಮೇರೆಗೆ ಅಜಿತ್ ರವರಿಗೆ ಸರ್ಜರಿ ಮಾಡಲಾಗಿದೆ. ಅಪೋಲೋ ಆಸ್ಪತ್ರೆಯ ಡಾಕ್ಟರ್‍ ಪೆರಿಯಗರುಪ್ಪನ್ ಸಾರಥ್ಯದಲ್ಲಿ ನಾಲ್ಕು ಗಂಟೆಗಳ ಕಾಲ ಅಜಿತ್ ರವರಿಗೆ ಸರ್ಜರಿ ಮಾಡಿದ್ದಾರೆ. ಮೆದುಳಿನಲ್ಲಿದ್ದ ಗಡ್ಡೆಯನ್ನು ಸರ್ಜರಿಯ ಮೂಲಕ ತೆಗೆದುಹಾಕಿದ್ದಾರೆ ಎಂದು ಹೇಳಲಾಗಿದೆ. ಇನ್ನೂ ಸೋಷಿಯಲ್ ಮಿಡಿಯಾದಲ್ಲಿ ಅಜಿತ್ ಆಸ್ಪತ್ರೆಗೆ ದಾಖಲಾಗಿರುವ ಬಗ್ಗೆ  ಸುದ್ದಿ ತಿಳಿಯುತ್ತಿದ್ದಂತೆ ಅಭಿಮಾನಿಗಳು ಚಿಂತೆಗೆ ಗುರಿಯಾಗಿದ್ದರು. ಅಜಿತ್ ರವರಿಗೆ ಏನಾಗಿದೆ ಎಂದು ವಿಚಾರಣೆ ಶುರು ಮಾಡಿದರು. ಅವರಿಗೆ ಸರ್ಜರಿ ಆಗಿರುವ ಬಗ್ಗೆ ತಿಳಿದ ಬಳಿಕ ಕೂಡಲೇ ಅವರು ಗುಣಮುಖರಾಗಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತಿದ್ದಾರೆ.