Film News

ಸೈಬರ್ ಕ್ರೈಂ ಪೊಲೀಸರ ಕಸ್ಟಡಿಯಲ್ಲಿ ನಟಿ ಮಹಾಲಕ್ಷ್ಮೀ ಪತಿ ಕಾಲಿವುಡ್ ನಿರ್ಮಾಪಕ ರವಿಂದರ್…..!

ಕಾಲಿವುಡ್ ಖ್ಯಾತ ನಿರ್ಮಾಪಕ ರವಿಂದರ್‍ ಹಾಗೂ ಕಿರುತೆರೆ ನಟಿ ಮಹಾಲಕ್ಷ್ಮೀ ಕಳೆದ ವರ್ಷ ಮದುವೆಯಾದರು. ಇಬ್ಬರಿಗೂ ಇದು ಎರಡನೇ ಮದುವೆಯಾಗಿದ್ದು, ಮದುವೆಯಾದಾಗಿನಿಂದ ಸದಾ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುತ್ತಿದ್ದರು.  ಸ್ಟಾರ್‍ ಸೆಲೆಬ್ರೆಟಿಗಳಿಗಿಂತಲೂ ಈ ಜೋಡಿಯ ಮದುವೆ ತುಂಬಾನೆ ಸದ್ದು ಮಾಡಿತ್ತು. ಇದೀಗ ಈ ಜೋಡಿ ಪೊಲೀಸರ ಕಸ್ಟಡಿಯಲ್ಲಿದ್ದಾರೆ. ಓರ್ವ ವ್ಯಾಪಾರಿಯನ್ನು ಮೋಸ ಮಾಡಿದ ದೂರಿನ ಮೇರೆಗೆ ರವಿಂದರ್‍ ರವರನ್ನು ಚೆನೈ ಸೈಬರ್‍ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

ತಮಿಳು ನಿರ್ಮಾಪಕ ರವಿಂದರ್‍ ಚಂದ್ರಶೇಖರ್‍ ಹಾಗೂ ನಟಿ ಮಹಾಲಕ್ಷ್ಮೀ ಕಳೆದ ವರ್ಷವಷ್ಟೆ ಪ್ರೀತಿಸಿ ಮದುವೆಯಾದರು. ಮದುವೆಯಾದಾಗಿನಿಂದ ಈ ಜೋಡಿ ಆಗಾಗ ಸುದ್ದಿಯಾಗುತ್ತಿರುತ್ತಾರೆ. ಇದೀಗ ರವಿಂದರ್‍ ಪೊಲೀಸರ ಅತಿಥಿಯಾಗಿದ್ದಾರೆ. ಓರ್ವ ವ್ಯಾಪಾರಿಯನ್ನು ಮೋಸ ಮಾಡಿದ ಹಿನ್ನೆಲೆಯಲ್ಲಿ ಆರ್ಥಿಕ ಅಪರಾಧದಲ್ಲಿ ಭಾಗಿಯಾದ ಹಿನ್ನೆಲೆಯಲ್ಲಿ ಚೆನೈ ಸೆಂಟ್ರಲ್ ಕ್ರೈಂ ಬ್ರಾಂಚ್ ಪೊಲೀಸರು ರವಿಂದರ್‍ ರವರನ್ನು ಬಂಧಿಸಿದ್ದಾರಂತೆ. ವಿದ್ಯುತ್ ಉತ್ಪತ್ತಿ ಮಾಡುವಂತಹ ಪ್ಲಾಂಟ್ ನಿರ್ಮಾಣ ಮಾಡಿ ಅದರಿಂದ ಭಾರಿ ಲಾಭ ಗಳಿಸಬಹುದೆಂದು ಚೆನೈ ಮೂಲದ ಬಾಲಾಜಿ ಎಂಬ ವ್ಯಕ್ತಿಯನ್ನು ನಂಬಿಸಿದ್ದಾರಂತೆ. ಅದಕ್ಕೆ ಬೇಕಾದಂತಹ ನಕಲಿ ಪತ್ರಗಳನ್ನು ಸಹ ತಯಾರಿಸಿ ವ್ಯಾಪಾರಿ ಬಾಲಾಜಿಯನ್ನು ಈ ಪ್ರಾಜೆಕ್ಟ್ ನಲ್ಲಿ ಪಾರ್ಟನರ್‍ ಆಗಿ ಮಾಡಿಕೊಂಡಿದ್ದಾರೆ. ಜೊತೆಗೆ ಬಾಲಾಜಿ ರವರಿಂದ 15.83 ಕೋಟಿ ರೂಪಾಯಿಗಳನ್ನು ತೆಗೆದುಕೊಂಡಿದ್ದಾಗಿ ಆರೋಪ ಮಾಡಿದ್ದಾರೆ.

ಈ ಬಗ್ಗೆ ಅವಿಬ್ಬರ ನಡುವೆ 2020 ಸೆಪ್ಟೆಂಬರ್‍ 17 ರಂದು ಒಪ್ಪಂದ ಸಹ ಆಗಿತ್ತಂತೆ. ಅಲ್ಲಿಂದ ಇಲ್ಲಿಯವರೆಗೂ ಒಪ್ಪಂದದಂತೆ ಏನು ನಡೆಯದ ಕಾರಣದಿಂದ ಹಣ ವಾಪಸ್ಸು ನೀಡಲು ಬಾಲಾಜಿ ರವಿಂದರ್‍ ರವರನ್ನು ಆಗ್ರಹಿಸಿದ್ದಾರೆ. ಎಷ್ಟು ಬಾರಿ ಕೇಳಿದರೂ ರವಿಂದರ್‍ ನಿಂದ ಸರಿಯಾದ ಪ್ರತಿಕ್ರಿಯೆ ಬಾರದ ಕಾರಣ  ಬಾಲಾಜಿ ಪೊಲೀಸರನ್ನು ಆಶ್ರಯಿಸಿದ್ದಾನೆ. ಅವರ ದೂರಿನ ಮೇರೆಗೇ ಚೆನೈ ಸೆಂಟ್ರಲ್ ಕ್ರೈಂ ಬ್ರಾಂಚ್ ಪೊಲೀಸರು ಪ್ರಕರಣ ದಾಖಲಸಿಕೊಂಡು ರವಿಂದರ್‍ ರವರನ್ನು ಬಂಧಿಸಿ ವಿಚಾರಣೆ ಶುರು ಮಾಡಿದ್ದಾರೆ.  ಈ ಹಿಂದೆ ಸಹ ಸಿನೆಮಾ ನಿರ್ಮಾಣದಲ್ಲಿ ಪಾರ್ಟನರ್‍ ಮಾಡಿಕೊಳ್ಳುವುದಾಗಿ ನಂಬಿಸಿ ವಿಜಯ್ ಎಂಬಾತನ್ನು ಮೋಸ ಮಾಡಿದ್ದ ಪ್ರಕರಣ ಸಹ ರವಿಂದರ್‍ ಮೇಲಿದೆ ಎಂದು ಹೇಳಲಾಗುತ್ತಿದೆ.

Most Popular

To Top