Film News

ಪುಷ್ಪಾ-2 ಶೂಟಿಂಗ್ ಸ್ಪಾಟ್ ನಿಂದ ಪೊಟೋ ಹಂಚಿಕೊಂಡ ಶ್ರೀವಲ್ಲಿ, ವೈರಲ್ ಆದ ಪೊಟೋ…..!

ಸ್ಟೈಲಿಷ್ ಸ್ಟಾರ್‍ ಅಲ್ಲು ಅರ್ಜುನ್ ಹಾಗೂ ಖ್ಯಾತ ನಿರ್ದೇಶಕ ಸುಕುಮಾರ್‍ ಸಾರಥ್ಯದಲ್ಲಿ ಮೂಡಿಬಂದಂತಹ ಪುಷ್ಪಾ ಸಿನೆಮಾ ಭಾರಿ ಸಕ್ಸಸ್ ಕಂಡುಕೊಂಡಿದೆ. ಪ್ಯಾನ್ ಇಂಡಿಯಾ ಸಿನೆಮಾ ಆದ ಪುಷ್ಪಾ ಭಾರಿ ಕಲೆಕ್ಷನ್ ಮಾಡಿದೆ. ಈ ಸಿನೆಮಾ ಕೇವಲ ತೆಲುಗಿನಲ್ಲಿ ಮಾತ್ರವಲ್ಲೇ ಬೇರೆ ಭಾಷೆಗಳಲ್ಲೂ ಸಹ ಸಖತ್ ಕ್ರೇಜ್ ಪಡೆದುಕೊಂಡಿದೆ. ಇಂದಿಗೂ ಸಹ ಈ ಸಿನೆಮಾದ ಹಾಡುಗಳು ಹಾಗೂ ಡೈಲಾಗ್ ಗಳು ಪ್ರಚಲಿತದಲ್ಲಿದೆ. ಇದೀಗ ಪುಷ್ಪಾ-2 ಸಿನೆಮಾದ ಮೇಲೆ ಭಾರಿ ನಿರೀಕ್ಷೆ ಹುಟ್ಟಿದ್ದು, ಸಿನೆಮಾದ ಅಪ್ಡೇಟ್ ಗಳ ಬಗ್ಗೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಜೊತೆಗೆ ಆಗಾಗ ಸಿನೆಮಾದ ಕೆಲವೊಂದು ಲೀಕ್ ಗಳು ಸಿನೆಮಾದ ಮೇಲೆ ಮತಷ್ಟು ನಿರೀಕ್ಷೆ ಹುಟ್ಟಿಸುತ್ತಿದೆ.

ನ್ಯಾಷನಲ್ ಅವಾರ್ಡ್ ಐಕಾನ್ ಸ್ಟಾರ್‍ ಅಲ್ಲು ಅರ್ಜುನ್ ಹಾಗೂ ನ್ಯಾಷನಲ್ ಕ್ರಷ್ ರಶ್ಮಿಕಾ ಕಾಂಬಿನೇಷನ್ ನಲ್ಲಿ ಮೂಡಿಬಂದ ಪುಷ್ಪ ಸಿನೆಮಾ ಭಾರಿ ಸದ್ದು ಮಾಡಿದೆ. ಇದೀಗ ಪುಷ್ಪಾ-2 ಸೆಟ್ಟೇರಿದ್ದು, ಶೂಟಿಂಗ್ ಕೆಲಸಗಳೂ ಸಹ ಭರದಿಂದ ಸಾಗಿದೆ. ಮೈತ್ರಿ ಮೂವಿಸ್ ಬ್ಯಾನರ್‍ ನಡಿ ನಿರ್ಮಾಣವಾಗುತ್ತಿರುವ ಈ ಸಿನೆಮಾ ಭಾರಿ ಬಜೆಟ್ ನಲ್ಲಿ ಸೆಟ್ಟೇರಿದೆ. ಶೂಟಿಂಗ್ ಸಹ ಭರದಿಂದ ಸಾಗುತ್ತಿದ್ದು, ಸಿನೆಮಾದ ಅಪ್ಡೇಟ್ ಗಳೂ ಸಹ ನೀಡುತ್ತಿದ್ದಾರೆ. ಒಂದು ವಾರದ ಹಿಂದೆಯಷ್ಟೆ ಅಲ್ಲು ಅರ್ಜುನ್ ಪುಷ್ಪಾ-2 ಅಪ್ಡೇಟ್ ನೀಡಿದ್ದರು. ಪುಷ್ಪಾ-2 ಶೂಟಿಂಗ್ ಸ್ಪಾಟ್, ಪಾರ್ಪಟಿ, ಮೇಕಪ್ ಸೇರಿದಂತೆ ಮತಷ್ಟು ವಿಚಾರಗಳ ಬಗ್ಗೆ ವಿವರಣೆ ನೀಡಿದ್ದರು. ಜೊತೆಗೆ ಸಿನೆಮಾದ ನಿರ್ದೇಶಕ ಸುಕುಮಾರ್‍ ಬಗ್ಗೆ ಸಹ ಕೆಲವೊಂದು ಪಂಚ್ ಗಳನ್ನು ಹಾಕಿದ್ದರು. ಈ ವಿಡಿಯೋ ಸಖತ್ ವೈರಲ್ ಆಗಿತ್ತು. ಇದೀಗ ರಶ್ಮಿಕಾ ಸಹ ಶೂಟಿಂಗ್ ಸೆಟ್ ನಿಂದ ಪೊಟೋ ಒಂದನ್ನು ಹಂಚಿಕೊಂಡಿದ್ದು, ಪೊಟೋ ವೈರಲ್ ಆಗುತ್ತಿದೆ.

ಹೈದರಾಬಾದ್ ನಲ್ಲಿ ಪುಷ್ಪಾ-2 ಸಿನೆಮಾದ ಶೂಟಿಂಗ್ ಆರಂಭವಾಗಿದೆ. ಹೈದರಾಬಾದ್ ನಲ್ಲಿ ನಿರ್ಮಾಣ ಮಾಡಿದ ಭಾರಿ ಸೆಟ್ ನಲ್ಲಿ ರಶ್ಮಿಕಾ ಭಾಗಿಯಾಗಿದ್ದಾರೆ ಎನ್ನಲಾಗುತ್ತಿದೆ. ಈ ವೇಳೆ ರಶ್ಮಿಕಾ ಶೂಟಿಂಗ್ ಗೆ ಭಾಗಿಯಾಗಿರುವ ಬಗ್ಗೆ ಪೊಟೋ ಒಂದನ್ನು ಹಂಚಿಕೊಂಡಿದ್ದಾರೆ. ಈ ಪೊಟೋಗೆ ಆಕೆ PUSHPA2 ಎಂದು ಕ್ಯಾಪ್ಷನ್ ಸಹ ಹಾಕಿದ್ದಾರೆ. ಇನ್ನೂ ಈ ಪೊಟೋ ಹಂಚಿಕೊಂಡ ಕಡಿಮೆ ಸಮಯದಲ್ಲೇ ಸಖತ್ ವೈರಲ್ ಆಗುತ್ತಿದೆ. ಇನ್ನೂ ಅಭಿಮಾನಿಗಳು ಹಾಗೂ ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ. ಪುಷ್ಪಾ ಸಿನೆಮಾದಲ್ಲಿ ಶ್ರೀವಲ್ಲಿಯಾಗಿ ಫೇಂ ಪಡೆದುಕೊಂಡ ರಶ್ಮಿಕಾ ಪುಷ್ಪಾ-2 ನಲ್ಲೂ ಸಹ ಶ್ರೀವಲ್ಲಿಯಾಗಿ ಅಭಿಮಾನಿಗಳನ್ನು ರಂಜಿಸಲಿದ್ದಾರೆ.

ಇನ್ನೂ ಈ ಸಿನೆಮಾದಲ್ಲಿ ಸುನೀಲ್, ಫಹಾದ್ ಫಾಜಿಲ್, ಜಗಪತಿ ಬಾಬು, ಅನಸೂಯ ಸೇರಿದಂತೆ ಮತಷ್ಟು ಸ್ಟಾರ್‍ ಕಲಾವಿದರು. ನಟಿಸುತ್ತಿದ್ದಾರೆ. ದೇವಿ ಶ್ರೀ ಪ್ರಸಾದ್ ಮ್ಯೂಸಿಕ್ ಕಂಪೋಸ್ ಮಾಡುತ್ತಿದ್ದಾರೆ. ಇನ್ನೂ ರಶ್ಮಿಕಾ ಮಂದಣ್ಣ ತೆಲುಗಿನಲ್ಲಿ ರೈಂಬೋ ಎಂಬ ಲೇಡಿ ಓರಿಯೆಂಟೆಡ್ ಸಿನೆಮಾದಲ್ಲಿ ಹಾಗೂ ಬಾಲಿವುಡ್ ನಲ್ಲಿ ಯಾನಿಮಲ್ ಎಂಬ ಸಿನೆಮಾದಲ್ಲೂ ನಟಿಸುತ್ತಿದ್ದಾರೆ.

Most Popular

To Top