ಖ್ಯಾತ ತಮಿಳು ನಟ, ನಿರ್ದೇಶಕ ಜಿ.ಮಾರಿಮುತ್ತು ಹೃದಯಾಘಾತದಿಂದ ನಿಧನ, ಶೋಕಸಾಗರದಲ್ಲಿ ಸಿನಿರಂಗ….!

ಕಾಲಿವುಡ್ ನಿರ್ದೇಶಕ ಕಂ ನಟ ಜಿ.ಮಾರಿಮುತ್ತು ಇಂದು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. 56 ವರ್ಷದ ಜಿ.ಮಾರಿಮುತ್ತು ರವರು ಧಾರವಾಹಿಯ ಡಬ್ಬಿಂಗ್ ವೇಳೆ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಇನ್ನೂ ನಟನ ಹಠಾತ್ ಸಾವು ತಮಿಳು ಸಿನಿರಂಗದ ಗಣ್ಯರು ಹಾಗೂ ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ. ಜೈಲರ್‍ ಸಿನೆಮಾದಲ್ಲೂ ಮಾರಿಮುತ್ತು ನಟಿಸಿದ್ದರು.

ಜಿ.ಮಾರಿಮುತ್ತು ರವರ ಧಾರವಾಹಿಯೊಂದರ ಡಬ್ಬಿಂಗ್ ವೇಳೆ ಪ್ರಜ್ಞೆ ತಪ್ಪಿ ಕಳೆಗೆ ಬಿದ್ದಿದ್ದಾರೆ. ಕೂಡಲೇ ಅಲ್ಲಿದ್ದವರು ಆತನನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಆಸ್ಪತ್ರೆಗೆ ಸಾಗಿಸುವಾಗಲೇ ಮಾರಿಮುತ್ತು ಮೃತಪಟ್ಟಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ ಎನ್ನಾಳಗಿದೆ. ಇನ್ನೂ ಖಾಸಗಿ ಆಸ್ಪತ್ರೆಯಲ್ಲಿರುವ ಜಿ.ಮಾರಿಮುತ್ತು ಪಾರ್ಥಿವ ಶರೀರಕ್ಕೆ ಸಿನೆಮಾ ತಾರೆಯರು ಶ್ರದ್ದಾಂಜಲಿ ಸಲ್ಲಿಸಿದ್ದಾರೆ. ಇನ್ನೂ ಮೃತ ದೇಹವನ್ನು ಅವರ ಹುಟ್ಟೂರಾದ ತೇಣಿ ಜಿಲ್ಲೆಯ ವಾರಸನಾಡು ಪಕ್ಕ ಕೊಂಡೊಯ್ಯಲು ನಿರ್ಧರಿಸಲಾಗಿದೆ ಎಂದು ಹೇಳಲಾಗಿದೆ. ಇನ್ನೂ ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಅವರ ಅಭಿಮಾನಿಗಳು ಹಾಗೂ ಸಿನಿಮಾ ಗಣ್ಯರು, ಕಲಾವಿದರು ಸಂತಾಪ ಸೂಚಿಸಿದ್ದಾರೆ.

ಇನ್ನೂ ಮಾರಿಮುತ್ತು ರವರು ತಮ್ಮ ಹುಟ್ಟೂರಾದ ತೇಣಿಯಿಂದ ಸಿನೆಮಾ ನಿರ್ದೇಶಕರಾಗುವ ಕನಸಿನೊಂದಿಗೆ ಚೆನೈಗೆ ಆಗಮಿಸಿದ್ದರು. ಬಳಿಕ ಅರಣ್ಮನೈ ಕಿಲಿ, ಎಲ್ಲಾಮೆ ಎನ್ ರಸತಾನ್ ಎಂಬ ಸಿನೆಮಾಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದರು. ಬಳಿಕ ಅನೇಕ ಸಿನೆಮಾಗಳಲ್ಲಿ ಸಹಾಯಕ ನಿರ್ದೇಶಕರಾಗಿಯೇ ಮುಂದುವರೆದರು. ಖ್ಯಾತ ನಿರ್ಮಾಪಕರಾದ ಮಣಿರತ್ನಂ, ವಸಂತ್, ಸೀಮಾನ್, ಎಸ್.ಜೆ.ಸೂರ್ಯ ರವರೊಂದಿಗೂ ಸಹ ಕೆಲಸ ಮಾಡಿದ್ದಾರೆ. 2008 ರಲ್ಲಿ ತೆರೆಕಂಡ ಕಣ್ಣುಂ ಕಣ್ಣುಂ ಸಿನೆಮಾದ ಮೂಲಕ ನಿರ್ದೇಶಕರಾದರು. 2010 ರಿಂದ ನಟನೆಯತ್ತ ಮುಖ ಮಾಡಿ ಅನೇಕ ತಮಿಳು ಸಿನೆಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡರು. ಬಳಿಕ ಅನೇಕ ಕಿರುತೆರೆ ಧಾರವಾಹಿಗಳಲ್ಲೂ ಸಹ ನಟಿಸಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದುಕೊಂಡಿದ್ದರು.