ಸ್ಟಾರ್ ನಟಿ ರಶ್ಮಿಕಾಳ ಮತ್ತೊಂದು ಡೀಪ್ ಫೇಕ್ ವಿಡಿಯೋ ವೈರಲ್, ಮತ್ತೊಮ್ಮೆ ರಶ್ಮಿಕಾಳನ್ನು ಟಾರ್ಗೆಟ್ ಮಾಡಿದ ಕಿಡಿಗೇಡಿಗಳು….!

Follow Us :

ಕೆಲವು ದಿನಗಳ ಹಿಂದೆಯಷ್ಟೆ ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣರವರ ಡೀಪ್ ಫೇಕ್ ವಿಡಿಯೋ ಒಂದು ಭಾರಿ ಸಂಚಲನ ಸೃಷ್ಟಿಸಿದ ವಿಚಾರ ತಿಳಿದೇ ಇದೆ. ಈ ವಿಡಿಯೋ ಕಾರಣದಿಂದ ಅನೇಕರು ರಶ್ಮಿಕಾರವರಿಗೆ ಬೆಂಬಲ ನೀಡುತ್ತಾ ಡೀಪ್ ಫೇಕ್ ವಿಡಿಯೋ ವಿರುದ್ದ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸಿನೆಮಾ ಸೆಲೆಬ್ರೆಟಿಗಳ ಜೊತೆಗೆ ಅಭಿಮಾನಿಗಳು ಆಗ್ರಹಿಸಿದ್ದರು. ಇದೀಗ ಮತ್ತೊಮ್ಮೆ ರಶ್ಮಿಕಾರನ್ನು ಟಾರ್ಗೆಟ್ ಮಾಡಿದ್ದಾರೆ. ಮತ್ತೊಂದು ಡೀಪ್ ಫೇಕ್ ವಿಡಿಯೋ ಹರಿಬಿಟ್ಟಿದ್ದಾರೆ.

ನಟಿ ರಶ್ಮಿಕಾ ಕಡಿಮೆ ಸಮಯದಲ್ಲೇ ಸ್ಟಾರ್‍ ಡಂ ಗಿಟ್ಟಿಸಿಕೊಂಡ ನಟಿಯಾಗಿದ್ದಾರೆ. ಕೊನೆಯದಾಗಿ ಆಕೆ ಯಾನಿಮಲ್ ಎಂಬ ಸಿನೆಮಾದ ಮೂಲಕ ಬ್ಲಾಕ್ ಬ್ಲಸ್ಟರ್‍ ಹಿಟ್ ಪಡೆದುಕೊಂಡರು. ಸುಮಾರು ಆರು ನೂರು ಕೋಟಿ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. ಈ ಸಿನೆಮಾದಲ್ಲಿ ರಶ್ಮಿಕಾ ಓವರ್‍ ಆಗಿ ಬೋಲ್ಡ್ ದೃಶ್ಯಗಳಲ್ಲಿ ನಟಿಸಿದ್ದಾರೆ ಎನ್ನಲಾಗಿದೆ. ಇನ್ನೂ ಕೆಲವು ದಿನಗಳ ಹಿಂದೆಯಷ್ಟೆ ರಶ್ಮಿಕಾ ಡೀಪ್ ಫೇಕ್ ವಿಡಿಯೋ ಕಾರಣದಿಂದಾಗಿ ಭಾರಿ ಸುದ್ದಿಯಾಗಿದ್ದರು. ಬೇರೊಬ್ಬರ ದೇಹಕ್ಕೆ ರಶ್ಮಿಕಾ ಮುಖವನ್ನು ಸೇರಿಸಿ ವಿಡಿಯೋ ಮಾಡಿದ್ದು, ವಿಡಿಯೋ ಕಡಿಮೆ ಸಮಯದಲ್ಲೇ ಭಾರಿ ವೈರಲ್ ಆಗಿದೆ. ಎಐ ತಂತ್ರಜ್ಞಾನ ಬಳಸಿ ಡೀಪ್ ಫೇಕ್ ವಿಡಿಯೋ ಮಾಡಿ ಹರಿಬಿಟ್ಟಿದ್ದರು. ಇದೀಗ ಅದೇ ಮಾದರಿಯ ವಿಡಿಯೋ ಮತ್ತೊಮ್ಮೆ ಹರಿಬಿಟ್ಟಿದ್ದು ವೈರಲ್ ಆಗುತ್ತಿದೆ.

ಈ ಹಿಂದೆ ಹಂಚಿಕೊಂಡಂತಹ ಡೀಪ್ ಫೇಕ್ ವಿಡಿಯೋ ಮಾದರಿಯಲ್ಲೇ ಮತ್ತೊಂದು ವಿಡಿಯೋ ಹರಿಬಿಟ್ಟಿದ್ದಾರೆ. ಈ ವಿಡಿಯೋ ಸಹ ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. AI ತಂತ್ರಜ್ಞಾನ ಬಳಸಿ ಈ ವಿಡಿಯೋ ಮಾಡಿದ್ದು, ಕೂಡಲೇ ಕಿಡಿಗೇಡಿಗಳ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಅಭಿಮಾನಿಗಳು ಸೇರಿದಂತೆ ಅನೇಕರು ಕಿಡಿಕಾರುತ್ತಿದ್ದಾರೆ. ಸದ್ಯ ಸೌತ್ ಅಂಡ್ ನಾರ್ತ್‌ನಲ್ಲಿ ಭಾರಿ ಫೇಂ ಪಡೆದುಕೊಂಡಿರುವ ರಶ್ಮಿಕಾಗೆ ಪದೇ ಪದೇ ಈ ರೀತಿಯಾಗುತ್ತಿರುವುದು ಸರಿಯಲ್ಲ ಎಂದು ಅಭಿಮಾನಿಗಳು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಅಂತಹ ಕಿಡಿಗೇಡಿಗಳ ವಿರುದ್ದ ಅಧಿಕಾರಿಗಳು ಹಾಗೂ ಪೊಲೀಸರು ಕೂಡಲೇ ಕಾನೂನು ರೀತ್ಯ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹ ವ್ಯಕ್ತಪಡಿಸುತ್ತಿದ್ದಾರೆ.

ಸದ್ಯ ರಶ್ಮಿಕಾ ಯಾನಿಮಲ್ ಸಿನೆಮಾದ ಮೂಲಕ ಭಾರಿ ಸಕ್ಸಸ್ ಪಡೆದುಕೊಂಡಿದ್ದಾರೆ. ಸದ್ಯ ಆಕೆ ಪುಷ್ಪಾ-2 ಸಿನೆಮಾದ ಶೂಟಿಂಗ್ ಸೆಟ್ ಗೆ ಇತ್ತೀಚಿಗಷ್ಟೆ ಎಂಟ್ರಿ ಕೊಟ್ಟಿದ್ದಾರೆ ಎನ್ನಲಾಗಿದೆ. ಇದರ ಜೊತೆಗೆ ಆಕೆ ದಿ ಗರ್ಲ್ ಫ್ರೆಂಡ್, ರೈನ್ ಬೋ ಮೊದಲಾದ ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ಅದೇ ರೀತಿ ಸೋಷಿಯಲ್ ಮಿಡಿಯಾದಲ್ಲಿ ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿರುತ್ತಾರೆ.