ತನ್ನ ಜೀವನದಲ್ಲಾದ ಭಯಂಕರ ಘಟನೆ ಬಗ್ಗೆ ವಿಶಾಲ್ ಕಾಮೆಂಟ್ಸ್, ಸಾವಿನಿಂದ ಕ್ಷಣದಲ್ಲಿ ತಪ್ಪಿಸಿಕೊಂಡ್ರಂತೆ….!

ಕಾಲಿವುಡ್ ನ ಸ್ಟಾರ್‍ ನಟರಲ್ಲಿ ವಿಶಾಲ್ ಸಹ ಒಬ್ಬರಾಗಿದ್ದಾರೆ. ಆತ ಸಾಲು ಸಾಲು ಹಿಟ್ ಸಿನೆಮಾಗಳ ಮೂಲಕ ದೊಡ್ಡ ಅಭಿಮಾನಿಗ ಬಳಗವನ್ನು ಸಹ ದಕ್ಕಿಸಿಕೊಂಡಿದ್ದಾರೆ. ಇತ್ತೀಚಿಗೆ ಅವರು ಸದಾ ಒಂದಲ್ಲ ಒಂದು ವಿಚಾರದ ಕಾರಣದಿಂದ ಸುದ್ದಿಯ್ಲಲೇ ಇರುತ್ತಾರೆ. ಸಿನೆಮಾಗಳ ಜೊತೆಗೆ ವೈಯುಕ್ತಿಕ ವಿವಾದಗಳ ಕಾರಣದಿಂದ ಸುದ್ದಿಯಾಗುತ್ತಿರುತ್ತಾರೆ. ಕೇವಲ ತಮಿಳು ಮಾತ್ರವಲ್ಲದೇ ತೆಲುಗಿನಲ್ಲೂ ಸಹ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ಇದೀಗ ವಿಶಾಲ್ ತನ್ನ ಜೀವನದಲ್ಲಾದಂತಹ ಒಂದು ಭಯಂಕರವಾದ ಘಟನೆಯ ಬಗ್ಗೆ ಮಾತನಾಡಿದ್ದು, ಕ್ಷಣ ಮಾತ್ರದಲ್ಲೇ ಸಾವಿನಿಂದ ಪಾರಾಗಿದ್ದರಂತೆ.

ವಿಭಿನ್ನ ಸಿನೆಮಾಗಳ ಮೂಲಕ ಫೇಂ ಪಡೆದುಕೊಂಡ ನಟ ವಿಶಾಲ್ ಇದೀಗ ಮಾರ್ಕ್ ಆಂಟೋನಿ ಸಿನೆಮಾದಲ್ಲಿ ನಟಿಸಿದ್ದು, ಈ ಸಿನೆಮಾದಲ್ಲಿ ವಿಲನ್ ಆಗಿ ಎಸ್.ಜೆ.ಸೂರ್ಯ ನಟಿಸುತ್ತಿದ್ದು, ಈ ಸಿನೆಮಾದ ಮೇಲೆ ಭಾರಿ ನಿರೀಕ್ಷೆ ಹುಟ್ಟಿದೆ. ಅಧಿಕ್ ರವಿಚಂದ್ರನ್ ಈ ಸಿನೆಮಾ ನಿರ್ದೇಶನ ಮಾಡಿದ್ದು, ಈ ಸಿನೆಮಾ ಇದೇ ಸೆ.15 ರಂದು ತೆರೆಕಾಣಲಿದೆ. ಈ ಹಿನ್ನೆಲೆಯಲ್ಲಿ ಸಿನೆಮಾದ ಪ್ರಮೋಷನ್ ಸಹ ಜೋರಾಗಿಯೇ ನಡೆಯುತ್ತಿದೆ. ಈ ಸಿನೆಮಾದ ಪ್ರಮೋಷನ್ ನಲ್ಲಿ ವಿಶಾಲ್ ಶಾಕಿಂಗ್ ವಿಚಾರವೊಂದನ್ನು ರಿವೀಲ್ ಮಾಡಿದ್ದಾರೆ. ಮಾರ್ಕ್ ಆಂಟೋನಿ ಸಿನೆಮಾದ ಶೂಟೀಂಗ್ ವೇಳೆ ನಡೆದಂತಹ ಪ್ರಮಾದದ ಬಗ್ಗೆ ಹೇಳಿದ್ದಾರೆ. ಅದೃಷ್ಟದಿಂದ ಆತ ಪ್ರಮಾದದಿಂದ ಪಾರಾಗಿದ್ದಾಗಿ ತಿಳಿಸಿದ್ದಾರೆ.

ಮಾರ್ಕ್ ಆಂಟೋನಿ ಸಿನೆಮಾದ ಶೂಟಿಂಗ್ ವೇಳೆ ಭಾರಿ ಅಪಾಯದಿಂದ ವಿಶಾಲ್ ಪಾರಾಗಿದ್ದರಂತೆ. ಈ ಬಗ್ಗೆ ವಿಶಾಲ್ ಮಾತನಾಡಿದ್ದಾರೆ. ಸೆಟ್ಸ್ ನಲ್ಲಿ ನನಗೆ ದೊಡ್ಡ ಪ್ರಮಾದ ಎದುರಾಗಿತ್ತು. ಅದು ನನಗೆ ಪುನರ್ಜನ್ಮ ಸಿಕ್ಕಂತಹ ಘಟನೆಯಾಗಿದೆ. ಫೈಟಿಂಗ್ ದೃಶ್ಯವೊಂದನ್ನು ಮುಗಿಸಿ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದಾಗ ಒಂದು ದೊಡ್ಡ ಟ್ರಕ್ ನನ್ನ ಕಡೆಗೆ ಬಂತು. ನಾನು ಅದನ್ನು ಸರಿಯಾದ ಸಮಯಕ್ಕೆ ಗಮನಿಸಿದೆ. ಅದರಿಂದ ನಾನು ತಪ್ಪಿಸಿಕೊಂಡೆ. ಆ ಟ್ರಕ್ ಬಲವಾಗಿ ಸೆಟ್ ಗೆ ಡಿಕ್ಕಿ ಹೊಡೆಯಿತು. ಅದೃಷ್ಟದಿಂದ ನಾನು ಅಪಾಯದಿಂದ ಪಾರಾದೆ. ಸುಮಾರು ಹತ್ತು ನಿಮಿಷಗಳ ಕಾಲ ಮಂಕಾಗಿಬಿಟ್ಟೆ. ಸಿಬ್ಬಂದಿ ಬಂದು ಕೇಳಿದರು ನಾನು ಹತ್ತು ನಿಮಿಷ ನನ್ನನ್ನು ಮಾತಾಡಿಸಬೇಡಿ ಎಂದಿದ್ದೆ. ಅಷ್ಟೊಂದು ಭಯ ಆಗಿತ್ತು ಎಂದರು.

ಇನ್ನೂ ಮಾರ್ಕ್ ಆಂಟೋನಿ ಸಿನೆಮಾದಲ್ಲಿ ವಿಶಾಲ್ ಜೊತೆಗೆ ಎಸ್.ಜೆ.ಸೂರ್ಯ ಸಹ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸೂರ್ಯ ರವರನ್ನು ತನ್ನ ಸ್ವಂತ ತಮ್ಮನಂತೆ ನೋಡಿಕೊಂಡಿದ್ದೇನೆ ಎಂದು ವಿಶಾಲ್ ಹೇಳಿದ್ದಾರೆ. ಇನ್ನೂ ಎಲ್ಲರೂ ಹಿರೋ ಗಾಗಿ ಹುಡುಕುತ್ತಿರುತ್ತಾರೆ, ಆದರೆ ನಾನು ಸೂರ್ಯ ಗಾಗಿ ಹುಡುಕುತ್ತಿರುತ್ತೇನೆ ಎಂದು ವಿಶಾಲ್ ಹೇಳಿದ್ದಾರೆ. ಇನ್ನೂ ಈ ಸಂಬಂಧ ವಿಡಿಯೋ ಕ್ಲಿಪ್ ಗಳು ಸೊಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ.