ಗಂಡಸು ಎಂದು ತಿಳಿಯಬೇಕಾದರೇ ಮದುವೆಗೂ ಮುಂಚೆ ಸೆಕ್ಸ್ ಮಾಡಬೇಕೆಂದ ನಟಿ ಶ್ರೀರಾಪಾಕ, ಬೋಲ್ಡ್ ಕಾಮೆಂಟ್ಸ್ ವೈರಲ್…..!

Follow Us :

ಬಿಗ್ ಬಾಸ್ ಬ್ಯೂಟಿ ಶ್ರೀರಾಪಾಕ ಆರ್‍.ಜಿ.ವಿ ರವರ ಸಿನೆಮಾದಲ್ಲಿ ಬೋಲ್ಡ್ ಆಗಿ ನಟಿಸಿ ಫೇಂ ಪಡೆದುಕೊಂಡರು. ದೇಶಮುದುರು, ಚಂದಮಾಮ, ನಚ್ಚಾವುಲೇ ಸಿನೆಮಾಗಳಿಗೆ ಆಕೆ ಫ್ಯಾಷನ್ ಡಿಸೈನರ್‍ ಆಗಿ ಸಹ ಕೆಲಸ ಮಾಡಿದ್ದಾರೆ. ಆದರೆ ರಾಮ್ ಗೋಪಾಲ್ ವರ್ಮಾ ನಿರ್ದೇಶನದ ನಗ್ನಂ ಎಂಬ ಸಿನೆಮಾದ ಮೂಲಕ ಆಕೆ ಹಾಟ್ ಟಾಪಿಕ್ ಆದರು. ಇದೀಗ ಆಕೆ ಮದುವೆಯ ಬಗ್ಗೆ ಬೋಲ್ಡ್ ಕಾಮೆಂಟ್ಸ್ ಮಾಡುವ ಮೂಲಕ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ. ಅಷ್ಟಕ್ಕೂ ಮದುವೆಯ ಬಗ್ಗೆ ಆಕೆ ನೀಡಿದ ಹೇಳಿಕೆಯಾದರೂ ಏನು ಎಂಬ ವಿಚಾರಕ್ಕೆ ಬಂದರೇ,

ಸಿನಿರಂಗದ ಕೆಲ ಸೆಲೆಬ್ರೆಟಿಗಳಿಗೆ ಏನಾದರೂ ಒಂದು ಕಾಂಟ್ರವರ್ಸಿಯಲ್ಲಿ ಸಿಲುಕಿಕೊಳ್ಳುವುದು ಇಷ್ಟ ಎನ್ನಿಸುತ್ತದೆ. ಅದರಲ್ಲೂ ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಟಾಪಿಕ್ ಆಗಲು ಕೆಲವೊಮ್ಮೆ ಕಾಂಟ್ರವರ್ಸಿ ಹೇಳಿಕೆಗಳನ್ನು ನೀಡಿ ವಿವಾದಗಳಿಗೆ ತುತ್ತಾಗುತ್ತಿರುತ್ತಾರೆ. ಅದರಲ್ಲೂ ಕೆಲ ನಟಿಯರಂತೂ ಬೇಡಿ ಬೇಡಿ ಕೆಲವೊಂದು ವಿವಾದಗಳಿಗೆ ತುತ್ತಾಗುತ್ತಿರುತ್ತಾರೆ. ಬೋಲ್ಡ್ ಕಾಮೆಂಟ್ ಮಾಡುವವರಲ್ಲಿ ಆರ್‍.ಜಿ.ವಿ ಮೊದಲ ಸ್ಥಾನದಲ್ಲಿದ್ದರೇ, ಅವರ ಸಿನೆಮಾಗಳಲ್ಲಿ ನಟಿಸಿದವರೂ ಸಹ ಕೆಲವೊಮ್ಮೆ ವಿವಾದಗಳಿಗೆ ಗುರಿಯಾಗುತ್ತಿರುತ್ತಾರೆ. ಇದೀಗ ಆರ್‍.ಜಿ.ವಿ ನಗ್ಮಂ ಎಂಬ ಸಿನೆಮಾದಲ್ಲಿ ನಟಿಸಿದ ಶ್ರೀರಾಪಾಕ ಮದುವೆಯ ಬಗ್ಗೆ ಬೋಲ್ಡ್ ಕಾಮೆಂಟ್ಸ್ ಮಾಡಿದ್ದು, ಆಕೆಯ ಹೇಳಿಕೆಗಳು ಇದೀಗ ಸೊಷಿಯಲ್ ಮಿಡಿಯಾದಲ್ಲಿ ಬಿರುಗಾಳಿಯನ್ನೇ ಸೃಷ್ಟಿಸಿದೆ.

ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಶ್ರೀರಾಪಕ ಬೋಲ್ಡ್ ಕಾಮೆಂಟ್ಸ್ ಮಾಡಿದ್ದಾರೆ. ಮದುವೆಯ ಬಗ್ಗೆ ಪ್ರಶ್ನೆಯೊಂದು ಎದುರಾಗಿದ್ದು, ಮದುವೆಗೆ ಮುಂಚೆ ಸೆಕ್ಸ್ ಮಾಡುವುದು ತಪ್ಪಲ್ಲ. ಮದುವೆಯಾದ ಬಳಿಕ ಆತ ಗಂಡಸು ಅಲ್ಲ ಎಂದು ತಿಳಿದರೇ ಜೀವನ ಪರ್ಯಂತ ನೋವು ಪಡಬೇಕು. ತನ್ನ ಸ್ನೇಹಿತೆಯ ಜೀವನದಲ್ಲಾದ ಘಟನೆಯೊಂದನ್ನು ಸಹ ವಿವರಿಸಿದ್ದಾರೆ. ನನ್ನ ಸ್ನೇಹಿತೆ ಓರ್ವ ವೈದ್ಯನನ್ನು ಮದುವೆಯಾದಳು. ಆಕೆಯ ಮೊದಲನೆ ದಿನ ಆತ ಗೇ ಎಂದು ತಿಳಿದಿದೆ. ಅದರಿಂದ ಆಕೆ ತುಂಬಾ ನೋವನ್ನು ಅನುಭವಿಸಿದ್ದಾಳೆ. ಒರ್ವ ಡಾಕ್ಟರ್‍ ಗೆ ಆ ರೀತಿಯಾಗಿ ನಡೆದರೇ ಯೋಚನೆ ಮಾಡಿ. ಮದುವೆಗೆ ಮುಂಚೆ ಸೆಕ್ಸ್ ನಡೆದರೇ ಆತ ಗಂಡಸು ಅಥವಾ ಅಲ್ಲವೇ ಎಂಬುದು ತಿಳಿಯುತ್ತದೆ. ನನ್ನ  ದೃಷ್ಟಿಯಲ್ಲಿ ಸೆಕ್ಸ್ ಎಂಬುದು ಎಲ್ಲರಿಗೂ ತುಂಬಾನೆ ಅವಶ್ಯಕ. ಅದು ನೀಡಲಾರದಂತಹ ವ್ಯಕ್ತಿಯನ್ನು ಮದುವೆಯಾಗಿ ನೋವನ್ನು ಅನುಭವಿಸುವುದು ಸರಿಯಲ್ಲ ಎಂದು ತನ್ನ ಅಭಿಪ್ರಾಯವನ್ನು ಬೋಲ್ಡ್ ಆಗಿ ಹೊರಹಾಕಿದ್ದಾರೆ.

ಇನ್ನೂ ಶ್ರೀರಾಪಕ ಕಾಮೆಂಟ್ ಗಳು ವೈರಲ್ ಆಗುತ್ತಿವೆ. ಈ ಕಾಮೆಂಟ್ ಗಳ ಬಗ್ಗೆ ನೆಟ್ಟಿಗರು ವಿವಿಧ ರೀತಿ ವಿಮರ್ಶೆ ಮಾಡುತ್ತಿದ್ದಾರೆ. ಕೆಲವರು ಆಕೆಗೆ ಬೆಂಬಲ ನೀಡಿದರೇ ಮತ್ತೆ ಕೆಲವರು ಆಕೆಯ ಕಾಮೆಂಟ್ ಗಳನ್ನು ವಿರೋಧಿಸುತ್ತಿದ್ದಾರೆ. ಅವಕಾಶಗಳಿಲ್ಲದೇ ಆಕೆ ಇಂತಹ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ ಎಂದು ವಿಮರ್ಶೆ ಮಾಡಿದರೇ, ಮತ್ತೆ ಕೆಲವರು ರಾಪಾಕ ನೀಡಿದ ಕಾಮೆಂಟ್ಸ್ ನಲ್ಲಿ ಯಾವುದೇ ತಪ್ಪಿಲ್ಲ ಎಂದಿದ್ದಾರೆ.