ಶಕ್ತಿ ಯೋಜನೆಯ ಎಫೆಕ್ಟ್ ಮಗುವಿನೊಂದಿಗೆ ಬಸ್ ಡೋರ್ ನಲ್ಲಿ ಮಹಿಳೆಯ ಪ್ರಯಾಣ….!

ಕರ್ನಾಟಕ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ಒಂದಾದ ಶಕ್ತಿ ಯೋಜನೆಗೆ ಭಾರಿ ರೆಸ್ಪಾನ್ಸ್ ಬರುತ್ತಿದೆ. ಈ ಯೋಜನೆಯಡಿ ಮಹಿಳೆಯರಿ ಕೆ.ಎಸ್.ಆರ್‍.ಟಿ.ಸಿ ಬಸ್ ಗಳಲ್ಲಿ ಉಚಿತ ಪ್ರಯಾಣ ಮಾಡುವಂತಹ ಅವಕಾಶ ನೀಡಲಾಗಿತ್ತು, ಸರ್ಕಾರಿ ಬಸ್ ಗಳು…

ಕರ್ನಾಟಕ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ಒಂದಾದ ಶಕ್ತಿ ಯೋಜನೆಗೆ ಭಾರಿ ರೆಸ್ಪಾನ್ಸ್ ಬರುತ್ತಿದೆ. ಈ ಯೋಜನೆಯಡಿ ಮಹಿಳೆಯರಿ ಕೆ.ಎಸ್.ಆರ್‍.ಟಿ.ಸಿ ಬಸ್ ಗಳಲ್ಲಿ ಉಚಿತ ಪ್ರಯಾಣ ಮಾಡುವಂತಹ ಅವಕಾಶ ನೀಡಲಾಗಿತ್ತು, ಸರ್ಕಾರಿ ಬಸ್ ಗಳು ತುಂಬಿ ತುಳುಕುತ್ತಿವೆ. ಜೊತೆಗೆ ಈ ಯೋಜನೆಯಿಂದ ಕೆಲವೊಂದು ಸಮಸ್ಯೆಗಳೂ ಸಹ ಎದುರಾಗುತ್ತಿವೆ. ಮಹಿಳೆಯೊಬ್ಬರು ಬಸ್ ನಲ್ಲಿ ಆಸನವಿಲ್ಲದೇ ಬಸ್ ಡೋ‌ರ್‍ ಬಳಿ ಕುಳಿತು ಪ್ರಯಾಣ ಮಾಡಿದ್ದಾರೆ. ಈ ಘಟನೆ ಗದಗದಲ್ಲಿ ನಡೆದಿದೆ.

ಗದಗ ನಗರದಿಂದ ಜಿಲ್ಲಾಸ್ಪತ್ರೆಗೆ ಹೋಗುವ ಬಸ್ ನಲ್ಲಿ ಈ ಘಟನೆ ನಡೆದಿದದೆ. ಪುಟ್ಟ ಮಗು ಹಾಗೂ ಆಕೆಯ ತಾಯಿ ಬಸ್ ಬಾಗಿಲಿನ ಮೆಟ್ಟಿಲಿನ ಮೇಲೆ ಕುಳಿತು ಪ್ರಯಾಣ ಮಾಡಿದ್ದಾರೆ. ಮಗು ನಿದ್ದೆ ಮಾಡುತ್ತಿದೆ. ಮಹಿಳೆಯ ಮಗುವಿನೊಂದಿಗೆ ಡೋರ್‍ ನಲ್ಲಿ ಕುಳಿತು ಪ್ರಯಾಣ ಮಾಡುತ್ತಿರುವುದು ಅಪಾಯಕ್ಕೆ ಆಹ್ವಾನ ಕೊಟ್ಟಂತಿದೆ. ಕೊಂಚ ಯಾಮಾರಿದರೂ ಅಪಾಯ ಕಟ್ಟಿಟ್ಟ ಬುತ್ತಿಯಾಗಿತ್ತು. ಇನ್ನೂ ಬಸ್ ಮಹಿಳೆ ಮಗುವನ್ನು ಎತ್ತಿಕೊಂಡು ಕಾಣಿಸಿಕೊಂಡರೂ ಸಹ ಬಸ್ ನಲ್ಲಿರುವಂತಹವರು ಯಾರೂ ಸೀಟ್ ಬಿಟ್ಟುಕೊಟ್ಟಿರಲಿಲ್ಲ. ಮಹಿಳೆಯರಿಗೆ ಬಸ್ ಪ್ರಯಾಣ ಫ್ರೀ ಎಂದಾಗಿನಿಂದಲೂ ಬಸ್ ಗಳಲ್ಲಿ ಪುಲ್ ರಶ್ ಆಗುತ್ತಿದೆ. ಈಗಾಗಲೇ ಬಸ್ ನಲ್ಲಿ ಆಸನಗಳಿಗಾಗಿ ಗಲಾಟೆಗಳು ಮಾಡಿಕೊಂಡ ಅನೇಕ ಘಟನೆಗಳನ್ನು ಸಹ ನಾವು ಕೇಳಿದ್ದೇವೆ.

ಇನ್ನೂ ಅದೇ ರೀತಿಯ ಚಲಿಸುತ್ತಿದ್ದ ಬಸ್ ನ ಹಿಂಬದಿಯಲ್ಲಿ ವೃದ್ದನೋರ್ವ ಸವಾರಿ ಮಾಡಿದ್ದಾರೆ. ಈ ಘಟನೆ ಚಿಕ್ಕೊಡಿಯಿಂದ ಘಟಪ್ರಭಾ ಹುಕ್ಕೇರಿಗೆ ಹೋಗುವ ಮಾರ್ಗದಲ್ಲಿ ನಡೆದಿದೆ. ಈ ವೃದ್ದಿ ನಿಂತುಕೊಂಡೇ ಸುಮಾರು ಹತ್ತು ಕಿ.ಮೀ ಕ್ರಮಿಸಿದ್ದಾರೆ ಎಂದು ಹೇಳಲಾಗಿದೆ. ಕೊಂಚ ಆಯಾ ತಪ್ಪಿದರೂ ಆ ಹಿರಿಯ ಜೀವ ಪ್ರಾಣ ಕಳೆದುಕೊಳ್ಳಬೇಕಾಗುತ್ತದೆ. ಅಪಾಯ ಅಂತ ಗೊತ್ತಿದ್ದರೂ ಆ ವೃದ್ಧ ಜೋತು ಬಿದ್ದು ಪ್ರಯಾಣ ಮಾಡಿದ್ದಾರೆ.  ಇನ್ನೂ ಅನೇಕ ಕಡೆ ಬಸ್ ಗಳು ಪುಲ್ ರಶ್ ಆದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳೂ ಸಹ ಜೋತು ಬಿದ್ದು ಪ್ರಯಾಣ ಮಾಡುವ ಸ್ಥಿತಿ ಸಹ ಎದುರಾಗಿದೆ. ಈ ಸಮಸ್ಯೆ ಬಗೆಹರಿಸಲು ಸರ್ಕಾರ ಅಗತ್ಯ ಕ್ರಮ ತೆಗೆದುಕೊಳ್ಳಬೇಕೆಂದು ಅನೇಕರು ಒತ್ತಾಯ ಮಾಡಿದ್ದಾರೆ.