ಬೊಂಬೆಗಳ ಜೊತೆಗೆ ಆಟ ಆಡುವ ವಯಸ್ಸಿನಲ್ಲಿ ಹಾವುಗಳ ಜತೆ ಆಟ ಆಡುವ ಬಾಲಕಿ, ವೈರಲ್ ಆದ ವಿಡಿಯೋ…..!

Follow Us :

ಮಕ್ಕಳು ಆಟ ಆಡುವಂತಹ ವಯಸ್ಸಿನಲ್ಲಿ ಬೊಂಬೆಗಳ ಜೊತೆ ಆಟವಾಡುವುದನ್ನು ನಾವು ನೋಡಿದ್ದೇವೆ. ಆದರೆ ಇಲ್ಲೊಬ್ಬಳು ಬಾಲಕಿ ಹಾವುಗಳ ಜೊತೆ ಆಟ, ಅವುಗಳ ಜೊತೆ ಮಲಗುವುದು ಮಾಡುತ್ತಾರೆ. ಶಾಲೆಗೆ ಹೋಗಿ ಬರುವುದು ಬಿಟ್ಟರೇ ಆಕೆ ಸದಾ ಹಾವುಗಳ ಜೊತೆಗೆ ಇರುತ್ತಾಳೆ. ಈ ಬಗ್ಗೆ ಆಕೆ ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಕೆಲವೊಂದು ವಿಡಿಯೋಗಳನ್ನು ಹಂಚಿಕೊಂಡಿದ್ದು, ವಿಡಿಯೋ ವೈರಲ್ ಆಗುತ್ತಿವೆ.

ಹಾವುಗಳನ್ನು ಕಂಡರೇ ಬಹುತೇಕ ಎಲ್ಲರಿಗೂ ಭಯ ಇದ್ದೇ ಇರುತ್ತದೆ. ನಮ್ಮ ಪಕ್ಕ ಹಾವು ಹೋದರೂ ಸಹ ಜೀವ ಹೋದಂತಾಗುತ್ತದೆ. ಅಂತಹುದರಲ್ಲಿ ಆರಿಯಾನಾ ಎಂಬ ಬಾಲಕಿ ಬೊಂಬೆಗಳಂತೆ ಹಾವುಗಳೊಂದಿಗೆ ಆಟವಾಡುವುದು, ಮಲಗುವುದು ಮಾಡುತ್ತಾ ಎಲ್ಲರನ್ನೂ ಶಾಕ್ ಆಗುವಂತೆ ಮಾಡಿದ್ದಾರೆ. ಜೀವಂತ ಹಾವುಗಳೊಂದಿಗೆ ಆಕೆ ಇರುವುದನ್ನು ಕಂಡು ಅನೇಕರು ಶಾಕ್ ಆಗಿದ್ದಾರೆ, ಹಾವುಗಳ ಪ್ರೇಮಿ ಆರಿಯಾನಾ ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಾವುಗಳೊಂದಿಗೆ ಇರುವ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋಗಳಲ್ಲಿ ಆಕೆ ಹಾವುಗಳೊಂದಿಗೆ ಎಷ್ಟರ ಮಟ್ಟಿಗೆ ಸಲುಗೆಯಿಂದ ಇರುತ್ತಾರೆ ಎಂಬುದನ್ನು ನಾವು ಕಾಣಬಹುದಾಗಿದೆ.

ಬೊಂಬೆಗಳು, ಆಟಿಕೆಗಳೊಂದಿಗೆ ಆಟ ಆಡುವ ಮಕ್ಕಳನ್ನು ನಾವು ನೋಡಿದ್ದೇವೆ. ಆದರೆ ಆರಿಯಾನಾ ಮಾತ್ರ ಹಾವುಗಳನ್ನೆ ಸ್ನೇಹಿತರು, ಬೊಂಬೆಗಳು, ಆಟಿಕೆಗಳು ಎಂದು ಅವುಗಳೊಂದಿಗೆ ಸಮಯ ಕಳೆಯುತ್ತಾಳೆ. ಜೀವಂತ ಹಾವುಗಳೊಂದಿಗೆ ಬಾಲಕಿ ಆರಿಯಾನಾ ಮಲಗುತ್ತಾಳೆ. ಇನ್ನೂ ಈ ಸಂಬಂಧ ಆಕೆ ಕೆಲವೊಂದು ವಿಡಿಯೋಗಳನ್ನು ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಕಡಿಮೆ ಸಮಯದಲ್ಲೇ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಮೂರು ಮಿಲಿಯನ್ ಗೂ ಅಧಿಕ ಮಂದಿ ಈ ವಿಡಿಯೋ ವಿಕ್ಷಣೆ ಮಾಡಿದ್ದು, ವಿವಿಧ ರೀತಿಯ ಕಾಮೆಂಟ್ ಗಳನ್ನು ಸಹ ಮಾಡುತ್ತಿದ್ದಾರೆ.