ಸಂದರ್ಶನದಲ್ಲಿದ್ದ ವಾಯ್ಸ್ ಈಗ ಏಕಿಲ್ಲ ರಕ್ಷಕ್ ಎಂದು ಪ್ರಶ್ನೆ ಮಾಡಿದ ಕಿಚ್ಚ ಸುದೀಪ್….!

Follow Us :

ಕನ್ನಡದ ಕಿರುತೆರೆಯಲ್ಲಿ ಹೆಚ್ಚು ಟಿ.ಆರ್‍.ಪಿ ಹೊಂದಿರುವ ಶೋಗಳಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 10 ಎಂದು ಹೇಳಬಹುದಾಗಿದೆ. ಈ ಸೀಸನ್ ಜರ್ನಿ ಮುಗಿದಿದ್ದು, ಜ.27 ರಂದು ಗ್ರಾಂಡ್ ಫಿನಾಲೆಗೆ ಅದ್ದೂರಿಯಾಗಿ ಒಪೆನ್ ಆಗಿದೆ. ಈ ಶೋ ನಲ್ಲಿ ಆರು ಮಂದಿ ಫೈನಲಿಸ್ಟ್ ಗಳು ಈ ಹಿಂದೆ ಎಲಿಮಿನೇಟ್ ಆದ ಸ್ಫರ್ಧಿಗಳು ಭಾಗವಹಿಸಿದ್ದಾರೆ. ಈ ಸಮಯದಲ್ಲಿ ರಕ್ಷಕ್ ಗೆ ಸುದೀಪ್ ಪ್ರಶ್ನೆ ಮಾಡುವ ಮೂಲಕ ಪರೋಕ್ಷವಾಗಿ  ಕಿವಿಹಿಂಡುವ ಕೆಲಸ ಮಾಡಿದ್ದಾರೆ. ಅಷ್ಟಕ್ಕೂ ಸುದೀಪ್ ರವರು ಈ ಪ್ರಶ್ನೆ ಕೇಳಿದ್ದಾದರೂ ಏಕೆ ಎಂಬ ವಿಚಾರಕ್ಕೆ ಬಂದರೇ,

ಕನ್ನಡದ ಬಿಗ್ ಬಾಸ್ ಸೀಸನ್ 10 ಗ್ರಾಂಡ್ ಫಿನಾಲೆ ಅದ್ದೂರಿಯಾಗಿ ಒಪೆನಿಂಗ್ ಪಡೆದುಕೊಂಡಿದ್ದು, ಈ ವೇಳೆ ಎಲಿಮಿನೇಟ್ ಆದಂತಹ ಸ್ಫರ್ಧಿಗಳೂ ಸಹ ಭಾಗಿಯಾಗಿದ್ದರು. ಈ ಸಮಯದಲ್ಲಿ ಎಲ್ಲರನ್ನೂ ಸುದೀಪ್ ಮಾತನಾಡುತ್ತಿರುತ್ತಾರೆ. ಬಳಿಕ ರಕ್ಷಕ್ ಮೊದಲಿಗೆ ನಿಮ್ಮ ಕ್ಷಮೆ ಕೇಳಬೇಕು ಎಂದು ರಕ್ಷಕ್ ಸುದೀಪ್ ರವರನ್ನು ಕೇಳಿದ್ದಾರೆ. ಈ ವೇಳೆ ಸುದೀಪ್ ಮಾತನಾಡುತ್ತಾ ಅದೆಲ್ಲಾ ಇರಲಿ ಪರವಾಗಿಲ್ಲ. ಸಂದರ್ಶನದಲ್ಲಿದ್ದ ವಾರ್ಯ್ಸ್ ಈಗೇಕಿಲ್ಲ ಎಂದು ಸುದೀಪ್ ಪ್ರಶ್ನೆ ಕೇಳಿದ್ದಾರೆ. ನೀವು ಎದುರಿಗೆ ಇದ್ದೀರಲ್ಲ, ಅದಕ್ಕೆ ಗೌರವ ತುಸು ಹೆಚ್ಚು ಎಂದು ರಕ್ಷಕ್ ಹೇಳಿದ್ದಾರೆ.

ಬಳಿಕ ಸುದೀಪ್ ಪ್ರತಿಕ್ರಿಯೆ ನೀಡಿ ನಿಮಗೆ ಯಾರ ಬಗ್ಗೆಯಾದರು ಮಾತನಾಡುವ ಅಧಿಕಾರವಿದೆ. ಮಾತನಾಡಿ, ಸಮಸ್ಯೆಯಿಲ್ಲ, ಕ್ಷಮೆ ಎಲ್ಲಾ ಕೇಳಬೇಡಿ ಎಂದು ಹೇಳಿದ್ದರು. ಅದಕ್ಕೆ ರಕ್ಷಕ್ ಇಲ್ಲ ಅಣ್ಣ, ನನ್ನ ಉದ್ದೇಶ ಅದಾಗಿರಲಿಲ್ಲ ಎಂದು ಸ್ಪಷ್ಟನೆ ಕೊಡಲು ಯತ್ನಿಸಿದ್ದರು. ಆದರೆ ಸುದೀಪ್ ಪರವಾಗಿಲ್ಲ ಬಿಡಿ, ನಿಮ್ಮ ಜೀವನದಲ್ಲಿ ನಿಮಗೆ ಒಳ್ಳೆಯದಾಗಲಿ ಎಂದು ಹೇಳಿದ್ದರು. ರಕ್ಷಕ್ ಬಿಗ್ ಬಾಸ್ ಸೀಸನ್ ಶುರುವಾದ 3ನೇ ವಾರವೇ ಎಲಿಮಿನೇಟ್ ಆಗಿದ್ದರು. ಎಲಿಮಿನೇಟ್ ಆಗಿ ಬಂದ ಬಳಿಕ ಕೆಲವೊಂದು ಸಂದರ್ಶನದಲ್ಲಿ ಭಾಗಿಯಾದ ರಕ್ಷಕ್ ಅನೇಕ ವಿಚಾರಗಳ ಬಗ್ಗೆ ಮಾತನಾಡಿದ್ದರು. ಈ ಮಾತುಗಳು ವಿವಾದಕ್ಕೆ ಎಡೆ ಮಾಡಿಕೊಟ್ಟಿತ್ತು. ಈ ಕಾರಣದಿಂದಲೇ ಸುದೀಪ್ ರಕ್ಷಕ್ ಗೆ ಪರೋಕ್ಷವಾಗಿ ಕಿವಿಹಿಂಡುವ ಕೆಲಸ ಮಾಡಿದ್ದಾರೆ ಎನ್ನಲಾಗಿದೆ.