ಯಂಗ್ ಟೈಗರ್ ಎನ್.ಟಿ.ಆರ್ ರವರ ದೇವರ ಸಿನೆಮಾದ ಬಗ್ಗೆ ಕಿಚ್ಚ ಸುದೀಪ್ ಕಾಮೆಂಟ್ಸ್, ಹೇಳಿದಾದರೂ ಏನು?

Follow Us :

RRR ಸಿನೆಮಾದ ಮೂಲಕ ಗ್ಲೋಬಲ್ ಲೆವೆಲ್ ನಲ್ಲಿ ಫೇಂ ಪಡೆದುಕೊಂಡ ಯಂಗ್ ಟೈಗರ್‍ ಎನ್.ಟಿ.ಆರ್‍ ಸದ್ಯ ದೇವರ ಸಿನೆಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೆ ಈ ಸಿನೆಮಾದ ಫಸ್ಟ್ ಗ್ಲಿಂಪ್ಸ್ ಮಾತ್ರ ಭಾರಿ ಹೈಪ್ ಕ್ರಿಯೇಟ್ ಮಾಡಿತ್ತು. ಈ ಗ್ಲಿಂಪ್ಸ್ ಬಿಡುಗಡೆಯಾದ ಬಳಿಕ ಎನ್.ಟಿ.ಆರ್‍ ಅಭಿಮಾನಿಗಳೂ ಸೇರಿದಂತೆ ಸಿನಿರಸಿಕರು ಕಾತುರದಿಂದ ಸಿನೆಮಾವನ್ನು ನೋಡಲು ಕಾಯುತ್ತಿದ್ದಾರೆ. ಇದೀಗ ಸ್ಯಾಂಡಲ್ ವುಡ್ ಸ್ಟಾರ್‍ ಕಿಚ್ಚ ಸುದೀಪ್ ದೇವರ ಫಸ್ಟ್ ಗ್ಲಿಂಪ್ಸ್ ಬಗ್ಗೆ ಕಾಮೆಂಟ್ ಮಾಡಿದ್ದು, ಎನ್.ಟಿ.ಆರ್‍ ಫ್ಯಾನ್ಸ್ ಪುಲ್ ಖುಷಿಯಾಗಿದ್ದಾರೆ.

ನಟ ಎನ್.ಟಿ.ಆರ್‍ ಹಾಗೂ ನಿರ್ದೇಶಕ ಕೊರಟಾಲ ಶಿವ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಈ ಸಿನೆಮಾ ಘೋಷಣೆಯಾದಾಗಿನಿಂದ ಭಾರಿ ಕ್ರೇಜ್ ಪಡೆದುಕೊಂಡಿದೆ. ಅದರಲ್ಲೂ ಕೆಲವು ದಿನಗಳಿಂದ ಹಿಂದೆಯಷ್ಟೆ ದೇವರ ಸಿನೆಮಾದ ಗ್ಲಿಂಪ್ಸ್ ಬಿಡುಗಡೆಯಾದ ಬಳಿಕವಂತೂ ಸಿನೆಮಾದ ಮೇಲಿನ ನಿರೀಕ್ಷೆ ದುಪ್ಪಟ್ಟಾಯಿತು. ಈ ಫಸ್ಟ್ ಗ್ಲಿಂಪ್ಸ್ 2.6 ಮಿಲಿಯನ್ಸ್ ವ್ಯೂಸ್ ಬಂದಿದೆ. ಜೊತೆಗೆ ಬೇರೆ ಭಾಷೆಯಲ್ಲೂ ಸಹ ಒಳ್ಳೆಯ ವ್ಯೂಸ್ ಪಡೆದುಕೊಂಡಿತ್ತು. ಅದೇ ರೀತಿ ಕನ್ನಡದಲ್ಲೂ ಸಹ ಒಳ್ಳೆಯ ವ್ಯೂಸ್ ಪಡೆದುಕೊಂಡಿದೆ. ಇದೀಗ ಕಿಚ್ಚ ಸುದೀಪ್ ಸಹ ದೇವರ ಸಿನೆಮಾದ ಫಸ್ಟ್ ಗ್ಲಿಂಪ್ಸ್ ಬಗ್ಗೆ ರಿಯಾಕ್ಟ್ ಆಗಿದ್ದಾರೆ. ಇತ್ತೀಚಿಗೆ ಕಿಚ್ಚ ಸುದೀಪ್ ರವರು ಪತ್ರಿಕಾಗೋಷ್ಟಿಯೊಂದರಲ್ಲಿ ದೇವರ ಸಿನೆಮಾದ ಫಸ್ಟ್ ಗ್ಲಿಂಪ್ಸ್ ಬಗ್ಗೆ ರಿಯಾಕ್ಟ್ ಆಗಿದ್ದಾರೆ.

ಸುದ್ದಿಗೋಷ್ಟಿಯೊಂದರಲ್ಲಿ ಕಿಚ್ಚ ಸುದೀಪ್ ರವರಿಗೆ ದೇವರ ಸಿನೆಮಾದ ಫಸ್ಟ್ ಗ್ಲಿಂಪ್ಸ್ ಬಗ್ಗೆ ಪ್ರಶ್ನೆ ಎದುರಾಗಿತ್ತು. ಅದಕ್ಕೆ ಸುದೀಪ್ ಒನ್ ವರ್ಡ್ ಆನ್ಸರ್‍ ಕೊಟ್ಟಿದ್ದಾರೆ. ದೇವರ ಗ್ಲಿಂಪ್ಸ್ ನಾನು ಸಹ ನೋಡಿದ್ದು, ಎಪಿಟೋಮ್ ಆಫ್ ಎನರ್ಜಿ ಎಂದು ಒನ್ ವರ್ಡ್ ಆನ್ಸರ್‍ ಮೂಲಕ ಹೊಗಳಿದ್ದಾರೆ. ಇನ್ನೂ ಸುದೀಪ್ ರವರ ಈ ಕಾಮೆಂಟ್ ಕೇಳಿದ ಎನ್.ಟಿ.ಆರ್‍ ರವರ ಅಭಿಮಾನಿಗಳು ಪುಲ್ ಖುಷಿಯಾಗಿದ್ದಾರೆ. ದೇವರ ಸಿನೆಮಾದ ಬಗ್ಗೆ ಸ್ಟಾರ್‍ ಹಿರೋ ಸಹ ಪಾಸಿಟೀವ್ ರಿಯಾಕ್ಷನ್ ಕೊಟ್ಟಿದ್ದು ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ ಎಂದೇ ಹೇಳಬಹುದಾಗಿದೆ. ಇನ್ನೂ ದೇವರ ಸಿನೆಮಾದ ಬಳಿಕ ಪ್ರಶಾಂತ್ ನೀಲ್ ರವರ ಜೊತೆಗೆ ಎನ್.ಟಿ.ಆರ್‍ ಸಿನೆಮಾ ಮಾಡಲಿದ್ದಾರೆ. ಈ ಸಿನೆಮಾದ ಮೇಲೂ ಸಹ ಭಾರಿ ನೀರಿಕ್ಷೆ ಇದೆ ಎನ್ನಲಾಗಿದೆ.

ಇನ್ನೂ RRR ಸಿನೆಮಾದ ಬಳಿಕ ಜೂನಿಯರ್‍ ಎನ್.ಟಿ.ಆರ್‍ ರವರ ಸಿನೆಮಾಗಳ ಮೇಲೆ ನಿರೀಕ್ಷೆ ತುಂಭಾನೆ ಏರಿದೆ ಎನ್ನಬಹುದಾಗಿದೆ. ಈ ನಿಟ್ಟಿನಲ್ಲಿ ನಿರ್ದೇಶಕ ಕೊರಟಾಲ ಶಿವ ಸಹ ದೇವರ ಸಿನೆಮಾವನ್ನು ದೊಡ್ಡ ಮಟ್ಟದಲ್ಲಿ ನಿರ್ದೇಶನ ಮಾಡುತ್ತಿದ್ದಾರೆ. ಗ್ಲೋಬಲ್ ಸ್ಟಾರ್‍ ಇಮೇಜ್ ಪಡೆದುಕೊಂಡ ಎನ್.ಟಿ.ಆರ್‍ ರವರ ಕ್ರೇಜ್ ಗೆ ಕೊಂಚವೂ ಕಡಿಮೆಯಿಲ್ಲದಂತೆ ಈ ಸಿನೆಮಾ ನಿರ್ಮಾಣವಾಗುತ್ತಿದೆ ಎನ್ನಲಾಗುತ್ತಿದೆ. ಈ ಸಿನೆಮಾದ ಬಿಡುಗಡೆ ದಿನಾಂಕ ಸಹ ಹತ್ತಿರ ಬರುತ್ತಿದ್ದು, ಪ್ಯಾನ್ ಇಂಡಿಯಾ ರೇಂಜ್ ನಲ್ಲಿ ಈ ಸಿನೆಮಾದ ಪ್ರಮೋಷನ್  ಮಾಡಲು ಚಿತ್ರತಂಡ ಪ್ಲಾನ್ ಮಾಡಲಾಗಿದೆ ಎಂದು ತಿಳಿದುಬಂದಿದೆ.