News

ತಿಮ್ಮಪ್ಪನ ಭಕ್ತರಿಗೆ ಗುಡ್ ನ್ಯೂಸ್, ತಿರುಮಲದ ಮೊದಲ ದ್ವಾರದಿಂದ ತಿಮ್ಮಪ್ಪನ ದರ್ಶನ, ನೀವು ಪ್ರಯತ್ನಿಸಿ….!

ದೇಶದ ಅತಿ ಹೆಚ್ಚು ಭಕ್ತರನನ್ನು ಹೊಂದಿರುವ ದೇವಾಲಯಗಳಲ್ಲಿ ತಿರುಪತಿಯಲ್ಲಿರುವ ಶ್ರೀ ವೆಂಕಟೇಶ್ವರನ ದೇವಾಲಯ ಒಂದಾಗಿದೆ. ಪ್ರತಿನಿತ್ಯ ಸಾವಿರಾರು ಸಂಖ್ಯೆಯ ಭಕ್ತರು ತಿಮ್ಮಪ್ಪನ ದರ್ಶನಕ್ಕೆ ಹೋಗುತ್ತಿರುತ್ತಾರೆ. ಇದೀಗ ತಿಮ್ಮಪ್ಪನ ದರ್ಶನಕ್ಕೆ ಹೋಗುವಂತಹ ಭಕ್ತರಿಗೆ ಟಿಟಿಡಿ ಗುಡ್ ನ್ಯೂಸ್ ಕೊಟ್ಟಿದೆ. ಭಕ್ತರಿಗೆ ಅನುಕೂಲವಾಗುವಂತೆ ಏಪ್ರಿಲ್ ಮಾಹೆಯಲ್ಲಿ ತಿರುಮಲ ಶ್ರೀವಾರಿ ಆರ್ಜಿತಾ ಸೇವೆಗಳ ಕೋಟಾ ಹಾಗೂ ದರ್ಶನ ಟಿಕೆಟ್ ಗಳನ್ನು ಬಿಡುಗಡೆ ಮಾಡಲು ದಿನಾಂಕ ನಿಗಧಿಪಡಿಸಿದೆ.

ತಿಮ್ಮಪ್ಪನ ಭಕ್ತರಿಗೆ ಇದೊಂದು ಗುಡ್ ನ್ಯೂಸ್ ಎಂದೇ ಹೇಳಬಹುದಾಗಿದೆ. ಏಪ್ರಿಲ್ ಮಾಹೆಯಲ್ಲಿ ನಡೆಯಲಿರುವ ಸುಪ್ರಭಾತ, ತೋಮಲ, ಅರ್ಚನೆ, ಅಷ್ಟದಳ ಪಾದ ಪದ್ಮಾರಾಧನೆ ಸೇವೆಗಳಿಗೆ ಜ.18 ರಂದು ಬೆಳಿಗ್ಗೆ 10 ರಿಂದ ಜ.20 ರ ಬೆಳಿಗ್ಗೆ 10 ರವರೆಗೆ ಆನ್ ಲೈನ್ ಲಕ್ಕಿಡಿಪ್ ನಲ್ಲಿ ನೊಂದಣಿ ಮಾಡಿಕೊಳ್ಳಬಹುದು. ಲಕ್ಕಿಡಿಪ್ ನಲ್ಲಿ ಟಿಕೆಟ್ ಪಡೆದ ಭಕ್ತಾಧಿಗಳು ಜ.22 ರಂದು ಮದ್ಯಾಹ್ನ 12 ಗಂಟೆಯ ಮೊದಲು ಶುಲ್ಕ ಪಾವತಿಸಿ ಟಿಕೆಟ್ ಖಚಿತಗೊಳಿಸಬೇಕಾಗುತ್ತದೆ. ಇನ್ನೂ ಜ.22 ರಂದು ಬೆಳಿಗ್ಗೆ 10 ಗಂಟೆಗೆ ಕಲ್ಯಾಣೋತ್ಸವ, ಆರ್ಜಿತ ಬ್ರಹ್ಮೊತ್ಸವ, ಊಂಜಾಲ್ ಸೇವೆ ಹಾಗೂ ಸಹಸ್ರ ದೀಪಾಲಂಕಾರ ಸೇವಾ ಟಿಕೆಟ್ ಗಳನ್ನು ಬಿಡುಗಡೆ ಮಾಡಲಾಗುತ್ತದೆ. ಜ.22 ರಂದು ಮದ್ಯಾಹ್ನ 3 ಗಂಟೆಗೆ  ವರ್ಚುವಲ್ ಸೇವಾ ಟಿಕೆಟ್ ಗಳನ್ನು ಬಿಡುಗಡೆ ಮಾಡಲಾಗುತ್ತದೆ.

ಉರುಳು ಸೇವೆ ಟೋಕನ್ ಗಳನ್ನು ಸಹ ಜ.23 ರಂದು ಬೆಳಿಗ್ಗೆ 10 ಗಂಟೆಗೆ ಬಿಡುಗಡೆ ಮಾಡಲಾಗುತ್ತದೆ. ಶ್ರೀವಾಣಿ ಟ್ರಸ್ಟ್ ಬ್ರೇಕ್ ದರ್ಶನ, ಕೊಠಡಿಗಳ ಕೋಟಾ ಜ.23 ರಂದು ಬೆಳಿಗ್ಗೆ 11 ಗಂಟೆಗೆ ಬಿಡುಗಡೆಯಾಗಲಿದೆ. ಇನ್ನೂ ಹಿರಿಯ ನಾಗರೀಕರು ಹಾಗೂ ಅಂಗವಿಕಲರ ಕೋಟಾವನ್ನು ಜ.23 ರಂದು ಮದ್ಯಾಗ್ನ 3 ಗಂಟೆಗೆ ಬಿಡುಗಡೆ ಮಾಡಲಾಗುತ್ತದೆ. ಜೊತೆಗೆ ಜ.24 ರಂದು ಬೆಳಿಗ್ಗೆ 10 ಗಂಟೆಗೆ 300 ರೂಪಾಯಿಗಳ ವಿಶೇಷ ಪ್ರವೇಶ ಟಿಕೆಟ್ ಗಳನ್ನು ಬಿಡುಗಡೆ ಮಾಡಲಾಗುತ್ತದೆ. ತಿರುಪತಿ ಹಾಗೂ ತಿರುಮಲದಲ್ಲಿನ ಕೊಠಡಿಗಳ ಬುಕ್ಕಿಂಗ್ ಜ.24 ರಂದು ಮದ್ಯಾಹ್ನ 3 ಗಂಟೆಗೆ ಬಿಡುಗಡೆ ಮಾಡಲಾಗುತ್ತದೆ. ಜ.27 ರಂದು ಬೆಳಿಗ್ಗೆ 11 ಗಂಟೆಗೆ ಏಪ್ರಿಲ್ ಮಾಹೆಗೆ ಸಂಬಂಧಿಸಿದ ತಿರುಮಲದ ಶ್ರೀವಾರಿ ಸೇವಾ ಕೋಟಾ ಟಿಕೆಗಳನ್ನು, ಮದ್ಯಾಹ್ನ 12 ಗಂಟೆಗೆ ನವನೀತ ಸೇವಾ ಕೋಟಾ. ಮದ್ಯಾಹ್ನ 1 ಗಂಟೆಗೆ ಪರಕಾಮಣಿ ಸೇವಾ ಕೋಟ ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.

Most Popular

To Top