ಆ ಪ್ಯಾಲೆಸ್ ನಲ್ಲಿ ಆ ದಿನಾಂಕದಂದು ಕಿಯಾರಾ ಸಿದ್ದಾರ್ಥ್ ಮೆಲ್ಹೋತ್ರಾ ಮದುವೆ, ವೈರಲ್ ಆಗುತ್ತಿರುವ ಸುದ್ದಿ…!

Follow Us :

2022ರ ವರ್ಷದಲ್ಲಿ ಅನೇಕ ಸಿನೆಮಾ ಸೆಲೆಬ್ರೆಟಿಗಳು ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಸುಮಾರು ವರ್ಷಗಳಿಂದ ಪ್ರೇಮ ಪಯಣ ಸಾಗಿಸುತ್ತಿರುವ ಕಿಯಾರಾ ಅಡ್ವಾನಿ ಹಾಗೂ ಸಿದ್ದಾರ್ಥ್ ಮೆಲ್ಹೋತ್ರಾ ಜೋಡಿ ಸಹ ಮದುವೆಯಾಗಲಿದ್ದಾರೆ. ಈಗಾಗಲೇ ಅನೇಕ ಬಾರಿ ಈ ಜೋಡಿಯ ಮದುವೆಯ ಬಗ್ಗೆ ಸುದ್ದಿಗಳು ಕೇಳಿಬಂದವು. ಇದೀಗ ಅವರ ಮದುವೆಯ ದಿನಾಂಕ, ಸ್ಥಳ ಎರಡೂ ಫಿಕ್ಸ್ ಆಗಿದೆ ಎಂಬ ಸುದ್ದಿಗಳು ಕೇಳಬರುತ್ತಿವೆ.

ಬಾಲಿವುಡ್ ನಲ್ಲಿ ಕ್ರೇಜಿ ಲವ್ ಬರ್ಡ್ಸ್ ಎಂತಲೇ ಕರೆಯಲಾಗುವ ಸ್ಟಾರ್‍ ನಟ ಸಿದ್ದಾರ್ಥ್ ಮೆಲ್ಹೋತ್ರಾ ಹಾಗೂ ನಟಿ ಕಿಯಾರಾ ಅಡ್ವಾನಿ ಸುಮಾರು ವರ್ಷಗಳಿಂದ ಪ್ರೇಮ ಪಯಣ ಸಾಗಿಸುತ್ತಿದ್ದಾರೆ. ವೆಕೇಷನ್ ಗಳಿಗೆ ಹಾರುತ್ತಾ ಮತಷ್ಟು ಹಾಟ್ ಟಾಪಿಕ್ ಆಗುತ್ತಿರುತ್ತಾರೆ. ಆದರೆ ಈ ಇಬ್ಬರೂ ಎಂದಿಗೂ ಸಹ ತಮ್ಮ ಪ್ರೀತಿಯ ಬಗ್ಗೆ ಹೇಳಿಕೊಂಡಿಲ್ಲ. ಕೆಲವೊಂದು ಸಮಯದಲ್ಲಿ ಅವರು ಬೇರೆಯಾಗುತ್ತಿದ್ದಾರೆ ಸುದ್ದಿ ಸಹ ಹರಿದಾಡಿತ್ತು. ಕೆಲವೊಂದು ಸಾರಿ ಅವರಿಬ್ಬರಿಗೂ ಈಗಾಗಲೇ ಮದುವೆ ಸಹ ನಡೆದಿದೆ ಎಂಬ ರೂಮರ್‍ ಸಹ ಕೇಳಬಂತು. ಇದೀಗ ಇದೆಲ್ಲಾ ಗಾಳಿ ಸುದ್ದಿ ಇಬ್ಬರಿಗೂ ಶೀಘ್ರದಲ್ಲೇ ಮದುವೆಯಾಗಲಿದೆ ಎಂಬ ಸುದ್ದಿ ಕೇಳಿಬರುತ್ತಿದೆ. ಈ ಕ್ರೇಜಿ ಜೋಡಿಯ ಮದುವೆಗೆ ಮುಹೂರ್ತ ಫಿಕ್ಸ್ ಆಗಿದೆ ಎಂಬ ಸುದ್ದಿ ಹೊಸದಾಗಿ ಕೇಳಿಬರುತ್ತಿದೆ.

ಇದೀಗ ಹೊಸದಾಗಿ ಕೇಳಿಬರುತ್ತಿರುವ ಸುದ್ದಿಯಂತೆ  ಕಿಯಾರಾ ಹಾಗೂ ಸಿದ್ದಾರ್ಥ್ ಫೆಬ್ರವರಿ 6 ರಂದು ಮದುವೆಯಾಗಲಿದ್ದಾರಂತೆ. ಫೆಬ್ರವರಿ 6 ರಂದು ರಾಜಸ್ಥಾನ್ ನ ಜೈಸಲ್ಮೇರ್‍ ಪ್ಯಾಲೇಸ್ ಹೋಟೆಲ್ ನಲ್ಲಿ ಇವರ ಮದುವೆ ನಡೆಯಲಿದೆ. ಈ ಹೋಟೆಲ್ ನಲ್ಲಿ ಅದ್ದೂರಿಯಾಗಿ ಮದುವೆ ಸಮಾರಂಭ ನಡೆಯಲಿದೆ. ಈ ಮದುವೆಯಲ್ಲಿ ಹತ್ತಿರದ ಸಂಬಂಧಿಗಳು ಸ್ನೇಹಿತರಿಗೆ ಮಾತ್ರ ಆಹ್ವಾನ ಇರುತ್ತದೆ ಎನ್ನಲಾಗುತ್ತಿದೆ. ಸದ್ಯ ಈ ಸುದ್ದಿ ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ಹರಿದಾಡುತ್ತಿದೆ. ಇನ್ನೂ ಈ ಸುದ್ದಿ ನಿಜವಾ ಅಥವಾ ಸುಳ್ಳಾ ಎಂಬುದನ್ನು ತಿಳಿಯಲು ಮತಷ್ಟು ದಿನ ಕಾಯಬೇಕಿದೆ. ಅಥವಾ ಕಿಯಾರಾ ಆಗಲಿ, ಸಿದ್ದಾರ್ಥ್ ಆಗಲಿ ಅಧಿಕೃತವಾಗಿ ಹೇಳುವವರೆಗೂ ಕಾಯಬೇಕಿದೆ.

ಇನ್ನೂ ಕಿಯಾರಾ ತೆಲುಗಿನಲ್ಲಿ ಭರತ್ ಅನೆ ನೇನು ಹಾಗೂ ವಿನಯ ವಿಧಯ ರಾಮ್ ಎಂಬ ಸಿನೆಮಾಗಳಲ್ಲಿ ನಟಿಸಿದ್ದು, ಈ ಎರಡೂ ಸಿನೆಮಾಗಳೂ ಸಕ್ಸಸ್ ಕಂಡಿದೆ. ಇದೀಗ ಖ್ಯಾತ ನಿರ್ದೇಶಕ ಶಂಕರ್‍ ಹಾಗೂ ನಟ ರಾಮ್ ಚರಣ್ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ RC15 ಸಿನೆಮಾದಲ್ಲಿ ಕಿಯಾರಾ ಎರಡನೇ ಬಾರಿಗೆ ರಾಮ್ ಚರಣ್ ಜೊತೆಗೆ ಹೆಜ್ಜೆ ಹಾಕಲಿದ್ದಾರೆ. ಪ್ಯಾನ್ ಇಂಡಿಯಾ ಸಿನೆಮಾ ಇದಾಗಿದ್ದು, ತುಂಬಾ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ.