ಅಂತೂ ಇಂತೂ ಒಪ್ಪಿಕೊಂಡ ರಶ್ಮಿಕಾ ಮಂದಣ್ಣ, ನನ್ನ ಮದುವೆಯಾಗುವವ ವಿಜಯ್ ದೇವರಕೊಂಡ ರೀತಿ ಇರಬೇಕು ಎಂದ ರಶ್…..!

Follow Us :

ಸುಮಾರು ದಿನಗಳಿಂದ ಟಾಲಿವುಡ್ ರೌಡಿ ಹಿರೋ ವಿಜಯ್ ದೇವರಕೊಂಡ ಹಾಗೂ ನ್ಯಾಷನಲ್ ಕ್ರಷ್ ರಷ್ಮಿಕಾ ಮಂದಣ್ಣ ನಡುವೆ ಅಫೈರ್‍ ನಡೆಯುತ್ತಿದೆ. ಇಬ್ಬರೂ ಡೇಟಿಂಗ್ ನಲ್ಲಿದ್ದಾರೆ ಎಂಬೆಲ್ಲಾ ಮಾತುಗಳು ಕೇಳಿಬರುತ್ತಲೇ ಇದೆ. ಜೊತೆಗೆ ಅವರು ಆಗಾಗ ವೆಕೇಷನ್ ಗಳಲ್ಲಿ ಪಾರ್ಟಿಗಳಲ್ಲಿ ಕ್ಯಾಮೆರಾಗಳಿಗೆ ಸಿಕ್ಕಿ ಬೀಳುತ್ತಿರುತ್ತಾರೆ. ಇದೀಗ ರಶ್ಮಿಕಾ ಮಂದಣ್ಣ ಕೆಲವೊಂದು ಕಾಮೆಂಟ್ ಗಳನ್ನು ಮಾಡಿದ್ದಾರೆ. ತಾನು ಮದುವೆಯಾಗುವ ಪತಿ ಹೇಗಿರಬೇಕು ಎಂಬುದರ ಬಗ್ಗೆ ಪೋಸ್ಟ್ ಒಂದು ವೈರಲ್ ಆಗಿದ್ದು, ಈ ಪೋಸ್ಟ್ ಕಾರಣದಿಂದ ವಿಜಯ್ ದೇವರಕೊಂಡ ರವರನ್ನು ರಶ್ಮಿಕಾ ಮದುವೆಯಾಗುವುದು ಪಕ್ಕಾ ಎಂಬ ಮಾತುಗಳು ಕೇಳಿಬರುತ್ತಿವೆ.

ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ರವರ ಬಗ್ಗೆ ಸದಾ ಒಂದಲ್ಲ ಒಂದು ಸುದ್ದಿ ಕೇಳಿಬರುತ್ತಲೇ ಇರುತ್ತದೆ. ಅನೇಕ ಬಾರಿ ಇಬ್ಬರೂ ವೆಕೇಷನ್ ಗಳಿಗೆ ಹಾರಿದ್ದಾರೆ. ಆದರೆ ಇಬ್ಬರಲ್ಲೂ ಯಾರೂ ತಮ್ಮ ರಿಲೇಷನ್ ಶಿಪ್ ಬಗ್ಗೆ ಬಹಿರಂಗವಾಗಿ ಹೇಳಿರಲಿಲ್ಲ. ಗೀತಾ ಗೋವಿಂದಂ ಸಿನೆಮಾದ ಬಳಿಕ ಇಬ್ಬರ ನಡುವೆ ಅಫೈರ್‍ ನಡೆಯುತ್ತಿದೆ ಎಂಬ ರೂಮರ್‍ ಹರಿದಾಡುತ್ತಲೇ ಇದೆ. ಅವರಿಬ್ಬರು ಗಾಡವಾದ ಪ್ರೀತಿಯಲ್ಲಿದ್ದಾರೆ ಎಂಬ ಸುದ್ದಿ ಸಹ ಕೇಳಿಬರುತ್ತಿದೆ. ಕೆಲವು ತಿಂಗಳುಗಳ ಹಿಂದೆಯಷ್ಟೆ ಈ ಜೋಡಿ ಮಾಲ್ಡೀವ್ಸ್ ಗೆ ವೆಕೇಷನ್ ಗೆ ಹಾರಿದ್ದರು. ಅದನ್ನು ರಶ್ಮಿಕಾ ಸಹ ಒಪ್ಪಿಕೊಂಡಿದ್ದರು. ನಾವಿಬ್ಬರು ಒಳ್ಳೆಯ ಸ್ನೇಹಿತರು, ಆತನೊಂದಿಗೆ ಟ್ರಿಪ್ ಹೋದರೇ ತಪ್ಪೇನು ಎಂದು ಹೇಳಿದ್ದರು. ಜೊತೆಗೆ ವಿಜಯ್ ದೇವರಕೊಂಡ ಕುಟುಂಬಸ್ಥರು ಸಹ ರಶ್ಮಿಕಾಗೆ ತುಂಬಾನೆ ಹತ್ತಿರವಾಗಿದ್ದಾರೆ ಎನ್ನಲಾಗಿದೆ. ನಮ್ಮಿಬ್ಬರ ನಡುವೆ ಲವ್ ಇಲ್ಲ ಎನ್ನುತ್ತಲೇ ಅವರು ಅನೇಕ ಕಡೆ ವೆಕೇಷನ್ ಗಳಿಗೆ ಸಹ ಹೋಗಿ ಬಂದಿದ್ದಾರೆ.

ಇನ್ನೂ ರಶ್ಮಿಕಾ ಮಂದಣ್ಣ ರವರ ಹೆಸರಿನಲ್ಲಿ ಅನೇಕ ಫ್ಯಾನ್ ಪೇಜ್ ಗಳು ಚಾಲ್ತಿಯಲ್ಲಿವೆ. ಈ ಫ್ಯಾನ್ ಪೇಜ್ ಗಳ ಪೈಕಿ ಒಂದು ಪೇಜ್ ನಲ್ಲಿ ರಶ್ಮಿಕಾ ಮಂದಣ್ಣ ಅವರನ್ನು ಮದುವೆ ಆಗುವಂತಹ ಯುವಕನಿಗೆ ಯಾವ ಗುಣಗಳು ಇರಬೇಕು. ರಶ್ಮಿಕಾ ಮಂದಣ್ಣ ನ್ಯಾಷನಲ್ ಕ್ರಷ್ ಆದ ಕಾರಣ ಅವರ ಗಂಡ ಸ್ಪೇಷಲ್ ಆಗಿರಬೇಕು. ಅವರ ಗಂಡ VD ರೀತಿ ಇರಬೇಕು, VD ಎಂದರೇ ವೇರಿ ಡೇರಿಂಗ್ ಅವರನ್ನು ಕಾಪಾಡಬೇಕು, ರಶ್ಮಿಕಾ ರನ್ನು ನಾವು ರಾಣಿ ಎಂದು ಕರೆಯುತ್ತೇವೆ ಆದ್ದರಿಂದ ಅವರನ್ನು ಮದುವೆ ಆಗುವವರು ರಾಜ ತರಹ ಇರಬೇಕು ಎಂದು ಫ್ಯಾನ್ ಪೇಜ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಅದಕ್ಕೆ ರಶ್ಮಿಕಾ ಮಂದಣ್ಣ ಖಂಡಿತಾ ನಿಜ ಎಂದು ರಿಯಾಕ್ಟ್ ಮಾಡಿದ್ದಾರೆ.

ರಶ್ಮಿಕಾ ಫ್ಯಾನ್ ಪೇಜ್ ನಲ್ಲಿ ಹಂಚಿಕೊಂಡ ಈ ಪೋಸ್ಟ್ ಗೆ ರಶ್ಮಿಕಾ ಸಹ ಖುಷಿಯಿಂದ ರಿಪ್ಲೆ ಕೊಟ್ಟಿದ್ದಾರೆ. ಇನ್ನೂ VD ಅಂದರೇ ವಿಜಯ್ ದೇವರಕೊಂಡ ಎಂತಲೂ ಕರೆಯಲಾಗುತ್ತದೆ. ಅದು ರಶ್ಮಿಕಾ ರವರಿಗೂ ಗೊತ್ತಿದೆ. ಆದರೆ ರಶ್ಮಿಕಾ ಈ ಫ್ಯಾನ್ ಪೇಜ್ ನಿಂದ ಬಂದಂತಹ ಪೋಸ್ಟ್ ಗೆ ಖುಷಿಯಿಂದ ರಿಪ್ಲೆ ಕೊಟ್ಟಿದ್ದು, ಅವರ ಮದುವೆ ಬಗ್ಗೆ ಮತಷ್ಟು ಹೈಪ್ ಹೆಚ್ಚಿಸಿದೆ ಎನ್ನಲಾಗುತ್ತಿದೆ. ಇತ್ತೀಚಿಗಷ್ಟೆ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಎಂಗೇಜ್ ಮೆಂಟ್ ಸಹ ನಡೆಯಲಿದೆ ಎಂದು ಹೇಳಲಾಗಿತ್ತು. ಈ ಸುದ್ದಿಯನ್ನು ವಿಜಯ್ ದೇವರಕೊಂಡ ತಳ್ಳಿಹಾಕಿದ್ದರು.