Film News

ಸಿಎಂ ಯೋಗಿ ಪಾದಗಳಿಗೆ ನಮಸ್ಕಾರ ಮಾಡಿದ ಬಗ್ಗೆ ಸ್ಪಷ್ಟನೆ ಕೊಟ್ಟ ರಜನಿಕಾಂತ್, ವಿಮರ್ಶಕರಿಗೆ ಸರಿಯಾದ ಕೌಂಟರ್….!

ಕಾಲಿವುಡ್ ಸೂಪರ್‍ ಸ್ಟಾರ್‍ ತಲೈವಾ ರಜನಿಕಾಂತ್ ಕೇವಲ ಕಾಲಿವುಡ್ ಮಾತ್ರವಲ್ಲದೇ ದೇಶ ವಿದೇಶದಲ್ಲೂ ಸಹ ಭಾರಿ ಫಾಲೋಯಿಂಗ್ ಹೊಂದಿರುವ ನಟರಾಗಿದ್ದಾರೆ. ಭಾರತದ ಸಿನಿರಂಗದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆದುಕೊಳ್ಳುವ ಸ್ಟಾರ್‍ ನಟರಲ್ಲಿ ಒಬ್ಬರಾಗಿದ್ದಾರೆ. ಸದ್ಯ ರಜನಿಕಾಂತ್ ರವರು ಜೈಲರ್‍ ಸಿನೆಮಾದ ಸಕ್ಸಸ್ ಖುಷಿಯಲ್ಲಿದ್ದಾರೆ. ಜೈಲರ್‍ ಕಲೆಕ್ಷನ್ ನಾಗಾಲೋಟ ಮುಂದುವರೆದಿದೆ. ಇನ್ನೂ ಕೆಲವು ದಿನಗಳ ಹಿಂದೆಯಷ್ಟೆ ಯು.ಪಿ ಸಿಎಂ ಯೋಗಿ ಆದಿತ್ಯನಾಥ್ ರವರ ಕಾಲಿಗೆ ನಮಸ್ಕಾರ ಮಾಡಿದ ರಜನಿಕಾಂತ್ ರವರ ಬಗ್ಗೆ ಅನೇಕ ವಿಮರ್ಶೆಗಳು ಸೋಷಿಯಲ್ ಮಿಡಿಯಾದಲ್ಲಿ ಎದುರಾಗಿತ್ತು. ಅದಕ್ಕೆ ಇದೀಗ ಅವರು ಸ್ಪಷ್ಟನೆ ಕೊಟ್ಟಿದ್ದಾರೆ.

ಸೂಪರ್‍ ಸ್ಟಾರ್‍ ರಜನಿಕಾಂತ್ ರವರ ಜೈಲರ್‍ ಸಿನೆಮಾ ಆ.10 ರಂದು ಬಿಡುಗಡೆಯಾಗಿದ್ದು ಒಳ್ಳೆಯ ಕಲೆಕ್ಷನ್ ಮಾಡುತ್ತಿದೆ. ಬಾಕ್ಸ್ ಆಫೀಸ್ ನಲ್ಲಿ ಅಬ್ಬರ ಕಡಿಮೆಯಾಗಿಲ್ಲ. ಸಿನೆಮಾ ಬಿಡುಗಡೆಗೂ ಮುಂಚೆ ರಜನಿಕಾಂತ್ ಹಿಮಾಲಯಗಳಲ್ಲಿ ಪರ್ಯಟನೆ ಮಾಡಿದ್ದರು. ಹಿಮಾಲಯ ಯಾತ್ರ ಮುಗಿಸಿ ಉತ್ತರ ಪ್ರದೇಶದಲ್ಲೂ ಸಹ ವಿಹರಿಸಿದ್ದರು. ಈ ವೇಳೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರವರನ್ನು ಭೇಟಿಯಾಗಲು ಲಕ್ನೋ ದಲ್ಲಿನ ಯೋಗಿ ಯವರ ನಿವಾಸಕ್ಕೆ ಹೋದರು. ಈ ವೇಳೆ ಯೋಗಿ ಪಾದಗಳಿಗೆ ರಜನಿಕಾಂತ್ ನಮಸ್ಕಾರ ಮಾಡಿದ್ದರು. ಈ ಸಂಬಂಧ ವಿಡಿಯೋ ಹಾಗೂ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿತ್ತು. ಜೊತೆಗೆ ಪರ ವಿರೋಧಗಳೂ ಸಹ ವ್ಯಕ್ತ ವಾಗಿದ್ದವು.

ಇನ್ನೂ ಈ ಬಗ್ಗೆ ಸೋಷಿಯಲ್ ಮಿಡಿಯಾದಲ್ಲಿ ಭಿನ್ನವಾದ ಅಭಿಪ್ರಾಯಗಳು ವ್ಯಕ್ತವಾಗಿತ್ತು. ರಜನಿಕಾಂತ್ ರವರ ಈ ಕೆಲಸವನ್ನು ಅನೇಕರು ವಿಮರ್ಶೆ ಮಾಡಿದರು, ಮತ್ತೆ ಕೆಲವರು ಸಮರ್ಥನೆ ಮಾಡಿದರು. ರಜನಿಕಾಂತ್ ಏಕೆ ಆ ರೀತಿ ಮಾಡಿದರು ಎಂಬ ಚರ್ಚೆ ಸಹ ಶುರುವಾಯ್ತು. ವಯಸ್ಸಿನಲ್ಲಿ ತನಗಿಂತ ಚಿಕ್ಕವರಾದ ಯೋಗಿ ನಮಸ್ಕಾರ ಮಾಡಬೇಕಾದ ಅಗತ್ಯತೆ ಆದರೂ ಏನು ಎಂಬ ಪ್ರಶ್ನೆಗಳೂ ಸಹ ಉದ್ಬವಿಸಿದ್ದವು. ಇನ್ನೂ ಈ ಬಗ್ಗೆ ಚೆನೈ ವಿಮಾನ ನಿಲ್ದಾಣದಲ್ಲಿ ಮಿಡಿಯಾದವರೊಂದಿಗೆ ರಜನಿಕಾಂತ್ ಈ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ. ಯೋಗಿಗಳು, ಸನ್ಯಾಸಿಗಳ ಪಾದಗಳನ್ನು ಮುಟ್ಟಿ ಆರ್ಶಿವಾದ ಪಡೆದುಕೊಳ್ಳುವುದು ನನ್ನ ಅಭ್ಯಾಸ. ಅವರು ನನಗಿಂತ ಚಿಕ್ಕವರಾದರೂ ನಾನು ಆ ಕೆಲಸ ಮಾಡುತ್ತೇನೆ. ಈ ನಿಟ್ಟಿನಲ್ಲೇ ನಾನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪಾದಗಳಿಗೆ ನಮಸ್ಕಾರ ಮಾಡಿದ್ದೇನೆ.

ನನ್ನ ಅಭ್ಯಾಸದಂತೆ ಅವರ ಕಾಲಿಗೆ ನಮಸ್ಕಾರ ಮಾಡಿದ್ದೇನೆ ವಿನಃ ಅದರಲ್ಲಿ ಬೇರೆ ಅಭ್ಯಾಸ ಇಲ್ಲ ಎಂದು ಹೇಳಿದ್ದಾರೆ. ಆ ಮೂಲಕ ತನ್ನ ಬಗ್ಗೆ ವಿಮರ್ಶೆ ಮಾಡಿದವರಿಗೆ ಸೈಲೆಂಟ್ ಆಗಿಯೇ ಕೌಂಟರ್‍ ಕೊಟ್ಟಿದ್ದಾರೆ ತಲೈವಾ. ಇನ್ನೂ ಜೈಲರ್‍ ಸಿನೆಮಾ ಬಿಡುಗಡೆಯಾಗಿ ಒಳ್ಳೆಯ ಕಲೆಕ್ಷನ್ ಮಾಡುತ್ತಿದೆ. ಐನೂರು ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ ಎಂದು ಸಂತಸ ವ್ಯಕ್ತಪಡಿಸಿದರು.

Most Popular

To Top