Film News

ಇದು ಕಾಂತಾರ 2 ಅಲ್ಲ, ಕಾಂತಾರಾ ಚಾಪ್ಟರ್ 1, ವೈರಲ್ ಆದ ಪೋಸ್ಟರ್ ಅಂಡ್ ಟೀಸರ್…..!

ಕನ್ನಡದಲ್ಲಿ ಮಾತ್ರ ಬಿಡುಗಡೆಯಾಗಿ ಬಳಿಕ ಪ್ಯಾನ್ ಇಂಡಿಯಾ ಸಿನೆಮಾ ಆಗಿ ಕ್ರೇಜ್ ಪಡೆದುಕೊಂಡ ಕಾಂತಾರ ಸಿನೆಮಾದ ಬಗ್ಗೆ ಇಡೀ ದೇಶದ ಸ್ಟಾರ್‍ ನಟ-ನಟಿಯರೇ ಮೆಚ್ಚಿಕೊಂಡಿದ್ದಾರೆ. ಅತೀ ಕಡಿಮೆ ಬಜೆಟ್ ನಲ್ಲಿ ನಿರ್ಮಾಣವಾದ ಈ ಸಿನೆಮಾ ಭಾರಿ ಸಕ್ಸಸ್ ಕಂಡುಕೊಂಡಿದೆ. ಇದೀಗ ಕಾಂತಾರ ಚಾಪ್ಟರ್‍-1 ಸಿನೆಮಾದ ಟೀಸರ್‍ ಅಂಡ್ ಪೋಸ್ಟರ್‍ ಬಿಡುಗಡೆಯಾಗಿದ್ದು ಭಾರಿ ಸ್ಪಂದನೆ ಪಡೆದುಕೊಳ್ಳುತ್ತಿದೆ. ಇದು ಕಾಂತಾರ-2 ಅಲ್ಲ ಕಾಂತಾರ ಚಾಪ್ಟರ್‍-1 ಎಂದು ಚಿತ್ರತಂಡ ಘೋಷಣೆ ಮಾಡಿದೆ ಎನ್ನಲಾಗಿದೆ.

ಕಾಂತಾರ ಸಿನೆಮಾದ ಬಳಿಕ ಅಭಿಮಾನಿ ಬಳಗದಲ್ಲಿ ಕಾಂತಾರ-2 ಸಿನೆಮಾದ ಬರಲಿದೆ ಎಂಬ ಕುತೂಹಲ ಹೆಚ್ಚಾಗಿತ್ತು. ಇದೀಗ ಆ ಕುತೂಹಲ ಡಬಲ್ ಆಗುವಂತೆ ಚಿತ್ರತಂಡ ಸಿನೆಮಾದ ಟೀಸರ್‍ ಹಾಗೂ ಪೋಸ್ಟರ್‍ ಬಿಡುಗಡೆ ಮಾಡಿದೆ. ನ.27 ರಂದು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಆನೆಗುಡ್ಡೆ ದೇವಸ್ಥಾನದಲ್ಲಿ ಕಾಂತಾರ ಚಾಪ್ಟರ್‍-1 ಸಿನೆಮಾದ ಮೂಹೂರ್ತ ನೆರವೇರಿದೆ. ಸಿನೆಮಾದ ಪೋಸ್ಟರ್‍ ಹಾಗೂ ಟೀಸರ್‍ ಬಿಡುಗಡೆಯಾಗಿದ್ದು, ಜನವರಿ ಮಾಹೆಯಿಂದ ಈ ಸಿನೆಮಾದ ಶೂಟಿಂಗ್ ಆರಂಭವಾಗಲಿದೆ ಎಂದು ಹೇಳಲಾಗುತ್ತಿದೆ. ಈ ಸಿನೆಮಾ ಪ್ಯಾನ್ ಇಂಡಿಯಾ ಸಿನೆಮಾ ಆಗಿ ಕನ್ನಡ ಸೇರಿದಂತೆ ಹಿಂದಿ, ತೆಲುಗು, ತಮಿಳು, ಮಲಯಾಳಂ, ಬೆಂಗಾಲಿ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ತೆರೆಕಾಣಲಿದೆ.

ಇನ್ನೂ ಬಿಡುಗಡೆಯಾದ ಪೋಸ್ಟರ್‍ ನಲ್ಲಿ ರಿಷಭ್ ಒಂದು ಕೈಯಲ್ಲಿ ಆಯುಧ ಹಿಡಿದುಕೊಂಡಿದ್ದರೇ, ಮತ್ತೊಂದು ಕೈಯಲ್ಲಿ ತ್ರಿಶೂಲವಿದೆ. ಮತ್ತೊಂದು ಫ್ರೇಮ್ ನ ಬೆಳಕಿನಲ್ಲಿ ಶಿವಲಿಂಗದ ಚಿತ್ರಣ ತೋರಿಸಲಾಗಿದೆ. ಪಂರ್ಜುಲಿ ದೈದ ಕಥೆಯನ್ನು ಈ ಸಿನೆಮಾದಲ್ಲಿ ತೋರಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ. ಪ್ರತಿ ಕ್ಷಣವೂ ದೈವಿಕ ಸ್ಪರ್ಶವನ್ನೂ ಅನುಭವಿಸುವ ಜೊತೆಗೆ ಇತಿಹಾಸದ ನಿಗೂಢ ಸತ್ಯವನ್ನು ಅನ್ವೇಷಿಸುವಂತಹ ಪ್ರಯತ್ನವಾಗಿದೆ. ಈ ಹಿಂದೆ ಎಂದೂ ನೋಡದಂತಹ ವಿಸ್ಮಯವನ್ನು ಕಣ್ತುಂಬಿಕೊಳ್ಳಲು ನಿರೀಕ್ಷಿಸಿ, ಇದು ಬರಿ ಬೆಳಕಲ್ಲ, ದರ್ಶನ ಎಂದು ಚಿತ್ರತಂಡ ಬರೆದುಕೊಂಡಿದೆ. ಇನ್ನೂ ಈ ಸಿನೆಮಾ ಹೊಂಬಾಳೆ ಫಿಲಂ ಬ್ಯಾನರ್‍ ನಡಿ ನಿರ್ಮಾಣ ಮಾಡಲಾಗುತ್ತಿದೆ. ರಿಷಭ್ ಶೆಟ್ಟಿಯವರೇ ನಟಿಸಿ ನಿರ್ದೇಶನ ಮಾಡುತ್ತಿದ್ದಾರೆ.

Most Popular

To Top