ಡೀಪ್ ಫೇಕ್ ವಿಡಿಯೋಗೆ ಬಲಿಯಾದ ಬಾಲಿವುಡ್ ನಟಿ, ವೈರಲ್ ಆದ ಆಲಿಯಾ ಭಟ್ ಫೇಕ್ ಪೋಟೋ……!

Follow Us :

AI ಟೆಕ್ನಾಲಿಜಿಯ ಹವಾ ಇದೀಗ ತುಂಬಾನೆ ಜೋರಾಗಿದೆ ಎನ್ನಬಹುದು. ಈ ತಂತ್ರಜ್ಞಾನದಿಂದ ಅನೇಕ ಉಪಯೋಗಗಳಿದ್ದರೇ, ಅದನ್ನು ಅಷ್ಟೇ ಮಟ್ಟದಲ್ಲಿ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಕೆಲವು ದಿನಗಳ ಹಿಂದೆಯಷ್ಟೆ ರಷ್ಮಿಕಾ ಮಂದಣ್ಣ ಡೀಪ್ ಫೇಕ್ ವಿಡಿಯೋ ಭಾರಿ ಸಂಚಲನವನ್ನೇ ಸೃಷ್ಟಿಸಿತ್ತು. ಈ ಫೇಕ್ ವಿಡಿಯೋ ಹರಡಿದವರ ವಿರುದ್ದ ಅನೇಕ ಸೆಲೆಬ್ರೆಟಿಗಳು ಕಿಡಿಕಾರಿದ್ದರು. ಇದೀಗ ಮತ್ತೋಬ್ಬ ನಟಿ ಬಲಿಯಾಗಿದ್ದಾರೆ ಎನ್ನಲಾಗಿದೆ.

ಡೀಪ್ ಫೇಕ್ ವಿಡಿಯೋಗಳು, AI ತಂತ್ರಜ್ಞಾನ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಭಾರಿ ಸಂಚಲನ ಸೃಷ್ಟಿಸುತ್ತಿದೆ. ಸ್ಟಾರ್‍ ಕಲಾವಿದರಿಗೆ ಅದೊಂದು ದೊಡ್ಡ ಶಾಪವಾಗಿ ಪರಿಣಮಿಸುತ್ತಿದೆ. ಲಿಫ್ಟ್ ನಲ್ಲಿ ಮಹಿಳೆಯೊಬ್ಬರ ಬೋಲ್ಡ್ ವಿಡಿಯೋಗೆ ರಷ್ಮಿಕಾ ಮಂದಣ್ಣ ಫೇಸ್ ಬಳಸಿ ವಿಡಿಯೋ ಕ್ರಿಯೇಟ್ ಮಾಡಿದ್ದರು. ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಭಾರಿ ಸದ್ದು ಮಾಡಿತ್ತು. ಈ ವಿಡಿಯೋ ಕಡಿಮೆ ಸಮಯದಲ್ಲೇ ಭಾರಿ ಸಂಚಲನ ಸೃಷ್ಟಿಸಿತ್ತು. ಈ ರೀತಿಯ ಕೃತ್ಯಗಳನ್ನು ಎಸಗುವಂತಹ ಕಿಡಿಗೇಡಿಗಳ ವಿರುದ್ದ ಕ್ರಮ ತೆಗೆದುಕೊಳ್ಳಬೇಕೆಂದು ಸಿನೆಮಾ ಸೆಲೆಬ್ರೆಟಿಗಳ ಜೊತೆಗೆ ಕೆಲ ರಾಜಕೀಯ ಮುಖಂಡರೂ ಸಹ ಆಗ್ರಹಿಸಿದರು. ಕೇಂದ್ರ ಸರ್ಕಾರ ಸಹ ಈ ಡೀಪ್ ಫೇಕ್ ವಿಡಿಯೋ ಕ್ರಿಯೇಟ್ ಮಾಡುವ ಬಗ್ಗೆ ಕಠಿಣ ಕ್ರಮ ತೆಗೆದುಕೊಳ್ಳಲು ಕೆಲವೊಂದು ನಿಯಮಗಳನ್ನು ತೆಗೆದುಕೊಳ್ಳಬೇಕೆಂದು ಆಗ್ರಹ ವ್ಯಕ್ತವಾಗಿತ್ತು.

ರಷ್ಮಿಕಾ ಡೀಪ್ ಫೇಕ್ ವಿಡಿಯೋ ಬಳಿಕ ಕತ್ರಿನಾ ಕೈಫ್, ಸಾರಾ ತೆಂಡೂಲ್ಕರ್‍, ಕಾಜೋಲ್ ರವರಂತಹ ಸ್ಟಾರ್‍ ಗಳ ಪೊಟೋಗಳು, ವಿಡಿಯೋಗಳನ್ನು ಮಾರ್ಪ್ ಮಾಡಿ ಹಂಚಿಕೊಂಡಿದ್ದರು. ಇದೀಘ ಆಲಿಯಾ ಭಟ್ ರವರನ್ನು ಟಾರ್ಗೇಟ್ ಮಾಡಿದ್ದಾರೆ. ಓರ್ವ ಮಹಿಳೆಯರ ಪೊಟೋಗೆ ಆಲಿಯಾ ಮುಖವನ್ನು ಬಳಸಿ ಸೋಷಿಯಲ್ ಮಿಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಇದರಲ್ಲಿ ಆಕೆ ಬ್ಲೂ ಫ್ಲೋರಲ್ ಧರಿಸಿದ್ದಾರೆ. ಈ ಪೊಟೋ ತುಂಬಾನೆ ಬೋಲ್ಡ್ ಆಗಿದೆ. ಇದೀಗ ಈ ಪೊಟೋ ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಟಾಪಿಕ್ ಆಗಿದೆ. ಇನ್ನೂ ಈ ಪೊಟೋ ಬಗ್ಗೆ ಅಭಿಮಾನಿಗಳು ಆಗ್ರಹ ವ್ಯಕ್ತಪಡಿಸಿದ್ದಾರೆ. ಈ ರೀತಿಯ ಫೇಕ್ ಪೊಟೋ ಹಂಚಿಕೊಳ್ಳುವಂತಹ ಕಿಡಿಗೇಡಿಗಳ ಬಗ್ಗೆ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಇನ್ನೂ ಆಲಿಯಾ ಭಟ್ ಮದುವೆಯಾದ ಬಳಿಕ ಜಿಗೇರಾ ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನೆಮಾದ ನಿರ್ಮಾಪಕಿಯೂ ಸಹ ಅವರೇ ಆಗಿದ್ದಾರೆ. ಮದುವೆ ಹಾಗೂ ಮಗುವಿನ ಕಾರಣದಿಂದ ಆಕೆ ಸಿನೆಮಾಗಳಿಂದ ದೂರವೇ ಉಳಿದಿದ್ದು, ಇದೀಗ ಮತ್ತೆ ಸಿನೆಮಾಗಳಲ್ಲಿ ಸಕ್ರೀಯವಾಗುತ್ತಿದ್ದಾರೆ.