ಟ್ರೋಲ್ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡ ಬಾಲಕ, ಟ್ರೋಲ್ ನಿಂದ ಅಪ್ರಾಪ್ತನ ಜೀವ ಬಲಿ….!

ಸೋಷಿಯಲ್ ಮಿಡಿಯಾ ಮೂಲಕ ಅನೇಕರು ಈಗಾಗಲೇ ದೊಡ್ಡ ಮಟ್ಟದಲ್ಲಿ ಬೆಳೆದಿದ್ದಾರೆ, ಕೆಲವರು ಸಿನೆಮಾಗಳಲ್ಲಿ ಅವಕಾಶಗಳನ್ನು ಸಹ ಪಡೆದುಕೊಳ್ಳುತ್ತಿದ್ದಾರೆ. ಅದೇ ಸೋಷಿಯಲ್ ಮಿಡಿಯಾ ಕಾರಣದಿಂದ ಕೆಲವೊಂದು ಸಂಬಂಧಗಳೂ ಸಹ ಮುರಿದು ಬಿದ್ದಿವೆ. ಇದೀಗ ಸೋಷಿಯಲ್ ಮಿಡಿಯಾದಲ್ಲಿ…

ಸೋಷಿಯಲ್ ಮಿಡಿಯಾ ಮೂಲಕ ಅನೇಕರು ಈಗಾಗಲೇ ದೊಡ್ಡ ಮಟ್ಟದಲ್ಲಿ ಬೆಳೆದಿದ್ದಾರೆ, ಕೆಲವರು ಸಿನೆಮಾಗಳಲ್ಲಿ ಅವಕಾಶಗಳನ್ನು ಸಹ ಪಡೆದುಕೊಳ್ಳುತ್ತಿದ್ದಾರೆ. ಅದೇ ಸೋಷಿಯಲ್ ಮಿಡಿಯಾ ಕಾರಣದಿಂದ ಕೆಲವೊಂದು ಸಂಬಂಧಗಳೂ ಸಹ ಮುರಿದು ಬಿದ್ದಿವೆ. ಇದೀಗ ಸೋಷಿಯಲ್ ಮಿಡಿಯಾದಲ್ಲಿ ಟ್ರೋಲ್ ಗೆ ಗುರಿಯಾದ ಕಾರಣದಿಂದ 16 ವರ್ಷದ ಬಾಲಕನೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಕಳೆದ ನ.21 ರಂದು ಈ ಘಟನೆ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ನಡೆದಿದೆ ಎನ್ನಲಾಗಿದೆ.

ಪ್ರಾಶಂಉ ಯಾದವ್ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಆಕ್ಟೀವ್ ಆಗಿದ್ದರು, ಇನ್ ಫ್ಲುಯೆನ್ಸರ್‍ ಆಗಿ ಗುರ್ತಿಸಿಕೊಂಡಿದ್ದಾರೆ. ಸೌಂದರ್ಯದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಾಂಶು ಅನೇಕ ರೀಲ್ಸ್ ಮಾಡುತ್ತಿದ್ದರು. ದೀಪಾವಳಿ ಹಬ್ಬದ ಸಮಯದಲ್ಲಿ ಆತ ಸೀರೆ ಧರಿಸಿ ರೀಲ್ಸ್ ಮಾಡಿದ್ದ. ಈ ರೀಲ್ಸ್ ಗೆ ಅನೇಕ ನೆಗೆಟೀವ್ ಕಾಮೆಂಟ್ ಗಳು, ಟ್ರೋಲ್ ಗಳು ಹರಿದುಬಂದಿದೆ. ಈ ಟ್ರೋಲ್ ಗಳಿಂದ ಮನನೊಂದ ಪ್ರಾಂಶು ಮನೆಯಲ್ಲಿ ಯಾರು ಇಲ್ಲದ ಸಮುಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಇನ್ನೂ ಮೃತನ ಪೋನ್ ಪೊಲೀಸರು ವಶಕ್ಕೆ ಪಡೆದುಕೊಂಡು ಆತನ ಇನ್ಸ್ಟಾ, ವಾಟ್ಸಾಪ್ ಹಾಗೂ ಫೇಸ್ ಬುಕ್ ಖಾತೆಗಳ ಮಾಹಿತಿ ಸಂಗ್ರಹಿಸಿದ್ದಾರೆ. ಆತ್ಮಹತ್ಯೆಗೆ ಟ್ರೋಲ್ ಅಥವಾ ಹೇಟ್ ಕಾಮೆಂಟ್ಸ್ ಗೆ ಸಂಬಂಧಿಸಿದ ಯಾವುದೇ ಬಲವಾದ ಸಾಕ್ಷಿ ಸಿಕ್ಕಿಲ್ಲ ಎನ್ನಲಾಗಿದೆ.

ಈ ದುರ್ಘಟನೆ ನಾಗಜಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಟ್ರೋಲಿಂಗ್ ಹಾಗೂ ಅಪ್ರಾಪ್ತ ಬಾಲಕ ದುರಂತ ಸಾವಿನ ನಡುವಿನ ಸಂಭಾವ್ಯದ ಬಗ್ಗೆ ತನಿಖೆ ಕೈಗೊಂಡಿದ್ದಾರೆ. ಈ ಬಗ್ಗೆ ಪೊಲೀಸ್ ಅಧಿಕಾರಿಯೊಬ್ಬರು ಮಾತನಾಡಿದ್ದು, ಸೋಷಿಯಲ್ ಮಿಡಿಯಾದಲ್ಲಿ ಕೆಲವರು ಕ್ರಾಸ್ ಡ್ರೆಸ್ಸಿಂಗ್ ವಿಚಾರವಾಗಿ ಸಲಿಂಗಕಾಮಿ, ಬೆದರಿಕೆಗಳನ್ನು ಹಾಗೂ ಟೀಕೆಗಳನ್ನು ಎದುರಿಸುತ್ತಾರೆ. ಕೊನೆಗೆ ತಮ್ಮ ಜೀವನವನ್ನೇ ಕಳೆದುಕೊಳ್ಳುವ ನಿರ್ಧಾರಕ್ಕೆ ಬರುತ್ತಾರೆ ಈ ಬಗ್ಗೆ ಕೆಲವೊಂದು ವರದಿಗಳು ಸಹ ಸೂಚಿಸಿದೆ. ಮೃತನ ತಾಯಿ ಸಹ ಈ ಬಗ್ಗೆ ಹೇಳಿದ್ದು, ನನ್ನ ಮಗ ಮುಂದಿನ ಪರೀಕ್ಷೆಗೆ ಓದುವ ನಿಟ್ಟಿನಲ್ಲಿ ಟೂಷನ್ ಗೆ ಹೋಗಿರಲಿಲ್ಲ. ಬೆಳಿಗೆ ಮಗನೊಂದಿಗೆ ಮಾತನಾಡಿದ್ದೆ ಕೊನೆ ಎಂದು ಹೇಳಿದ್ದಾರೆ.