Film News

ಸ್ಕೂಲ್ ಡೇಸ್ ಪೊಟೋ ಹಂಚಿಕೊಂಡ ಆಂಕರ್ ಅನುಶ್ರೀ, ಹರಿದು ಬಂದ ಕಾಮೆಂಟ್ ಗಳು, ಟಮೋಟೊ ಮಾರೋ ಹುಡ್ಗಿ ಎಂದ ನೆಟ್ಟಿಗರು…!

ಕನ್ನಡ ಬಣ್ಣದ ಲೋಕದ ಕಿರುತೆರೆ ಆಂಕರ್‍ ಅನುಶ್ರೀ ಭಾರಿ ಫೇಂ ಪಡೆದುಕೊಂಡಿದ್ದಾರೆ. ಕಿರುತೆರೆ ಶೋಗಳ ಜೊತೆಗೆ ಅನೇಕ ಈವೆಂಟ್ ಗಳನ್ನು ಹೋಸ್ಟ್ ಮಾಡುತ್ತಾ ತನ್ನದೇ ಆದ ಅಭಿಮಾನಿ ಬಳಗವನ್ನು ಸಹ ಪಡೆದುಕೊಂಡಿದ್ದಾರೆ. ಕನ್ನಡ ಕಿರುತೆರೆಯಲ್ಲಿ ಸ್ಟಾರ್‍ ಅಂಕರ್‍ ಆಗಿರುವ ಅನುಶ್ರೀ ಸೋಷಿಯಲ್ ಮಿಡಿಯಾದಲ್ಲೂ ಆಕ್ಟೀವ್ ಆಗಿರುತ್ತಾರೆ. ಅನುಶ್ರೀ ಇಲ್ಲದೇ ಯಾವುದೇ ಟಿವಿ ಶೋ ನಡೆಯುವುದಿಲ್ಲವೇನೋ ಎಂಬುವಷ್ಟು ಆಕೆ ಫೇಮಸ್ ಆಗಿದ್ದಾರೆ. ಇದೀಗ ಆಕೆ ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಸ್ಕೂಲ್ ಡೇಸ್ ಪೊಟೋ ಒಂದನ್ನು ಹಂಚಿಕೊಂಡಿದ್ದು ಸಖತ್ ವೈರಲ್ ಆಗುತ್ತಿದೆ.

ಪಟಪಟನೇ ಮಾತನಾಡುವ ಕನ್ನಡದ ಆಂಕರ್‍ ಅನುಶ್ರೀ ಕನ್ನಡದ ಬಹುತೇಕ ಎಲ್ಲಾ ಸಿನೆಮಾಗಳ ಆಡಿಯೋ ಲಾಂಚ್, ಪ್ರೀ ರಿಲೀಸ್ ಈವೆಂಟ್ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಹೋಸ್ಟ್ ಮಾಡುತ್ತಾರೆ. ಜೊತೆಗೆ ಕೆಲವೊಂದು ಸಿನೆಮಾಗಳಲ್ಲಿ ಸಹ ನಟಿಸಿದ್ದಾರೆ. ಆದರೆ ಆಕೆಗೆ ಕಿರುತೆರೆಯಲ್ಲಿ ಸಿಕ್ಕಂತಹ ಫೇಂ ಸಿನೆಮಾಗಳಲ್ಲಿ ಸಿಕ್ಕಿಲ್ಲ ಎಂದೇ ಹೇಳಬಹುದಾಗಿದೆ. ಇನ್ನೂ ಕಿರುತೆರೆ ಶೋಗಳ ಜೊತೆಗೆ ಆಕೆ ಸೋಷಿಯಲ್  ಮಿಡಿಯಾದಲ್ಲೂ ಸಹ ಆಕ್ಟೀವ್ ಆಗಿರುತ್ತಾರೆ. ತಮ್ಮ ವೈಯುಕ್ತಿಕ ವಿಚಾರಗಳ ಜೊತೆಗೆ ಆಗಾಗ ಪೊಟೋಗಳು, ಕೆರಿಯರ್‍ ಬಗ್ಗೆ ಸಹ ಅಭಿಮಾನಿಗಳೊಂದಿಗೆ ಅಪ್ಡೇಟ್ ನೀಡುತ್ತಿರುತ್ತಾರೆ. ಈ ಹಾದಿಯಲ್ಲೇ ಅನುಶ್ರೀ ಇದೀಗ ತಮ್ಮ ಸ್ಕೂಲ್ ಡೇಸ್ ನಲ್ಲಿನ ಐಡಿ ಕಾರ್ಡ್ ಒಂದನ್ನು ಹಂಚಿಕೊಂಡಿದ್ದಾರೆ. ಈ ಪೊಟೋ ಕಡಿಮೆ ಸಮಯದಲ್ಲೇ ಸಖತ್ ವೈರಲ್ ಆಗುತ್ತಿದೆ.

ಇನ್ನೂ ತಮ್ಮ ಸ್ಕೂಲ್ ಡೇಸ್ ನ ಐಡಿ ಕಾರ್ಡ್ ಪೊಟೋ ಹಂಚಿಕೊಂಡು, ಈ ಹುಡುಗಿ ಯಾರು ಗೊತ್ತಾ? ಸ್ಟೂಡೆಂಟ್ ಲೈಫ್ ಈಸ್ ಗೋಲ್ಡನ್ ಲೈಫ್ ಅಂತಾರೆ, ನಿಜ ಬೆಲೆ ಕಟ್ಟಲು ಅಸಾಧ್ಯವಾದುದು, ಸ್ಟೂಡೆಂಟ್ ಲೈಫ್ ಹೇಗಿತ್ತು ಕಾಮೆಂಟ್ ಮಾಡಿ ಎಂಬ ಪೋಸ್ಟ್ ಹಂಚಿಕೊಂಡಿದ್ದಾರೆ. ಇನ್ನೂ ಈ ಐಡಿ ಕಾರ್ಡ್‌ನಲ್ಲಿ ಅನುಶ್ರೀ ಮಂಗಳೂರಿನ ಅತ್ತಾವರದ ಶಾಲೆಯಲ್ಲಿ ಓದಿದ್ದು ಎಂದು ತಿಳಿಯುತ್ತದೆ. ಇನ್ನೂ ಈ ಪೊಟೋ ಪೋಸ್ಟ್ ಆದಂತಹ ಕಡಿಮೆ ಸಮಯದಲ್ಲೇ ಸಾವಿರಾರು ಲೈಕ್ ಗಳನ್ನು ಪಡೆದುಕೊಂಡಿದೆ. ಇನ್ನೂ ಈ ಪೊಟೋಗೆ ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ. ಅದರಲ್ಲೂ ಅನೇಕರು ಫನ್ನಿಯಾಗಿ ಅನುಶ್ರೀ ಕಾಲೆಳೆದಿದ್ದಾರೆ.

ಯಾರೋ ಟೊಮೋಟೊ ಮಾರುವ ಹುಡುಗಿಯಂತಿದ್ದಾರೆ ಎಂದರೇ, ಮತ್ತೋರ್ವ ನಿಮ್ಮ ಪೊಟೊ ಹಾಕಿ ಯಾರು ಎಂದು ಪ್ರಶ್ನೆ ಕೇಳುತ್ತೀರಲ್ಲ ಎಂದಿದ್ದಾರೆ, ಈ ಹುಡುಗಿ ಕಳೆದು ಹೋಗಿದ್ದಾರೆ,  ದಯವಿಟ್ಟು ಯಾರಿಗಾದರೂ ಸಿಕ್ಕರೇ ಹತ್ತಿರದ ಪೊಲೀಸರಿಗೆ ಮಾಹಿತಿ ನೀಡಿ ಎಂತಲೂ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ. ಒಟ್ಟಿನಲ್ಲಿ ಅನುಶ್ರೀ ಹಂಚಿಕೊಂಡ ಈ ಪೊಟೋ ವೈರಲ್ ಆಗುತ್ತಿದೆ.

Most Popular

To Top