Film News

ಕದ್ದು ವಿಜಯ್ ದೇವರಕೊಂಡ ತಮ್ಮನ ಸಿನೆಮಾ ನೋಡಿದ ರಶ್ಮಿಕಾ, ವೈರಲ್ ಆದ ಪೊಟೋ…..!

ಸಿನೆಮಾ ಸೆಲೆಬ್ರೆಟಿಗಳು ಕೆಲವೊಮ್ಮೆ ಕದ್ದು ಮುಚ್ಚಿ ಸಿನೆಮಾಗಳನ್ನು ನೋಡಿ ಬರುತ್ತಿರುತ್ತಾರೆ. ಬಳಿಕ ಅಲ್ಲಿದ್ದ ಯಾರಾದರೂ ಗುರ್ತಿಸಿ ಪೊಟೋ ಕ್ಯಾಪ್ಚರ್‍ ಮಾಡಿ ಸೋಷಿಯಲ್ ಮಿಡಿಯಾದಲ್ಲಿ ಹರಿಬಿಡುತ್ತಾರೆ. ನಟಿಯರು ಎಷ್ಟೇ ಸೀಕ್ರೇಟ್ ಆಗಿ ಸಿನೆಮಾ ನೋಡಿ ಹೊರಬರಬೇಕು ಎಂದು ಹೋದರು ಅಲ್ಲಿ ಯಾರೋ ಒಬ್ಬರ ಕಣ್ಣಿಗೆ ಬೀಳುತ್ತಾರೆ. ಈ ಹಾದಿಯಲ್ಲೇ ಸ್ಟಾರ್‍ ನಟಿ ರಶ್ಮಿಕಾ ಮಂದಣ್ಣ ತೆಲುಗಿನ ಬೇಬಿ ಸಿನೆಮಾ ನೋಡಲು ಸೀಕ್ರೇಟ್ ಆಗಿ ಹೋಗಿದ್ದು, ಅಲ್ಲಿಂದ ಬರುವಾಗ ಕ್ಯಾಮೆರಾ ಕಣ್ಣಿಗೆ ಸಿಕ್ಕಿಬಿದ್ದಿದ್ದಾರೆ. ಈ ಪೊಟೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

ತೆಲುಗು ನಟ ವಿಜಯ್ ದೇವರಕೊಂಡ ತಮ್ಮ ಆನಂದ್  ದೇವರಕೊಂಡ ಹಿರೋ ಆಗಿ ಕಾಣಿಸಿಕೊಂಡ ಬೇಬಿ ಸಿನೆಮಾ ಬಿಡುಗಡೆಯಾಗಿದೆ. ಈ ಸಿನೆಮಾ ಟ್ರಯಾಂಗಲ್ ಸಿನೆಮಾ ಸ್ಟೋರಿಯಾಗಿದೆ. ಆನಂದ್ ದೇವರಕೊಂಡ ಜೊತೆಗೆ ವೈಷ್ಣವಿ ಹಾಗೂ ಚೈತನ್ಯ ಎಂಬ ನಟಿಯರು ಕಾಣಿಸಿಕೊಂಡಿದ್ದಾರೆ. ಸದ್ಯ ಈ ಸಿನೆಮಾ ಒಳ್ಳೆಯ ಸಕ್ಸಸ್ ಕಾಣುತ್ತಿದೆ. ಇನ್ನೂ ಈ ಸಿನೆಮಾ ಬಿಡುಗಡೆಗಾಗಿ ಸಿನೆಮಾ ಲವರ್ಸ್ ಕಾತುರದಿಂದ ಕಾಯುತ್ತಿದ್ದು, ಬಿಡುಗಡೆಯಾಗಿದೆ. ಜು.14 ರಂದು ಈ ಸಿನೆಮಾ ಬಿಡುಗಡೆಯಾಗಿದ್ದು, ಈ ಸಿನೆಮಾದ ಪ್ರೀಮಿಯರ್‍ ಶೋ ಸಹ ಏರ್ಪಡಿಸಲಾಗಿತ್ತು. ಈ ಪ್ರೀಮಿಯರ್‍ ಶೋ ನಲ್ಲಿ ಅನೇಕ ಸೆಲೆಬ್ರೆಟಿಗಳು ಭಾಗವಹಿಸಿ ಸಖತ್ ಸದ್ದು ಮಾಡಿದ್ದರು.

ಇನ್ನೂ ಈ ಪ್ರೀಮಿಯರ್‍ ಶೋ ಗೆ ನಟ ವಿಜಯ್ ದೇವರಕೊಂಡ, ನಟಿ ರಾಶಿ ಖನ್ನಾ ಸೇರಿದಂತೆ ಹಲವರು ಹೋಗಿದ್ದರು. ಥಿಯೇಟರ್‍ ಬಳಿ ಅವರು ಕಾಣಿಸಿಕೊಂಡ ವಿಡಿಯೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿತ್ತು. ಆದರೆ ನಟಿ ರಶ್ಮಿಕಾ ಮಾತ್ರ ಕದ್ದು ಮುಚ್ಚಿ ಥಿಯೇಟರ್‍ ಗೆ ಹೋಗಿದ್ದಾರೆ. ಈ ಸುದ್ದಿ ಸಖತ್ ವೈರಲ್ ಆಗಿದೆ. ರಶ್ಮಿಕಾ ಬ್ಲೂ ಜೀನ್ಸ್, ವೈಟ್ ಟಿ ಶರ್ಟ್, ಬ್ಲಾಕ್ ಕ್ಯಾಪ್ ಧರಿಸಿ ಮುಖಕ್ಕೆ ಮಾಸ್ಕ್ ಧರಿಸಿಕೊಂಡರು ಬೇಬಿ ಸಿನೆಮಾ ನೋಡಿ ಬಂದಿದ್ದಾರೆ. ಇದೀಗ ಈ ಸುದ್ದಿ ಹಾಗೂ ರಶ್ಮಿಕಾ ಪೊಟೋ ಸಖತ್ ವೈರಲ್ ಆಗುತ್ತಿದೆ. ವಿಜಯ್ ದೇವರಕೊಂಡ ಹಾಗೂ ರಾಶಿ ಖನ್ನಾ ರವರಂತೆ ರಶ್ಮಿಕಾ ಸಹ ನೇರವಾಗಿಯೇ ಸಿನೆಮಾ ನೋಡಲು ಹೋಗಬಹುದಿತ್ತಲ್ವಾ, ಆಕೆ ಏಕೆ ಕದ್ದು ಮುಚ್ಚಿ ಹೋಗಬೇಕು ಎಂಬ ಅಭಿಪ್ರಾಯಗಳು ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿದೆ.

ಈ ಕಾರಣದಿಂದ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ನಡುವೆ ಅಫೈರ್‍ ನಡೆಯುತ್ತಿದೆ ಎಂಬ ಸುದ್ದಿ ಮತ್ತೊಮ್ಮೆ ಹಲ್ ಚಲ್ ಶುರುವಾಗಿದೆ. ಕಳೆದ ಬಾರಿ ಆನಂದ್ ದೇವರಕೊಂಡ ಸಿನೆಮಾ ಪ್ರಮೋಷನ್ ನಲ್ಲಿ ಕಾಣಿಸಿಕೊಂಡ ರಶ್ಮಿಕಾ ರವರನ್ನು ಅತ್ತಿಗೆ ಎಂದು ಅನೇಕರು ಕಾಲೆಳೆದಿದ್ದರು. ಇದೀಗ ಮತ್ತೊಮ್ಮೆ ರಶ್ಮಿಕಾ ಪೊಟೋ ವೈರಲ್ ಆದ ಜೊತೆಗೆ ವಿವಿಧ ರೀತಿಯ ಕಾಮೆಂಟ್ ಗಳು ಹರಿದು ಬರುತ್ತಿದೆ.

Most Popular

To Top