Film News

NBK108 ಸಿನೆಮಾ ಶೂಟಿಂಗ್ ಗೆ ಎಂಟ್ರಿ ಕೊಟ್ಟ ಕನ್ನಡದ ನಟಿ ಶ್ರೀಲೀಲಾ, ಬಾಲಕೃಷ್ಣ ಕೈಹಿಡಿದ ಪೋಸ್ಟರ್ ವೈರಲ್….!

ಸದ್ಯ ಸೌತ್ ನ ಟಾಲಿವುಡ್ ಸಿನಿರಂಗದಲ್ಲಿ ಶ್ರೀಲೀಲಾ ಹಾಟ್ ಟಾಪಿಕ್ ಆಗಿದ್ದಾರೆ. ಧಮಾಕಾ ಸಿನೆಮಾದ ಮೂಲಕ ಭಾರಿ ಸಕ್ಸಸ್ ಕಂಡುಕೊಂಡ ಶ್ರೀಲೀಲಾ ಈ ಸಿನೆಮಾದಲ್ಲಿ ಭರ್ಜರಿಯಾಗಿ ಸ್ಟೆಪ್ಸ್ ಸಹ ಹಾಕಿದ್ದರು. ಈ ಸಿನೆಮಾದ ಮೂಲಕ ಆಕೆಯ ಕ್ರೇಜ್ ಸಹ ದೊಡ್ಡ ಮಟ್ಟದಲ್ಲೇ ಹೆಚ್ಚಾಗಿದೆ ಎನ್ನಬಹುದು. ಈ ಹಾದಿಯಲ್ಲೇ ನಟಿ ಶ್ರೀಲೀಲಾ ತ್ರಿವಿಕ್ರಮ್ ಹಾಗೂ ಮಹೇಶ್ ಬಾಬು ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ SSMB28 ಸಿನೆಮಾದಲ್ಲಿ ಸಹ ನಟಿಸುತ್ತಿದ್ದಾರೆ. ಇದರ ಜೊತೆಗೆ ಶ್ರೀಲೀಲಾ NBK108 ಸಿನೆಮಾದಲ್ಲೂ ಸಹ ನಟಿಸುತ್ತಿದ್ದಾರೆ. ಇದೀಗ ಈ ಸಿನೆಮಾದ ಶೂಟಿಂಗ್ ನಲ್ಲಿ ಶ್ರೀಲೀಲಾ ಭಾಗಿಯಾಗಿದ್ದು, ಚಿತ್ರತಂಡ ಪೊಟೋ ಒಂದನ್ನು ಹಂಚಿಕೊಂಡಿದ್ದಾರೆ. ಸದ್ಯ ಪೊಟೋ ವೈರಲ್ ಆಗುತ್ತಿದೆ.

ಇತ್ತೀಚಿಗೆ ಸೌತ್ ನಲ್ಲಿ ಕನ್ನಡ ಮೂಲದ ನಟಿಯರ ಜೋರು ಸಾಗುತ್ತಿದೆ. ಈ ಹಾದಿಯಲ್ಲೇ ಕನ್ನಡದ ನಟಿ ಶ್ರೀಲೀಲಾ ಸಹ ಪೆಳ್ಳಿಸಂದD ಎಂಬ ಸಿನೆಮಾದ ಮೂಲಕ ತೆಲುಗು ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಬಳಿಕ ಆಕೆ ಮಾಸ್ ಮಹಾರಾಜ ರವಿತೇಜ ಜೊತೆಗೆ ಧಮಾಕಾ ಸಿನೆಮಾದಲ್ಲಿ ನಟಿಸಿದ್ದು, ಈ ಸಿನೆಮಾದ ಬಳಿಕ ಆಕೆಯ ಕ್ರೇಜ್ ಬದಲಾಯಿತು ಎಂದು ಹೇಳಬಹುದಾಗಿದೆ. ಒಂದೇ ಸಿನೆಮಾದ ಹಿಟ್ ಮೂಲಕ ಸ್ಟಾರ್‍ ನಟಿಯಂತೆ ರೇಂಜ್ ಪಡೆದುಕೊಂಡರು. ಸದ್ಯ ಆಕೆ ಬಾಲಕೃಷ್ಣ, ಮಹೇಶ್ ಬಾಬು, ಪವನ್ ಕಲ್ಯಾಣ್ ರವರಂತಹ ಸ್ಟಾರ್‍ ನಟರ ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ಇನ್ನೂ NBK108 ಸಿನೆಮಾದಲ್ಲಿ ಬಾಲಕೃಷ್ಣ ಮಗಳ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನೆಮಾ ತಂಡ ಶ್ರೀಲೀಲಾ ಸಿನೆಮಾ ಶೂಟೀಂಗ್ ಆಯ್ಕೆಯಲ್ಲಿ ಜಾಯಿನ್ ಆಗಿದ್ದು, ಈ ಸಂಬಂಧ ಪೊಟೋ ಒಂದನ್ನು ಸಹ ಹಂಚಿಕೊಂಡಿದೆ.

ಇನ್ನೂ NBK108 ಚಿತ್ರತಂಡ ಹಂಚಿಕೊಂಡ ಪೊಟೋದಲ್ಲಿ ಶ್ರೀಲೀಲಾ ಪುಲ್ ಶೋಷ್ ನಲ್ಲಿದ್ದಾರೆ. ಇನ್ನೂ ಬಾಲಕೃಷ್ಣ ಕೈಯಲ್ಲಿ ಕೈಯಿಟ್ಟು ಆಕೆ ಶೂಟೀಂಗ ಸೆಟ್ ನಲ್ಲಿ ಎಂಟ್ರಿ ಕೊಡುವಂತಹ ಪೊಟೋ ಒಂದನ್ನು ಹಂಚಿಕೊಂಡಿದ್ದಾರೆ. ಇನ್ನೂ ಈ ಸಿನೆಮಾದಲ್ಲಿ ಶ್ರೀಲೀಲಾ ಬಾಲಕೃಷ್ಣರವರಿಗೆ ಮಗಳ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸಿನೆಮಾದ ಬಳಿಕ ಶ್ರೀಲೀಲಾ ರೇಂಜ್ ಮತಷ್ಟು ಹೆಚ್ಚಾಗಲಿದೆ ಎಂದು ಹೇಳಲಾಗುತ್ತಿದೆ. ಇನ್ನೂ ಈ ಸಿನೆಮಾವನ್ನು ಖ್ಯಾತ ನಿರ್ದೇಶಕ ಅನೀಲ್ ರಾವಿಪೂಡಿ ನಿದೇರ್ಶನ ಮಾಡುತ್ತಿದ್ದಾರೆ. ಬಾಲಕೃಷ್ಣರವರಿಗೆ ಜೋಡಿಯಾಗಿ ಕಾಜಲ್ ಅಗರ್ವಾಲ್ ಬಣ್ಣ ಹಚ್ಚಲಿದ್ದಾರೆ.

ಸದ್ಯ ಸೌತ್ ಸಿನಿರಂಗದಲ್ಲಿ ಹಾಟ್ ಟಾಪಿಕ್ ಆಗಿರುವ ಶ್ರೀಲೀಲಾ ಬ್ಯಾಕ್ ಟು ಬ್ಯಾಕ್ ಹಿಟ್ ಗಳ ಮೂಲಕ ಸಖತ್ ಸದ್ದು ಮಾಡುತ್ತಿದ್ದಾರೆ. ಸದ್ಯ ಶ್ರೀಲೀಲಾ NBK108 ಸಿನೆಮಾದಲ್ಲಿ ಬಾಲಕೃಷ್ಣ ಮಗಳ ಪಾತ್ರದಲ್ಲಿ ನಟಿಸುತ್ತಿದ್ದಾರಂತೆ. ಈ ಸಿನೆಮಾದಲ್ಲಿ ಆಕೆಯ ಪಾತ್ರ ತುಂಬಾ ಆಸಕ್ತಿಕರವಾಗಿರುತ್ತದೆ ಎಂಬ ಮಾತುಗಳೂ ಸಹ ಕೇಳಿಬರುತ್ತಿವೆ. ನಿನ್ನೆಯಷ್ಟೆ ಶ್ರೀಲೀಲಾ ಈ ಸಿನೆಮಾದ ಶೂಟೀಂಗ್ ನಲ್ಲಿ ಆಕೆ ಭಾಗಿಯಾಗಿದ್ದಾರೆ. ಹೈದರಾಬಾದ್ ನಲ್ಲಿ ಪ್ರಮುಖ ಸನ್ನಿವೇಶಗಳನ್ನು ಚಿತ್ರೀಕರಿಸುತ್ತಿದ್ದಾರೆ. ಜೊತೆಗೆ ಬಾಲಿವುಡ್ ಹಾಟ್ ಬ್ಯೂಟಿ ನೋರಾ ಫತೇಹಿ ಈ ಸಿನೆಮಾದಲ್ಲಿ ವಿಲನ್ ರೋಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದೂಸ ಹ ಹೇಳಲಾಗುತ್ತಿದೆ. ಅಖಂಡ ಸಿನೆಮಾದ ಬಳಿಕ ಬಾಲಕೃಷ್ಣರವರ NBK108 ಸಿನೆಮಾದ ಮೇಲೆ ಭಾರಿ ನಿರೀಕ್ಷೆ ಸಹ ಹುಟ್ಟಿದೆ.

Most Popular

To Top