Film News

ತಾಯಿಯ ಬಗ್ಗೆ ಕಾಮೆಂಟ್ ಮಾಡಿದವರಿಗೆ ಖಡಕ್ ಆಗಿಯೇ ಉತ್ತರ ಕೊಟ್ಟ ಬಿಗ್ ಬಾಸ್ ಬ್ಯೂಟಿ ಸಾನ್ಯಾ ಐಯ್ಯರ್….!

ಸಿನಿಮಾ ಸೆಲೆಬ್ರೆಟಿಗಳಿಗೆ ಟ್ರೋಲ್ ಗಳು, ಟೀಕೆಗಳು ಸರ್ವೆ ಸಾಮಾನ್ಯವಾಗಿರುತ್ತವೆ. ಆ ಟ್ರೋಲರ್‍ ಗಳಿಗೆ ನಟಿಯರೂ ಸಹ ಅದೇ ರೇಂಜ್ ನಲ್ಲಿ ಕೌಂಟರ್‍ ಕೊಡುತ್ತಿರುತ್ತಾರೆ. ಕೆಲವರು ಆ ಟ್ರೋಲ್ ಗಳನ್ನು ಕಿವಿಗೆ ಸಹ ಹಾಕಿಕೊಳ್ಳುವುದಿಲ್ಲ. ಇದೀಗ ಕನ್ನಡದ ಬಿಗ್ ಬಾಸ್ ಬ್ಯೂಟಿ ಸಾನ್ಯಾ ಐಯ್ಯರ್‍ ಸಹ ತನ್ನ ತಾಯಿಯ ಬಗ್ಗೆ ಕಾಮೆಂಟ್ ಮಾಡಿದವರ ವಿರುದ್ದ ಗರಂ ಆಗಿದ್ದಾರೆ. ಸಾನ್ಯಾ ತಾಯಿ ಧರಿಸಿದ ಡ್ರೆಸ್ ಕಾರಣದಿಂದ ಆಕೆಯನ್ನು ಟ್ರೋಲ್ ಮಾಡಿದ್ದರು. ಇದಕ್ಕೆ ಸಾನ್ಯಾ ಸಹ ಸರಿಯಾಗಿಯೇ ಕೌಂಟರ್‍ ಕೊಟ್ಟಿದ್ದಾರೆ.

ನಟಿ ಸಾನ್ಯಾ ಐಯ್ಯರ್‍ ಕನ್ನಡದ ಪುಟ್ಟ ಗೌರಿ ಎಂಬ ಸೀರಿಯಲ್ ನಲ್ಲಿ ನಟಿಸಿ ತುಂಬಾನೆ ಫೇಂ ಪಡೆದುಕೊಂಡಿದ್ದರು. ಬಾಲ ನಟಿಯಾಗಿ ಈ ಸೀರಿಯಲ್ ನಲ್ಲಿ ಕಾಣಿಸಿಕೊಂಡ ಈಕೆ ಇದೀಗ ದೊಡ್ಡವಳಾಗಿದ್ದಾಳೆ. ಇತ್ತೀಚಿಗೆ ಬಿಗ್ ಬಾಸ್ ನಲ್ಲೂ ಸಹ ಭಾಗಿಯಾಗಿ ಸಖತ್ ಕ್ರೇಜ್ ಪಡೆದುಕೊಂಡಿದ್ದರು. ಇನ್ನೂ ವಿವಾದಗಳಿಗೆ ಗುರಿಯಾಗುವ ಈಕೆ ಬಿಗ್ ಬಾಸ್ ನಿಂದ ಹೊರಬಂದ ಬಳಿಕವೂ ಅನೇಕ ವಿವಾದಗಳಲ್ಲಿ ಸಿಲುಕಿದ್ದರು. ಇದೀಗ ಸಾನ್ಯಾ ಐಯ್ಯರ್‍ ತಾಯಿ ಧರಿಸಿದ ಬಟ್ಟೆಗಳ ಕಾರಣದಿಂದ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ನಟಿ ಸಾನ್ಯಾ ಐಯ್ಯರ್‍ ತಾಯಿ ದೀಪ ಐಯ್ಯರ್‍ ನಟಿಯಾಗಿ, ಡಬ್ಬಿಂಗ್ ಆರ್ಟಿಸ್ಟ್ ಆಗಿ  ಕೊಂಚ ಹೆಸರು ಮಾಡಿದವರು. ಕಿರುತೆರೆಯಲ್ಲಿ ಆಕೆ ಅನೇಕ ಸೀರಿಯಲ್ ಗಳಲ್ಲಿ ನಟಿಸಿದ್ದಾರೆ. ಡಬ್ಬಿಂಗ್ ಆರ್ಟಿಸ್ಟ್ ಆಗಿ, ಫ್ಯಾಷನ್ ಡಿಸೈನರ್‍ ಆಗಿಯೂ ದೀಪಾ ಐಯ್ಯರ್‍ ಗುರ್ತಿಸಿಕೊಂಡವರು. ಇದೀಗ ದೀಪಾ ಐಯ್ಯರ್‍ ಧರಿಸಿದ ಬಟ್ಟೆಗಳ ಕಾರಣದಿಂದಲೇ ಆಕೆಯನ್ನು ಟ್ರೋಲ್ ಮಾಡಿದ್ದಾರೆ.

ಕಳೆದೆರಡು ದಿನಗಳ ಹಿಂದೆಯಷ್ಟೆ ದೀಪಾ ಐಯ್ಯರ್‍ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಇನ್ನೂ ದೀಪಾ ಐಯ್ಯರ್‍ ಗೆ ಸಾನ್ಯಾ ಪ್ರೀತಿಯಿಂದ ಉಡುಗೊರೆ ಕೊಟ್ಟಿದ್ದಾರೆ. ಇನ್ನೂ ಐಶಾರಾಮಿ ಹೋಟೆಲ್ ಗೆ ಕರೆದುಕೊಂಡು ಹೋಗಿ ಕೇಕ್ ಕಟ್ ಮಾಡಿ ಸಂತೋಷದಿಂದ ಪಾರ್ಟಿ ಮಾಡಿದ್ದಾರೆ. ಇನ್ನೂ ಈ ಸಂಬಂಧ ಕೆಲವೊಂದು ಪೊಟೋಗಳನ್ನು ಸೊಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದರು ಸಾನ್ಯಾ. ಇನ್ನೂ ಈ ಪೊಟೋಗಳಿಗೆ ಅನೇಕರು ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡಿ ಟ್ರೋಲ್ ಮಾಡಿದ್ದಾರೆ. ಸಾನ್ಯಾ ತಾಯಿ ದೀಪರನ್ನು ಟ್ರೋಲ್ ಮಾಡಲು ಆಕೆ ಧರಿಸಿದ ಡ್ರೆಸ್ ಕಾರಣ ಎನ್ನಲಾಗಿದೆ. ದೀಪಾ ಐಯ್ಯರ್‍ ಮಾಡರ್ನ್ ಗೌನ್ ಧರಿಸಿದ್ದರು. ಡ್ರೆಸ್ ತುಂಬಾ ಎಕ್ಸ್ ಪೋಸಿವ್ ಆಗಿದೆ ಎಂಬ ಕಾರಣದಿಂದ ಆಕೆಯನ್ನು ಟ್ರೋಲ್ ಸಹ ಮಾಡಿದ್ದಾರೆ. ಇನ್ನೂ ಈ ವಿಡಿಯೋದಲ್ಲಿ ದೀಪಾ ಐಯ್ಯರ್‍ ಕೊಂಚ ಮುಜುಗರದಿಂದಲೇ ಪೋಸ್ ಕೊಟ್ಟಂತೆ ಇದೆ.

ಇನ್ನೂ ಈ ವಿಡಿಯೋವನ್ನು ಸಾನ್ಯಾ ತನ್ನ ಇನ್ಸ್ಟಾದಲ್ಲಿ ಶೇರ್‍ ಮಾಡಿದ್ದಾರೆ. ಈ ವಿಡಿಯೋ ನೋಡಿದ ಅನೇಕರು ವಿವಿಧ ರೀತಿಯಲ್ಲಿ ಕಾಮೆಂಟ್ ಗಳನ್ನು ಮಾಡಿದ್ದಾರೆ. ತಾಯಿಯೇ ಹಾಗಿರುವಾಗ  ಮಗಳು ಆ ರೀತಿಯಲ್ಲಿರುವುದರಲ್ಲಿ ಆಶ್ಚರ್ಯವೇ ಇಲ್ಲ ಎಂಬ ಕಾಮೆಂಟ್ ಗಳ ಜೊತೆಗೆ ಕೆಲವೊಂದು ಅಸಭ್ಯಕರವಾದ ಕಾಮೆಂಟ್ ಗಳನ್ನೂ ಸಹ ಮಾಡಿದ್ದಾರೆ. ಇನ್ನೂ ಕಾಮೆಂಟ್ ಗಳನ್ನು ನೋಡಿದ ಸಾನ್ಯಾ ಅವರು ವಿರುದ್ದ ಆಕ್ರೋಷ ಹೊರಹಾಕಿದ್ದಾರೆ. ಯಾರು ಯಾವ ರೀತಿಯಲ್ಲಿ ಬಟ್ಟೆ ಧರಿಸಬೇಕು ಎಂದು ಹೇಳೋಕೆ ನೀವ್ಯಾರು. ನಿಮಗೆ ಬೇಕಾದಂತೆ ನೀವು ಧರಿಸಿಕೊಳ್ಳಿ. ಅದನ್ನು ಬಿಟ್ಟು ಈ ರೀತಿಯಲ್ಲಿ ಕಾಮೆಂಟ್ ಮಾಡುವುದು ಸರಿಯಲ್ಲ ಎಂದು ಖಡಕ್ ಆಗಿಯೇ ವಾರ್ನ್ ಕೊಟ್ಟಿದ್ದಾರೆ.

Most Popular

To Top