Film News

ಗ್ರೀನ್ ಕಲರ್ ಸೀರೆಯಲ್ಲಿ ಬ್ಯೂಟಿಪುಲ್ ಲುಕ್ಸ್ ಕೊಟ್ಟ ಅಮೂಲ್ಯ, ಚೆಲುವಿನ ಚಿತ್ತಾರ ಬೆಡಗಿ ಐಶು ಲೇಟೆಸ್ಟ್ ಪಿಕ್ಸ್ ವೈರಲ್…..!

ಕನ್ನಡ ಸಿನಿರಂಗದ ಸ್ಟಾರ್‍ ನಟಿ ಅಮೂಲ್ಯ ಮದುವೆಯಾದ ಬಳಿಕ ಸಿನೆಮಾಗಳಿಂದ ದೂರವೇ ಉಳಿದಿದ್ದಾರೆ. ಆದರೆ ತಮ್ಮ ಅಭಿಮಾನಿಗಳಿಗೆ ನಿರಾಸೆ ಮಾಡಬಾರದೆಂಬ ದೃಷ್ಟಿಯಿಂದ ಆಕೆ ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿರುತ್ತಾ, ಪೊಟೋಗಳು, ವಿಡಿಯೋಗಳ ಮೂಲಕ ರಂಜಿಸುತ್ತಿರುತ್ತಾರೆ. ಇತ್ತಿಚಿಗಷ್ಟೆ ಅವಳಿ ಗಂಡು ಮಕ್ಕಳಿಗೆ ಜನ್ಮ ಕೊಟ್ಟರು. ಇದೀಗ ಆಕೆ ಗ್ರೀನ್ ಕಲರ್‍ ಸೀರೆಯಲ್ಲಿ ಹಂಚಿಕೊಂಡ ಲೇಟೆಸ್ಟ್ ಪೊಟೋಗಳು ಇಂಟರ್‍ ನೆಟ್ ನಲ್ಲಿ ಭಾರಿ ವೈರಲ್ ಆಗುತ್ತಿವೆ.

ಕನ್ನಡದ ನಟಿ ಅಮೂಲ್ಯ ಚಿಕ್ಕವಯಸ್ಸಿನಲ್ಲೇ ಬಣ್ಣದಲೋಕಕ್ಕೆ ಕಾಲಿಟ್ಟರು. ಆಕೆಗೆ ಬಿಗ್ ಬ್ರೇಕ್ ನೀಡಿದ ಸಿನೆಮಾ ಅಂದರೇ ಅದು ಚೆಲುವಿನ ಚಿತ್ತಾರ. ಮದುವೆಯ ಬಳಿಕ ಆಕೆ ಸಿನಿರಂಗದಿಂದ ದೂರವೇ ಉಳಿದಿದ್ದಾರೆ. ಆದರೆ ಸೋಷಿಯಲ್ ಮಿಡಿಯಾ ಮೂಲಕವೇ ಅಭಿಮಾನಿಗಳೊಂದಿಗೆ ಆಕೆ ಸದಾ ಟಚ್ ನಲ್ಲಿರುತ್ತಾರೆ. ಸೋಷಿಯಲ್ ಮಿಡಿಯಾದ ಮೂಲಕವೇ ಆಕೆಯ ವೈಯುಕ್ತಿಕ ಜೀವನ, ಪೊಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಆಕೆಯ ಗರ್ಭಿಣಿಯಾದಾಗಿನಿಂದ ಮಗು ಜನ್ಮಿಸಿದ ಎಲ್ಲಾ ವಿಚಾರಗಳನ್ನು ಸೋಷಿಯಲ್ ಮಿಡಿಯಾ ಮೂಲಕವೇ ಹಂಚಿಕೊಂಡಿದ್ದರು. ಅದರಲ್ಲೂ ಆಕೆಯ ಸೀಮಂತ ಕಾರ್ಯಕ್ರಮ, ಬೇಬಿ ಬಂಪ್ ಪೊಟೋಸ್ ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.

ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿರುವ ನಟಿ ಅಮೂಲ್ಯ ತಮ್ಮ ಅಭಿಮಾನಿಗಳಿಗಾಗಿ ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಹಸಿರು ಸೀರೆಯಲ್ಲಿ ಬ್ಯೂಟಿಪುಲ್ ಲುಕ್ಸ್ ಕೊಟ್ಟಿದ್ದಾರೆ. ಹಸಿರು ಸೀರೆ ನಿಮ್ಮ ಅಮೂಲ್ಯ ಎಂದು ಟೈಟಲ್ ಕೊಟ್ಟಿದ್ದಾರೆ. ಈ ಪೊಟೋದಲ್ಲಿ ಹಸಿರು ಸೀರೆಯನ್ನು ಧರಿಸಿ, ಮಲ್ಲಿಗೆ ಹೂ ಮುಡಿದು ಸಂಪ್ರದಾಯಬದ್ದವಾಗಿ ಕಾಣಿಸಿಕೊಂಡಿದ್ದಾರೆ. ಚೆಲುವಿನ ಚಿತ್ತಾರ ಹುಡುಗಿಯ ಈ ಪೋಸ್ ಗೆ ಅಭಿಮಾನಿಗಳು ಮಾತ್ರವಲ್ಲದೇ ಅನೇಕರು ಫಿದಾ ಆಗಿದ್ದಾರೆ. ಜೊತೆಗೆ ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಾ ಪೊಟೋಗಳನ್ನು ಮತಷ್ಟು ಕಡೆ ವೈರಲ್ ಮಾಡುತ್ತಿದ್ದಾರೆ.

ಇನ್ನೂ ಸುಮಾರು ವರ್ಷಗಳ ಕಾಲ ಬಣ್ಣದ ಲೋಕಕ್ಕೆ ಬ್ರೇಕ್ ನೀಡಿದ್ದ ಅಮೂಲ್ಯ ಶೀಘ್ರದಲ್ಲೇ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಕನ್ನಡದ ನಟ ಪ್ರಜ್ವಲ್ ದೇವರಾಜ್ ಹಾಗೂ ಗುರುದತ್ತ ಗಾಣಿಗ ರವರ ಕಾಂಬಿನೇಷನ್ ನಲ್ಲಿ ಸೆಟ್ಟೇರಿರುವ ಸಿನೆಮಾದಲ್ಲಿ ಅಮೂಲ್ಯ ಪ್ರಜ್ವಲ್ ದೇವರಾಜ್ ಗೆ ಜೋಡಿಯಾಗಿ ನಟಿಸಲಿದ್ದಾರೆ.

Most Popular

To Top