Film News

ಅನಸೂಯ ನೀವೆಲ್ಲಿದ್ದರೇ ಅಲ್ಲಿ ಹಬ್ಬ ಎಂದ ಅಭಿಮಾನಿ, ಕ್ರೇಜಿ ರಿಪ್ಲೆ ಕೊಟ್ಟ ಸ್ಟಾರ್ ಬ್ಯೂಟಿ ಅನಸೂಯ…..!

ಕಿರುತೆರೆಯ ಮೂಲಕ ಸಿನೆಮಾಗಳಲ್ಲಿ ಫೇಂ ಪಡೆದುಕೊಂಡ ನಟಿ ಅನಸೂಯ ಸದ್ಯ ಕಿರುತೆರೆಯಿಂದ ದೂರವಾಗಿ ಇದೀಗ ಸಿನೆಮಾಗಳಲ್ಲಿ ಪುಲ್ ಬ್ಯುಸಿಯಾಗಿದ್ದಾರೆ. ಸಿನೆಮಾಗಳ ಜೊತೆಗೆ ಅವರು ಸೋಷಿಯಲ್ ಮಿಡಿಯಾದಲ್ಲೂ ಪುಲ್ ಆಕ್ಟೀವ್ ಆಗಿರುತ್ತಾರೆ. ಸಿನೆಮಾ ಅಪ್ಡೇಟ್ ಗಳ ಜೊತೆಗೆ ತಮ್ಮ ವೈಯುಕ್ತಿಕ ವಿಚಾರಗಳನ್ನು ಹಾಗೂ ಪೊಟೋಶೂಟ್ಸ್, ವಿಡಿಯೋಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. ಇದೀಗ ಅಭಿಮಾನಿಗಳೊಂದಿಗೆ ಚಿಟ್ ಚಾಟ್ ನಡೆಸುವ ವೇಳೆ ಅನಸೂಯ ಗೆ ಅಭಿಮಾನಿಯೋರ್ವ ಮಾಡಿದ ಕಾಮೆಂಟ್ ಗೆ ಆಕೆ ಕ್ರೇಜಿ ರಿಪ್ಲೆ ಕೊಟ್ಟಿದ್ದಾರೆ.

ನಟಿ ಅನಸೂಯ ಸದ್ಯ ಸಿನೆಮಾಗಳಲ್ಲಿ ಪುಲ್ ಬ್ಯುಸಿಯಾಗಿದ್ದಾರೆ. ಸಾಲು ಸಾಲು ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ಅದರಲ್ಲೂ ಕೆಲವೊಂದು ಪ್ಯಾನ್ ಇಂಡಿಯಾ ಸಿನೆಮಾಗಳಲ್ಲೂ ಸಹ ನಟಿಸಿ ಫೇಂ ಪಡೆದುಕೊಂಡಿದ್ದಾರೆ. ಆಕೆ ಯಾವುದೇ ಸಿನೆಮಾದಲ್ಲಿ ನಟಿಸಿದರೂ ಆ ಪಾತ್ರ ಬಲವಾಗಿದ್ದರೇ ಮಾತ್ರ ಒಪ್ಪಿಕೊಳ್ಳುತ್ತಿರುತ್ತಾರೆ. ಸಿನೆಮಾದಲ್ಲಿ ಆಕೆಯ ಪಾತ್ರ ಸಿನೆಮಾಗೆ ಸೆಂಟರ್‍ ಆಫ್ ಅಟ್ರಾಕ್ಷನ್ ಆಗಿರಲು ಬಯಸುತ್ತಾರೆ. ಸಿನೆಮಾಗಳ ಜೊತೆಗೆ ಆಕೆ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಬ್ಯುಸಿಯಾಗಿರುತ್ತಾರೆ. ವಿವಿಧ ರೀತಿಯ ಪೊಟೋಶೂಟ್ಸ್ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. ವಿವಿಧ ರೀತಿಯ ಔಟ್ ಫಿಟ್ ಗಳಲ್ಲಿ, ಸೀರೆಯಲ್ಲಿ ಆಕೆ ಬ್ಯೂಟಿಪುಲ್ ಪೊಟೋಶೂಟ್ಸ್ ಹಂಚಿಕೊಳ್ಳುತ್ತಿರುತ್ತಾರೆ. ಜೊತೆಗೆ ಆಗಾಗ ಆಕೆ ಅಭಿಮಾನಿಗಳ ಜೊತೆ ಚಿಟ್ ಚಾಟ್ ಸಹ ಮಾಡುತ್ತಿರುತ್ತಾರೆ.

ಇನ್ನೂ ನಟಿ ಅನಸೂಯ ಇತ್ತೀಚಿಗೆ ಅಭಿಮಾನಿಗಳೊಂದಿಗೆ ಚಿಟ್ ಚಾಟ್ ಮಾಡಿದ್ದಾರೆ. ಈ ವೇಳೆ ಆಕೆ ಅನೇಕ ಇಂಟ್ರಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಸದ್ಯ ತಾನೂ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾಗಿ. ಶೂಟಿಂಗ್ ಗೆ ಹೋಗುತ್ತಿರುವುದಾಗಿ ಹೇಳಿದ್ದಾರೆ. ಓರ್ವ ಅಭಿಮಾನಿ ವೆಕೇಷನ್ ಗೆ ಹೋಗುತ್ತಿಲ್ಲವೆ ಎಂದು ಕೇಳಿದ್ದಾರೆ. ಅದಕ್ಕೆ ಸದ್ಯಾ ಲಗ್ಜುರಿ ಲೈಫ್ ಇಲ್ಲ ಎಂದು ಮೂತಿ ತಿರುಗಿಸಿಕೊಂಡು ಫನ್ನಿಯಾಗಿ ಉತ್ತರಿಸಿದ್ದಾರೆ. ಇದೇ ಸಮಯದಲ್ಲಿ ಮತ್ತೋರ್ವ ಅಭಿಮಾನಿ ನೀವು ಏನು ಮಾಡಿದರೂ ನಮಗಾಗಿಯೆ ಅಲ್ಲವೇ ಎಂದಿದ್ದರೇ, ಅದಕ್ಕೆ ಅದು ನಿಜವೇ, 50 ರಷ್ಟು ನಿಮಗಾಗಿ 50 ರಷ್ಟು ನನಗಾಗಿ ಎಂದು ಹೇಳಿದ್ದಾರೆ.

ಇನ್ನೂ ಮತ್ತೋರ್ವ ಅಭಿಮಾನಿಯಂತೂ ಅನಸೂಯಗೆ ಫ್ಲರ್ಟ್ ಮಾಡಿದ್ದಾನೆ. ನೀವು ಎಲ್ಲಿದ್ದರೇ ಅಲ್ಲಿ ಸಂಭ್ರಮ ಇರುತ್ತದೆ ಎಂದು ಹೇಳಿದ್ದಾನೆ. ಅದಕ್ಕೆ ಅನಸೂಯ ಪುಲ್ ಖುಷಿಯಾಗಿ ನೀವು ತುಂಬಾ ಸ್ವೀಟ್ ಪರ್ಸನ್ ಎಂದು ಕ್ರೇಜಿ ಕಾಮೆಂಟ್ ಮಾಡಿದ್ದಾರೆ. ಇನ್ನೂ ಅನಸೂಯ ರವರ ಈ ಚಿಟ್ ಚಾಟ್ ಸೋಷಿಯಲ್ ಮಿಡಿಯಾದಲ್ಲಿ ಪುಲ್ ವೈರಲ್ ಆಗುತ್ತಿದೆ. ಸದ್ಯ ಆಕೆ ಪುಷ್ಪಾ-2 ಸಿನೆಮಾದ ಜೊತೆಗೆ ಪ್ಲಾಷ್ ಬ್ಯಾಕ್ ಎಂಬ ತಮಿಳು ಸಿನೆಮಾದಲ್ಲೂ ನಟಿಸುತ್ತಿದ್ದಾರೆ.

Most Popular

To Top