Film News

ಹೊಟ್ಟೆಯಲ್ಲಿರುವ ಮಗು ಒದಿಯುತ್ತಿದೆ ಎಂದ ಇಲಿಯಾನಾ, ಇನ್ನೂ ತಂದೆ ಯಾರೂ ಎಂಬುದು ನಿಗೂಡ……!

ಸಿನಿರಂಗದಲ್ಲಿ ಅನೇಕ ನಟಿಯರು ಮದುವೆಗೂ ಮುಂಚೆಯೇ ಗರ್ಭ ಧರಿಸುತ್ತಿದ ಸನ್ನಿವೇಶಗಳು ಇದೆ. ಈ ಸಾಲಿಗೆ ನಟಿ ಇಲಿಯಾನಾ ಸಹ ಸೇರುತ್ತಾರೆ. ಕೆಲ ನಟಿಯರು ಆ ಗರ್ಭಕ್ಕೆ ಕಾರಣ ಯಾರು ಎಂಬುದನ್ನು ತಿಳಿಸಿರುತ್ತಾರೆ. ಆದರೆ ಇಲಿಯಾನಾ ಮಾತ್ರ ತನ್ನ ಮಗುವಿಗೆ ತಂದೆ ಯಾರು ಎಂಬುದನ್ನು ನಿಗೂಢವಾಗಿಟ್ಟುಕೊಂಡು ಗರ್ಭಿಣಿಯಾಗಿದ್ದಾಗಿ ಘೋಷಣೆ ಮಾಡಿದರು. ಜೊತೆಗೆ ತನ್ನ ಗರ್ಭದ ಬಗ್ಗೆ ಬ್ಯಾಕ್ ಟು ಬ್ಯಾಕ್ ಪೋಸ್ಟ್ ಗಳನ್ನು ಸಹ ಹಂಚಿಕೊಂಡು ಸುದ್ದಿಯಾಗುತ್ತಿದ್ದಾರೆ. ಇದೀಗ ತನ್ನ ಮಗು ಹೊಟ್ಟೆಯಲ್ಲಿ ಒದಿಯುತ್ತಿದೆ ಎಂದು ಹೇಳುವ ಮೂಲಕ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.

ಗೋವಾ ಬ್ಯೂಟಿ ಇಲಿಯಾನಾ ಕಳೆದ ಏಪ್ರಿಲ್ 18 ರಂದು ತನ್ನ ಇನ್ಸ್ಟಾ ಖಾತೆಯಲ್ಲಿ ತಾನು ಗರ್ಭಿಣಿಯಾಗಿದ್ದೇನೆ ಎಂಬ ಪೋಸ್ಟ್ ಮೂಲಕ ಎಲ್ಲರಿಗೂ ಶಾಕ್ ನೀಡಿದ್ದರು. ಅದಕ್ಕೆ ಮುಖ್ಯ ಕಾರಣ ಆಕೆಗೆ ಇನ್ನೂ ಮದುವೆಯಾಗಿಲ್ಲ. ಜೊತೆಗೆ ಆಕೆಯ ಗರ್ಭಕ್ಕೆ ಕಾರಣ ಆದರೂ ಯಾರು ಎಂಬ ವಿಚಾರವನ್ನೂ ಸಹ ಹಂಚಿಕೊಂಡಿಲ್ಲ. ಈ ಕಾರಣದಿಂದ ಎಲ್ಲರೂ ಆಕೆ ಗರ್ಭಿಣಿಯಾದ ವಿಚಾರ ತಿಳಿಸಿದಾಗ ಶಾಕ್ ಆಗಿದ್ದರು. ಬಳಿಕ ಆಕೆ ಬ್ಯಾಕ್ ಟು ಬ್ಯಾಕ್ ಪೋಸ್ಟ್ ಗಳ ಮೂಲಕ ಮತಷ್ಟು ಸುದ್ದಿಯಾಗುತ್ತಿದ್ದಾರೆ. ಇದೀಗ ಮತ್ತೊಮ್ಮೆ ಆಕೆ ಶಾಕಿಂಗ್ ಪೋಸ್ಟ್ ಮಾಡಿದ್ದಾರೆ. ತಿಂಗಳುಗಳು ತುಂಬುತ್ತಿರುವ ಹಿನ್ನೆಲೆಯಲ್ಲಿ ಆಕೆ ಹೊಟ್ಟೆಯಲ್ಲಿರುವ ಮಗುವಿನ ಚಲನದ ಬಗ್ಗೆ ಪೋಸ್ಟ್ ಮಾಡಿದ್ದಾರೆ. ಇದೀಗ ಈ ಪೋಸ್ಟ್ ವೈರಲ್ ಆಗುತ್ತಿದೆ.

ನಟಿ ಇಲಿಯಾನಾ ನನ್ನ ಮುದ್ದಿನ ಮಗುವಿಗಾಗಿ ಎದುರು ನೋಡುತ್ತಿದ್ದೇನೆ ಎಂದು ಪೋಸ್ಟ್ ಮಾಡಿ ಎಲ್ಲರನ್ನೂ ಶಾಕ್ ಆಗುವಂತೆ ಮಾಡಿದ್ದರು. ಕೆಲವು ದಿನಗಳ ಹಿಂದೆಯಷ್ಟೆ ಆಕೆ ತನ್ನ ಬೇಬಿ ಬಂಪ್ ಪೊಟೋ ಸಹ ಶೇರ್‍ ಮಾಡಿದ್ದರು. ಇದೀಗ ಆಕೆಗೆ ತಿಂಗಳುಗಳು ತುಂಬುತ್ತಿದ್ದು, ಮತ್ತೊಂದು ಪೋಸ್ಟ್ ಮಾಡಿದ್ದಾರೆ. ತನ್ನ ಹೊಟ್ಟೆಯಲ್ಲಿರುವ ಮಗುವಿನ ಚಲನದ ಬಗ್ಗೆ ಕಾಮೆಂಟ್ ಮಾಡಿದ್ದಾರೆ. ಹೊಟ್ಟೆಯಲ್ಲಿರುವ ಮಗು ಒದೆಯುತ್ತಿದೆ ಅದರಿಂದ ನನಗೆ ನಿದ್ದೆ ಮಾಡಲು ಆಗುತ್ತಿಲ್ಲ ಎಂದು ಪೊಟೋ ಒಂದನ್ನು ಶೇರ್‍ ಮಾಡಿದ್ದಾರೆ. ಸದ್ಯ ಈ ಪೋಸ್ಟ್ ಸೋಷಿಯಲ್ ಮಿಡಿಯಾದಲ್ಲಿ ಸಿಕಕಾಪಟ್ಟೆ ವೈರಲ್ ಆಗುತ್ತಿದೆ.  ಈಗಲೂ ಸಹ ಇಲಿಯಾನಾ ಗರ್ಭಕ್ಕೆ ಯಾರು ಕಾರಣ ಎಂದು ಅನೇಕರಲ್ಲಿ ಅನುಮಾನಗಳು ಮೂಡಿದೆ. ಇನ್ನೂ ಕತ್ರಿನಾ ಕೈಫ್ ಸಹೋದರ ಸೆಬಾಸ್ಟಿಯನ್ ಜೊತೆಗೆ ಡೇಟಿಂಗ್ ನಲ್ಲಿದ್ದಾರೆ ಎಂಬ ರೂಮರ್‍ ಸಹ ಕೇಳಿಬರುತ್ತಲೇ ಇದೆ. ಸೆಬಾಸ್ಟಿಯನ್ ಇಲಿಯಾನಾ ಗರ್ಭಕ್ಕೆ ಕಾರಣ ಎಂದು ಸಹ ಸುದ್ದಿ ಕೇಳಿಬರುತ್ತಿದೆ. ಆದರೆ ಈ ಬಗ್ಗೆ ಮಾತ್ರ ಇಲಿಯಾನಾ ಯಾವುದೇ ರೀತಿಯ ಕ್ಲಾರಿಟಿ ಕೊಟ್ಟಿಲ್ಲ.

ಇನ್ನೂ ಸುಮಾರು ವರ್ಷಗಳಿಂದ ಸಿನೆಮಾಗಳಿಂದ ದೂರವಿದ್ದು, ಇದೀಗ ಆಕೆ ಸಣ್ಣಪುಟ್ಟ ಆಫರ್‍ ಗಳ ಮೂಲಕ ಕೆರಿಯರ್‍ ಸಾಗಿಸುತ್ತಿದ್ದಾರೆ. ಇತ್ತೀಚಿಗಷ್ಟೆ ಆಕೆ ಸಬ್ ಗಜಬ್ ಎಂಬ ಮ್ಯೂಸಿಕ್ ಆಲ್ಬಮ್ ನಲ್ಲಿ ಕಾಣಿಸಿಕೊಂಡಿದ್ದರು. ಆದರೆ ಈ ಆಲ್ಬಮ್ ನಲ್ಲಿ ಇಲಿಯಾನಾ ತುಂಬಾ ದಪ್ಪವಾಗಿ ಕಾಣಿಸಿಕೊಂಡಿದ್ದರು. ಇದೀಗ ಆಕೆ ಮದುವೆಗೂ ಮುಂಚೆಯೇ ಪ್ರೆಗ್ನೆಟ್ ಆಗಿರುವುದಾಗಿ ಘೋಷಣೆ ಮಾಡಿ ಅಭಿಮಾನಿಗಳನ್ನು ಗೊಂದಲ್ಲಿಟ್ಟಿದ್ದಾರೆ.

Most Popular

To Top