Film News

ಲಿಪ್ ಲಾಕ್ ಸೀನ್ ಮೂಲಕ 29 ವರ್ಷದ ನೋ ಕಿಸ್ಸಿಂಗ್ ಎಂಬ ರೂಲ್ಸ್ ಬ್ರೇಕ್ ಮಾಡಿದ ಬಾಲಿವುಡ್ ನಟಿ ಕಾಜೋಲ್…..!

ಬಾಲಿವುಡ್ ಸಿನಿರಂಗದ ಸ್ಟಾರ್‍ ನಟಿ ಕಾಜೋಲ್ ಖಾತೆಯಲ್ಲಿ ಅನೇಕ ಸೂಪರ್‍ ಹಿಟ್ ಸಿನೆಮಾಗಳಿವೆ. ಸುಮಾರು ವರ್ಷಗಳ ಕಾಲ ಆಕೆ ನೋ ಲಿಪ್ ಲಾಕ್ ಎಂಬ ರೂಲ್ಸ್ ಫಾಲೋ ಮಾಡುತ್ತಿದ್ದರು. ಇದೀಗ ಆ ರೂಲ್ ಬ್ರೇಕ್ ಮಾಡಿದ್ದಾರೆ. ಮೊದಲ ಬಾರಿಗೆ ವೆಬ್ ಸಿರೀಸ್ ಒಂದರಲ್ಲಿ ಸಖತ್ ಬೋಲ್ಡ್ ಆಗಿ ನಟಿಸಿದ್ದಾರೆ. ಈ ಸಿರೀಸ್ ನಲ್ಲಿ ಲಿಪ್ ಲಾಕ್ ದೃಶ್ಯದಲ್ಲಿ ಕಾಣಿಸಿಕೊಂಡಿದ್ದು, ಎಲ್ಲರೂ ಶಾಕ್ ಆಗಿದ್ದಾರೆ. 29 ವರ್ಷಗಳಿಂದ ಆಕೆ ಇಟ್ಟುಕೊಂಡಿದ್ದ ರೂಲ್ಸ್ ಇದೀಗ ಬ್ರೇಕ್ ಮಾಡಿದ್ದಾರೆ.

ಇತ್ತೀಚಿಗೆ ಕೆಲವೊಂದು ವೆಬ್ ಸಿರೀಸ್ ಗಳಲ್ಲಿ ಬೋಲ್ಡ್ ಕಂಟೆಂಟ್ ತುಂಬಾನೆ ಇರುತ್ತಿದೆ. ಕೆಲವು ದಿನಗಳ ಹಿಂದೆಯಷ್ಟೆ ಬಿಡುಗಡೆಯಾದ ಲಸ್ಟ್ ಸ್ಟೋರೀಸ್-2, ಜೀ ಖರ್ದಾ ಸಿರೀಸ್ ಗಳಲ್ಲಿ ಕೆಲವೊಂದು ಬೋಲ್ಡ್ ಸೀನ್ ಗಳಿದ್ದು, ಸಖತ್ ಸದ್ದು ಮಾಡಿತ್ತು. ತಮನ್ನಾ, ಮೃಣಾಲ್ ಠಾಕೂರ್‍ ಸಹ ಈ ಸಿರೀಸ್ ಗಳಲ್ಲಿ ತುಂಬಾನೆ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದು ಎಲ್ಲರನ್ನೂ ಬೆರಗಾಗುವಂತೆ ಮಾಡಿದ್ದರು. ತಮನ್ನಾ ಸಹ ಈ ಸಿರೀಸ್ ಗಾಗಿ ಈ ಹಿಂದೆ ಇಟ್ಟುಕೊಂಡಿದ್ದ ರೂಲ್ಸ್ ಬ್ರೇಕ್ ಮಾಡಿದ್ದರು. 18 ವರ್ಷಗಳ ನೋ ಕಿಸ್ಸಿಂಗ್ ರೂಲ್ ತಮನ್ನಾ ಬ್ರೇಕ್ ಮಾಡಿದ್ದರು. ಇದೀಗ ಬಾಲಿವುಡ್ ಸೀನಿಯರ್‍ ನಟಿ ಕಾಜೋಲ್ ದೇವಗನ್ ಸಹ 29 ವರ್ಷಗಳ ರೂಲ್ಸ್ ಬ್ರೇಕ್ ಮಾಡಿದ್ದಾರೆ.

ನಟಿ ಕಾಜೋಲ್ ಅಗರ್ವಾಲ್ ಸಿನಿರಂಗಕ್ಕೆ ಎಂಟ್ರಿ ಕೊಟ್ಟ ಮೊದಲಲ್ಲಿ ಕೆಲವೊಂದು ಕಿಸ್ಸಿಂಗ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದರು. ಆದರೆ ಆಕೆ ಸೂಪರ್‍ ಸ್ಟಾರ್‍ ಆದ ಬಳಿಕ ಕಿಸ್ಸಿಂಗ್ ದೃಶ್ಯಗಳಲ್ಲಿ ಕಾಣಿಸಿಕೊಳ್ಳುವುದಕ್ಕೆ ಬ್ರೇಕ್ ಹಾಕಿದರು. ಸುಮಾರು 29 ವರ್ಷಗಳ ಕಾಲ ಆಕೆ ಅಂತಹ ದೃಶ್ಯಗಳಲ್ಲಿ ನಟಿಸಿರಲಿಲ್ಲ. ಇದೀಗ ಆಕೆ ಈ ನಿಯಮ  ಉಲ್ಲಂಘನೆ ಮಾಡಿದ್ದಾರೆ. ಸದ್ಯ ಕಾಜಲ್ ಮತ್ತೆ ಸಿನೆಮಾಗಳಲ್ಲಿ ಸಕ್ರಿಯರಾಗಿದ್ದಾರೆ. ಸುಮಾರು ವರ್ಷಗಳ ಬಳಿಕ ಆಕೆ ಮತ್ತೆ ಸಿನೆಮಾಗಳಲ್ಲಿ ಆಕ್ಟೀವ್ ಆಗಿದ್ದಾರೆ. ಸಿನೆಮಾಗಳ ಸಂಖ್ಯೆ ಕಡಿಮೆಯಾದರು ಒಳ್ಳೆಯ ಪಾತ್ರಗಳುಳ್ಳ ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ಇದೀಗ ಆಕೆಯ ಲೇಟೆಸ್ಟ್ ವೆಬ್ ಸಿರೀಸ್ ನಲ್ಲಿ ಕಿಸ್ಸಿಂಗ್ ಸೀನ್ ಮೂಲಕ ಎಲ್ಲರನ್ನೂ ಶಾಕ್ ಆಗುವಂತೆ ಮಾಡಿದ್ದಾರೆ.

ನಟಿ ಕಾಜೋಲ್ ಲಸ್ಟ್ ಸ್ಟೋರಿಸ್ 2 ಬಳಿಕ ದಿ ಟ್ರಯಲ್ ಎಂಬ ವೆಬ್ ಸಿರೀ‌ಸ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿರೀಸ್ ಡಿಸ್ನಿ ಹಾಟ್ ಸ್ಟಾರ್‍ ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಈ ಸಿರೀಸ್ ನಲ್ಲಿ ಕಾಜೋಲ್ ವಕೀಲೆಯಾಗಿ ಕಾಣಿಸಿಕೊಂಡಿದ್ದಾರೆ. ಬಂಗಾಳ ಮೂಲದ ನಟ ಜಿಶು ಸೇನ್ ಗುಪ್ತಾ ಜೊತೆಗೆ ಕಾಜೋಲ್ ನಟಿಸಿದ್ದಾರೆ. ಈ ಸಿರೀಸ್ ನಲ್ಲಿ ಕಾಜೋಲ್ ಆತನೊಂದಿಗೆ ಲಿಪ್ ಲಾಕ್ ಮಾಡಿದ್ದಾರೆ. ಸದ್ಯ ಈ ಕಿಸ್ಸಿಂಗ್ ದೃಶ್ಯಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ಎಲ್ಲರೂ ಶಾಕ್ ಆಗುತ್ತಿದ್ದಾರೆ.

Most Popular

To Top