ಆ ಕಾರಣದಿಂದ ಮಂಚು ಲಕ್ಷ್ಮೀ ಯನ್ನು ಹಿಗ್ಗಾಮುಗ್ಗಾ ಟ್ರೋಲ್ ಮಾಡಿದ ನೆಟ್ಟಿಗರು, ನಿಮ್ಮ ಮನೆಯಲ್ಲಿರೊವ್ರಿಗೆ ಮೊದಲು ಹೇಳಿ ಎಂದ್ರು……!

Follow Us :

ಟಾಲಿವುಡ್ ನ ಖ್ಯಾತ ನಟ ಮೋಹನ್ ಬಾಬು ರವರ ಪುತ್ರಿ ಮಂಚು ಲಕ್ಷ್ಮೀ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಆಕ್ಟೀವ್ ಆಗಿರುತ್ತಾರೆ. ಫನ್ನಿ ವಿಡಿಯೋಗಳನ್ನು, ಪೊಟೋಗಳನ್ನು ಹಂಚಿಕೊಳ್ಳುವ ಮೂಲಕ ಫೇಮ್ ದಕ್ಕಿಸಿಕೊಂಡಿದ್ದಾರೆ. ಜೊತೆಗೆ ಆಕೆ ಮಾಡುವ ಕೆಲವೊಂದು ಸಾಮಾಜಿಕ ಕಾರ್ಯಕ್ರಮಗಳಿಗೆ ಎಲ್ಲರ ಮೆಚ್ಚುಗೆ ಸಹ ವ್ಯಕ್ತವಾಗುತ್ತಿರುತ್ತದೆ. ಅದೇ ರೀತಿ ಆಕೆ ಮಾಡುವ ಕೆಲವೊಂದು ಪೋಸ್ಟ್ ಗಳು, ಕಾಮೆಂಟ್ ಗಳ ಕಾರಣದಿಂದ ಆಕೆಯನ್ನು ಸಿಕ್ಕಾಪಟ್ಟೆ ಟ್ರೋಲ್ ಸಹ ಆಗುತ್ತಿರುತ್ತಾರೆ. ಇದೀಗ ಆಕೆ ಇತ್ತಿಚಿಗೆ ನೀಡಿದ ಹೇಳಿಕೆಗಳ ಕಾರಣದಿಂದ ಆಕೆಯನ್ನು ಸರಿಯಾಗಿ ಟ್ರೋಲ್ ಮಾಡುತ್ತಿದ್ದಾರೆ.

ತೆಲುಗು ಸಿನಿರಂಗದಲ್ಲಿ ಹೆಚ್ಚು ಟ್ರೋಲ್ ಆಗುವ ಕುಟುಂಬ ಎಂದರೇ ಮಂಚು ಕುಟುಂಬ ಎಂದು ಹೇಳಬಹುದು. ಮಂಚು ಕುಟುಂಬದ ಬಗ್ಗೆ ಟ್ರೋಲ್ ಮಾಡುವಂತಹ ಒಂದು ದೊಡ್ಡ ಟ್ರೋಲರ್‍ ತಂಡಗಳೇ ಇದೆ ಎಂದರೇ ತಪ್ಪಾಗಲಾರದು.  ನಟಿ ಮಂಚು ಲಕ್ಷ್ಮೀ ಹಾಲಿವುಡ್ ನಲ್ಲಿ ಕೆರಿಯರ್‍ ಆರಂಭಿಸಿದರು. ಆದರೆ ಆಕೆ ಹಾಲಿವುಡ್ ಬಿಟ್ಟು ಟಾಲಿವುಡ್ ಗೆ ಬಂದರು. ನಟಿಯಾಗಿ, ಕ್ಯಾರೆಕ್ಟರ್‍ ಆರ್ಟಿಸ್ಟ್ ಆಗಿ, ಹೋಸ್ಟ್ ಆಗಿ, ನಿರ್ಮಾಪಕಿಯಾಗಿ, ಯೂಟ್ಯೂಬರ್‍ ಆಗಿ ತನ್ನ ಟ್ಯಾಲೆಂಟ್ ತೋರಿಸಿ ತನ್ನದೇ ಆದ ಅಭಿಮಾನಿ ಬಳಗವನ್ನು ಸಹ ಪಡೆದುಕೊಂಡು ಕಡಿಮೆ ಸಮಯದಲ್ಲೇ ಫೇಂ ಪಡೆದುಕೊಂಡರು. ಅನಗನಗಾ ಓ ಧಿರುಡು,  ಗುಂಡೆಲ್ಲೋ ಗೋದಾರಿ, ಊ ಕೊಡತಾರಾ ಉಲಿಕ್ಕಿ ಪಡತಾರಾ, ದೊಂಗಾಟ ಸೇರಿದಂತೆ ಅನೇಕ ಸಿನೆಮಾಗಳಲ್ಲಿ ನಟಿಸಿದರು ಆಕೆ ಸಕ್ಸಸ್ ಕಂಡುಕೊಳ್ಳಲಿಲ್ಲ ಎಂದೇ ಹೇಳಬಹುದು.

ಇನ್ನೂ ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ  ತೆಲುಗು ಹಿರೋಯಿನ್ ಗಳು ಹಾಗೂ ತೆಲುಗು ನಿರ್ಮಾಪಕರ ಬಗ್ಗೆ ಕಾಮೆಂಟ್ಸ್ ಮಾಡಿದ್ದರು. ತೆಲುಗು ಸಿನೆಮಾಗಳಲ್ಲಿ ತೆಲುಗು ಮೂಲದ ಹಿರೋಯಿನ್ ಗಳನ್ನು ಆಯ್ಕೆ ಮಾಡಿಕೊಳ್ಳುವುದಿಲ್ಲ. ಇಲ್ಲಿನ ಮೇಕರ್‍ ಗಳು ಪಕ್ಕದ ರಾಜ್ಯಗಳಿಂದ ಹಿರೋಯಿನ್ ಗಳನ್ನು ಕರೆಸುತ್ತಾರೆ ಎಂದು ಹೇಳಿದ್ದರು. ಇನ್ನೂ ಆಕೆಯ ಈ ಕಾಮೆಂಟ್ ಗಳು ಸಖತ್ ವೈರಲ್ ಆಗಿತ್ತು. ಈ ಕಾಮೆಂಟ್ ಗಳ ಬಗ್ಗೆ ನೆಟ್ಟಿಗರು ಸಹ ರಿಯಾಕ್ಟ್ ಆಗುತ್ತಿದ್ದಾರೆ. ಮಂಚು ಲಕ್ಷ್ಮೀ ರವರನ್ನು ಸಿಕ್ಕಾಪಟ್ಟೆ ಟ್ರೋಲ್ ಸಹ ಮಾಡುತ್ತಿದ್ದಾರೆ. ನೀವು ಈ ವಿಚಾರದಲ್ಲಿ ಮೊದಲು ನಿಮ್ಮ ತಮ್ಮಂದಿರಿಗೆ ಹೇಳಿ. ಬೇರೆ ರಾಜ್ಯಗಳ ನಟಿಯರೊಂದಿಗೆ ಹೆಚ್ಚಾಗಿ ಅವರೇ ಸಿನೆಮಾ ಮಾಡೋದು. ಆ ವಿಚಾರಕ್ಕೆ ನೀವು ಏನು ಹೇಳುತ್ತೀರಿ ಎಂದು ಪ್ರಶ್ನೆಗಳ ಸುರಿಮಳೆ ಗೈದಿದ್ದಾರೆ. ನಿಮ್ಮ ತಮ್ಮಂದಿರು ಕಾಜಲ್, ಪಾಯಲ್, ಸನ್ನಿ ಲಿಯೋನ್ ರವರ ಜೊತೆ ಸಿನೆಮಾ ಮಾಡೋದರ ಬದಲು ನೀವು ಹೇಳುತ್ತಿರುವಂತೆ ನಿಹಾರಿಕಾ, ಬಿಂಧು ಮಾದವಿ, ಈಷಾರೆಬ್ಬಾ ರವರಂತಹ ಹಿರೋಯಿನ್ ಗಳ ಜೊತೆ ಸಿನೆಮಾಗಳನ್ನು ಮಾಡಿ ಎಂದು ಹೇಳಬಹುದಲ್ಲವೇ ಎಂದು ಆಕೆಯನ್ನು ಟ್ರೋಲ್ ಸಹ ಮಾಡುತ್ತಿದ್ದಾರೆ.

ಇನ್ನೂ ಲಕ್ಷ್ಮೀ ಮಂಚು ಮಾಡುವಂತಹ ಕೆಲವೊಂದು ಸಾಮಾಜಿಕ ಕಾರ್ಯಕ್ರಮಗಳಿಗಾಗಿ ಆಕೆಯನ್ನು ಸಿನಿರಂಗ ಸೇರಿದಂತೆ ಅನೇಕರು ಗೌರವದಿಂದ ಸಹ ಕಾಣುತ್ತಾರೆ. ಕೆಲವು ದಿನಗಳ ಹಿಂದೆಯಷ್ಟೆ ಕೆಲವೊಂದು ಶಾಲೆಗಳನ್ನು ದತ್ತು ಪಡೆದುಕೊಂಡು ಅವನ್ನು ಸ್ಮಾರ್ಟ್ ಸ್ಕೂಲ್ಸ್ ಆಗಿ ಬದಲಿಸಿದ್ದಾರೆ. ಬಡವರ ಶಿಕ್ಷಣಕ್ಕೆ ನೆರವಾದ ಆಕೆಯ ಕಾರ್ಯಕ್ಕೆ ಎಲ್ಲರಿಂದ ಮೆಚ್ಚುಗೆ ಸಹ ದೊರೆಯುತ್ತಿದೆ.