Film News

ನನ್ನ ಮದುವೆಯಾಗುತ್ತೀಯಾ ಎಂದು ಕಾಜಲ್ ಗೆ ಶಾಕ್ ಕೊಟ್ಟ ಅಭಿಮಾನಿ, ಮೈಂಡ್ ಬ್ಲಾಕ್ ಉತ್ತರ ಕೊಟ್ಟ ಕಾಜಲ್ ಅಗರ್ವಾಲ್…..!

ಸೋಷಿಯಲ್ ಮಿಡಿಯಾ ಹೆಚ್ಚು ಪ್ರಚಲಿತಕ್ಕೆ ಬಂದ ಬಳಿಕ ಸಿನೆಮಾ ಸೆಲೆಬ್ರೆಟಿಗಳಿಗೆ ತಮ್ಮ ಅಭಿಮಾನಿಗಳೊಂದಿಗೆ ಟಚ್ ನಲ್ಲಿರುವ ಒಳ್ಳೆಯ ಮಾರ್ಗವಾಗಿದೆ. ಸೋಷಿಯಲ್ ಮಿಡಿಯಾದಲ್ಲೇ ತಮ್ಮ ಸಿನೆಮಾ ಅಪ್ಡೇಟ್ ಗಳು, ವೈಯುಕ್ತಿಕ ವಿಚಾರಗಳ ಜೊತೆಗೆ ಅನೇಕ ಬಾರಿ ಅಭಿಮಾನಿಗಳೊಂದಿಗೆ ಚಿಟ್ ಚಾಟ್ ಸಹ ನಡೆಸುತ್ತಿರುತ್ತಾರೆ. ಇದೀಗ ಕಾಜಲ್ ಅಗರ್ವಾಲ್ ಸಹ ತನ್ನ ಅಭಿಮಾನಿಗಳೊಂದಿಗೆ ಚಿಟ್ ಚಾಟ್ ನಡೆಸಿದ್ದು, ಆಕೆಗೆ ಅಭಿಮಾನಿಯೊಬ್ಬ ನನ್ನನ್ನು ಮದುವೆಯಾಗುತ್ತೀಯಾ ಎಂದು ಕಾಮೆಂಟ್ ಮಾಡುವ ಮೂಲಕ ಶಾಕ್ ಕೊಟ್ಟಿದ್ದಾರೆ.

ಸೌತ್ ಸಿನಿರಂಗದಲ್ಲಿ ಅನೇಕ ಸೂಪರ್‍ ಹಿಟ್ ಸಿನೆಮಾಗಳ ಮೂಲಕ ಭಾರಿ ಕ್ರೇಜ್ ಪಡೆದುಕೊಂಡ ಕಾಜಲ್ ಅಗರ್ವಾಲ್ ಯಂಗ್ ನಟರಿಂದ ಸೀನಿಯರ್‍ ಹಿರೋಗಳ ಜೊತೆಗೂ ಸಹ ನಟಿಸಿದ್ದಾರೆ. ಇನ್ನೂ ಕಳೆದ 2020 ರಲ್ಲಿ ತನ್ನ ಬಾಲ್ಯದ ಸ್ನೇಹಿತ ಗೌತಮ್ ಕಿಚ್ಲು ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಅವರಿಬ್ಬರಿಗೂ ಓರ್ವ ಪುತ್ರನಿದ್ದಾನೆ. ಮದುವೆ, ಮಗು ಕಾರಣದಿಂದ ಸಿನೆಮಾಗಳಿಗೆ ಕಾಜಲ್ ಬ್ರೇಕ್ ನೀಡಿದ್ದರು. ಇದೀಗ ಆಕೆ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದಾರೆ. ಕ್ರೇಜಿ ಪ್ರಾಜೆಕ್ಟ್ ಗಳಲ್ಲಿ ನಟಿಸುತ್ತಿದ್ದಾರೆ. ಸೆಕೆಂಡ್ ಇನ್ನಿಂಗ್ಸ್ ನಲ್ಲಿ ಆಕೆ ಮೊದಲ ಬಾರಿಗೆ ನಂದಮೂರಿ ಬಾಲಕೃಷ್ಣ ಜೊತೆಗೆ ಭಗವಂತ್ ಕೇಸರಿ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಇದರ ಆಕೆ ಮತಷ್ಟು ಸಿನೆಮಾಗಳಲ್ಲಿ ಪುಲ್ ಬ್ಯುಸಿಯಾಗಿದ್ದಾರೆ. ಸಿನೆಮಾಗಳಿಂದ ದೂರವುಳಿದರೂ ಸಹ ಕಾಜಲ್ ಸೋಷಿಯಲ್ ಮಿಡಿಯಾ ಮೂಲಕ ಅಭಿಮಾನಿಗಳೊಂದಿಗೆ ಟಚ್ ನಲ್ಲೇ ಇದ್ದರು.

ಇದೀಗ ಆಕೆ ತಮ್ಮ ಅಭಿಮಾನಿಗಳೊಂದಿಗೆ ಚಿಟ್ ಚಾಟ್ ನಡೆಸಿದ್ದಾರೆ. ಈ ವೇಳೆ ಕಾಜಲ್ ಗೆ ಅಭಿಮಾನಿಗಳು ಕೇಳಿದಂತಹ ಅನೇಕ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ಈ ವೇಳೆ ಆಕೆ ತಾನು ಎದುರಿಸಿದ ಮಾನಸಿಕ ಸಮಸ್ಯೆಯ ಬಗ್ಗೆ ಸಹ ಹೇಳಿಕೊಂಡಿದ್ದಾರೆ. ಜೊತೆಗೆ ಕೆಲವೊಂದು ವೈಯುಕ್ತಿಕ ವಿಚಾರಗಳನ್ನು ಸಹ ಹಂಚಿಕೊಂಡಿದ್ದಾರೆ. ಈ ವೇಳೆ ಕಾಜಲ್ ಗೆ ಅಭಿಮಾನಿಯೋರ್ವ ಶಾಕಿಂಗ್ ಪ್ರಶ್ನೆಯೊಂದನ್ನು ಕೇಳಿದ್ದಾನೆ. ನನ್ನನ್ನು ಮದುವೆಯಾಗುತ್ತೀರಾ ಎಂದು ಕೇಳಿದ್ದಾನೆ. ಅದಕ್ಕೆ ಕಾಜಲ್ ಸಹ ರಿಯಾಕ್ಟ್ ಆಗಿದ್ದಾರೆ. ಕೂಡಲೇ ಎರಡೂವರೆ ವರ್ಷಗಳ ಹಿಂದೆಯೇ ಆ ಅದೃಷ್ಟ ಮತ್ತೋರ್ವನ ಪಾಲಾಗಿದೆ ಎಂದು ಉತ್ತರ ನೀಡಿದ್ದಾರೆ. ಇನ್ನೂ ಆಕೆಯ ಈ ಕಾಮೆಂಟ್ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಇನ್ನು ಅಲ್ಲು ಅರ್ಜುನ್ ಬಗ್ಗೆ ಹೇಳಿ ಎಂದು ಮತ್ತೋರ್ವ ಪ್ರಶ್ನೆ ಮಾಡಿದ್ದಾನೆ. ನನಗೆ ತಿಳಿದಂತಹ ಒಳ್ಳೆಯ ವ್ಯಕ್ತಿಗಳಲ್ಲಿ ಅಲ್ಲು ಅರ್ಜುನ್ ಸಹ ಒಬ್ಬರು. ಆತನ ಎನರ್ಜಿ ನನಗೆ ತುಂಬಾ ಇಷ್ಟ. ಅದಕ್ಕಾಗಿಯೇ ಆತನೊಂದಿಗೆ ಯಾರಾದರೂ ನಟಿಸಲು ಇಷ್ಟಪಡುತ್ತಾರೆ ಎಂದು ಕಾಜಲ್ ಹೇಳಿದ್ದಾರೆ.

ಇನ್ನೂ ಕಾಜಲ್ ಅನೇಕ ವಿಚಾರಗಳನ್ನು ಸಹ ಹಂಚಿಕೊಂಡಿದ್ದಾರೆ. ಕಳೆದೆರಡು ದಿನಗಳ ಹಿಂದೆಯಷ್ಟೆ ಲಸ್ಟ್ ಸ್ಟೋರೀಸ್-2 ನೋಡಿದೆ. ಅದರಲ್ಲಿ ತಮನ್ನಾ ತುಂಬಾ ಅದ್ಬುತವಾಗಿ ನಟಿಸಿದ್ದಾರೆ. ಆಕೆಯನ್ನು ನೋಡಿ ನಾನು ಭಯಪಟ್ಟೆ ಎಂದಿದ್ದಾರೆ. ಸದ್ಯ ತಾನು ಇಂಡಿಯನ್-2 ಸಿನೆಮಾದ ಶೂಟಿಂಗ್ ನಲ್ಲೂ ಬ್ಯುಸಿಯಾಗಿದ್ದು, ಈ ಸಿನೆಮಾದಲ್ಲಿನ ನನ್ನ ಪಾತ್ರದ ವಿಚಾರದಲ್ಲಿ ನನಗೆ ಸಂತೃಪ್ತಿಯಿದೆ ಎಂದು ಹೇಳಿದ್ದಾರೆ.

Most Popular

To Top