ಅಕ್ಕಿನೇನಿ ನಾಗಾರ್ಜುನ್ ಜೊತೆಗೆ ಡೇಟ್ ಗೆ ಹೋಗ್ತೀನಿ ಎಂದ ಚಂದಮಾಮ ಕಾಜಲ್, ವೈರಲ್ ಆದ ಕಾಮೆಂಟ್ಸ್…..!

Follow Us :

ಸೌತ್ ಸಿನಿರಂಗವನ್ನು ಸುಮಾರು ವರ್ಷಗಳ ಕಾಲ ಆಳಿದಂತಹ ನಟಿಯರಲ್ಲಿ ಕಾಜಲ್ ಅಗರ್ವಾಲ್ ಸಹ ಒಬ್ಬರಾಗಿದ್ದಾರೆ. ಅನೇಕ ಸೂಪರ್‍ ಹಿಟ್ ಸಿನೆಮಾಗಳ ಮೂಲಕ ಆಕೆ ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಸಹ ಪಡೆದುಕೊಂಡರು. ಸಿನೆಮಾಗಳಲ್ಲಿ ಬ್ಯುಸಿಯಾಗಿರುವಾಗಲೇ ಆಕೆ ಮದುವೆಯಾದರು. ಮದುವೆ, ಮಗು ಆದ ಬಳಿಕ ಆಕೆ ಇದೀಗ ಮತ್ತೆ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಕಾಜಲ್ ಅಗರ್ವಾಲ್ ಅಕ್ಕಿನೇನಿ ನಾಗಾರ್ಜುನ್ ರವರ ಜೊತೆ ಡೇಟಿಂಗ್ ಗೆ ಹೋಗ್ತೀನಿ ಎಂದು ಕಾಮೆಂಟ್ ಮಾಡಿದ್ದು ಆಕೆಯ ಕಾಮೆಂಟ್ ಗಳು ವೈರಲ್ ಆಗುತ್ತಿವೆ.

ನಟಿ ಕಾಜಲ್ ಅಗರ್ವಾಲ್ ಸೋಷಿಯಲ್ ಮಿಡಿಯಾದ್ಲಲಿ ಪುಲ್ ಆಕ್ಟೀವ್ ಆಗಿರುತ್ತಾರೆ. ಮದುವೆ ಹಾಗೂ ಮಗು ಕಾರಣದಿಂದ ಸಿನೆಮಾಗಳಿಂದ ದೂರವೇ ಉಳಿದರೂ ಸಹ ಸೋಷಿಯಲ್ ಮಿಡಿಯಾದ ಮೂಲಕ ಅಭಿಮಾನಿಗಳೊಂದಿಗೆ ಟಚ್ ನಲ್ಲೇ ಇದ್ದರು. ಇದೀಗ ಆಕೆ ಸೆಕೆಂಡ್ ಇನ್ನಿಂಗ್ಸ್ ನಲ್ಲಿ ಬ್ಯುಸಿಯಾಗಿದ್ದಾರೆ. ಕುಟುಂಬ ನಿರ್ವಹಣೆಯ ಜೊತೆಗೆ ಸಿನೆಮಾಗಳಲ್ಲಿ ಸಹ ನಟಿಸುತ್ತಾ ಕೆರಿಯರ್‍ ಸಾಗಿಸುತ್ತಿದ್ದಾರೆ. ಒಂದು ಕಡೆ ಕುಟುಂಬ ನಿರ್ವಹಣೆ ಮತ್ತೊಂದು ಕಡೆ ಸಿನೆಮಾಗಳು ಎರಡನ್ನೂ ಸಮರೋಪಾದಿಯಲ್ಲಿ ನೋಡಿಕೊಳ್ಳುತ್ತಾ ಕೆರಿಯರ್‍ ಸಾಗಿಸುತ್ತಿದ್ದಾರೆ. ಇದೀಗ ಆಕೆ ಮಾಡಿರುವ ಕಾಮೆಂಟ್ ಗಳು ಹಾಟ್ ಟಾಪಿಕ್ ಆಗಿದೆ. ಅಕ್ಕಿನೇನಿ ನಾಗಾರ್ಜುನ್ ರವರೊಂದಿಗೆ ಡೇಟಿಂಗ್ ಗೆ ಹೋಗುವುದಾಗಿ ಹೇಳಿದ್ದು, ಆಕೆಯ ಕಾಮೆಂಟ್ ಗಳು ವೈರಲ್ ಆಗುತ್ತಿವೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಕಾಜಲ್ ಈ ವಿಚಾರ ಹೇಳಿದ್ದಾರೆ. ನೀವು ಯಾರೊಂದಿಗೆ ಡೇಟಿಂಗ್ ಗೆ ಹೋಗುತ್ತೀರಾ ಎಂದು ಪ್ರಶ್ನೆಯೊಂದು ಕೇಳಿದ್ದು, ಅದಕ್ಕೆ ಕಾಜಲ್ ಕೂಡಲೇ ನಾಗಾರ್ಜುನ್ ರವರ ಜೊತೆಗೆ ಡೇಟಿಂಗ್ ಗೆ ಹೋಗಲು ಸಿದ್ದ ಎಂದು ಹೇಳಿದ್ದಾರೆ. ಇನ್ನೂ ಕಾಜಲ್ ನೀಡಿದ ಈ ಹೇಳಿಕೆ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಆದರೆ ಈ ಕಾಮೆಂಟ್ಸ್ ಮಾಡಿದ್ದು ಈಗಲ್ಲ. ಹಳೇಯ ಹೇಳಿಕೆ ಇದೀಗ ಮತ್ತೆ ಸದ್ದು ಮಾಡುತ್ತಿದೆ. ಇನ್ನೂ ಕಾಜಲ್ ನಾಗಾರ್ಜುನ್ ರವರ ಜೊತೆಗೆ ಸಿನೆಮಾ ಮಾಡಲಿದ್ದಾರೆ. ನಾಗಾರ್ಜುನ್ ರವರ ದಿ ಘೋಸ್ಟ್ ಎಂಬ ಸಿನೆಮಾದಲ್ಲಿ ಮೊದಲಿಗೆ ಕಾಜಲ್  ನಟಿಸಬೇಕಿತ್ತು. ಆ ಸಮಯದಲ್ಲಿ ಆಕೆ ಗರ್ಭಿಣಿಯಾದ ಹಿನ್ನೆಲೆಯಲ್ಲಿ ಆಕೆ ಆ ಸಿನೆಮಾದಲ್ಲಿ ನಟಿಸೋಕೆ ಆಗಲಿಲ್ಲ. ಇದೀಗ ಕಾಜಲ್ ಮತ್ತೆ ನಾಗಾರ್ಜುನ್ ರವರ ಸಿನೆಮಾದಲ್ಲಿ ನಟಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಜಲ್ ನಾಗಾರ್ಜುನ್ ಬಗ್ಗೆ ಹೇಳಿದ ಹಳೇಯ ಕಾಮೆಂಟ್ ವೈರಲ್ ಆಗಿದೆ.

ಮಲಯಾಳಂನಲ್ಲಿ ಸೂಪರ್‍ ಹಿಟ್ ಪಡೆದುಕೊಂಡ ಪಾರಿಂಜು ಮಾರಿಯಸ್ ಜೋಸ್ ಎಂಬ ಸಿನೆಮಾದ ರಿಮೇಕ್ ಮಾಡಲಿದ್ದಾರೆ ನಾಗಾರ್ಜುನ್. ಈ ಸಿನೆಮಾದಲ್ಲಿ ಕಾಜಲ್ ಅಗರ್ವಾಲ್ ನಾಯಕಿಯಾಗಿ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನೂ ಸೆಕೆಂಡ್ ಇನ್ನಿಂಗ್ಸ್ ನಲ್ಲಿ ಕಾಜಲ್ ಭಾರಿ ಪ್ರಾಜೆಕ್ಟ್ ಗಳಲ್ಲಿ ನಟಿಸುತ್ತಿದ್ದಾರೆ. ಭಗವಂತ ಕೇಸರಿ ಸಿನೆಮಾದಲ್ಲಿ ಕಾಜಲ್ ಬಾಲಕೃಷ್ಣ ಜೊತೆಗೆ ನಟಿಸುತ್ತಿದ್ದಾರೆ. ಇದರ ಜೊತೆಗೆ ಸತ್ಯಭಾಮ ಎಂಬ ಲೇಡಿ ಓರಿಯೆಂಟೆಡ್ ಸಿನೆಮಾದಲ್ಲಿ ಸಹ ನಟಿಸುತ್ತಾ, ತಮಿಳಿನ ಖ್ಯಾತ ನಿರ್ದೇಶಕ ಶಂಕರ್‍ ಹಾಗೂ ಕಮಲ್ ಹಾಸನ್ ರವರ ಇಂಡಿಯನ್-2 ಸಿನೆಮಾದಲ್ಲೂ ಸಹ ನಟಿಸುತ್ತಿದ್ದಾರೆ.