Film News

NTR30 ಸಿನೆಮಾಗಾಗಿ ಭಾರಿ ಸಂಭಾವನೆ ಪಡೆದುಕೊಳ್ಳಲಿದ್ದಾರಂತೆ ಜೂನಿಯರ್ ಶ್ರೀದೇವಿ ಜಾನ್ವಿ ಕಪೂರ್…!

ಬಾಲಿವುಡ್ ನಲ್ಲಿ ಸೋಷಿಯಲ್ ಮಿಡಿಯಾ ಸೆನ್ಷೇಷನ್ ಎಂತಲೇ ಖ್ಯಾತಿ ಪಡೆದುಕೊಂಡ ಯಂಗ್ ಬ್ಯೂಟಿ ಜಾನ್ವಿ ಕಪೂರ್‍ ಸಿನೆಮಾಗಳಿಗಿಂತಲೂ ಸೋಷಿಯಲ್ ಮಿಡಿಯಾ ಮೂಲಕ ಹೆಚ್ಚು ಫೇಂ ಪಡೆದುಕೊಂಡ ನಟಿಯಾಗಿದ್ದಾರೆ ಎಂದರೇ ತಪ್ಪಾಗಲಾರದು. ಅತಿಲೋಕ ಸುಂದರಿ ದಿವಂಗತ ಶ್ರೀದೇವಿಯವರ ಮುದ್ದಿನ ಮಗಳಾಗಿ ಸಿನಿರಂಗಕ್ಕೆ ಎಂಟ್ರಿ ಕೊಟ್ಟ ಈ ಬ್ಯೂಟಿಗೆ ಇನ್ನೂ ಬಿಗ್ ಬ್ರೇಕ್ ನೀಡುವಂತಹ ಸಿನೆಮಾ ಸಿಕ್ಕಿಲ್ಲ ಎನ್ನಬಹುದಾಗಿದೆ. ಇದೀಗ ಜಾನ್ವಿ ಕಪೂರ್‍ NTR30 ಸಿನೆಮಾದ ಮೂಲಕ ಸೌತ್ ಸಿನಿರಂಗಕ್ಕೆ ಎಂಟ್ರಿ ಕೊಡಲಿದ್ದಾರೆ. ಈ ಸಿನೆಮಾಗಾಗಿ ಜಾನ್ವಿ ಭಾರಿ ಮೊತ್ತದ ರೆನ್ಯುಮರೇಷನ್ ಪಡೆದುಕೊಳ್ಳಲಿದ್ದಾರಂತೆ. ಸದ್ಯ ಈ ಸುದ್ದಿ ತೆಲುಗು ಸಿನಿವಲಯದಲ್ಲಿ ಚರ್ಚೆ ನಡೆಯುತ್ತಿದೆ.

RRR ಸಿನೆಮಾದ ಬಳಿಕ ಜೂನಿಯರ್‍ ಎನ್.ಟಿ.ಆರ್‍ ರವರು ಖ್ಯಾತ ನಿರ್ದೇಶಕ ಕೊರಟಾಲ ಶಿವ ಜೊತೆಗೆ NTR30 ಸಿನೆಮಾ ಘೋಷಣೆ ಮಾಡಿ ಸುಮಾರು ತಿಂಗಳುಗಳೇ ಕಳೆದಿದೆ. ಸಿನೆಮಾದಲ್ಲಿ ನಟಿ ಯಾರು ಎಂಬುದಕ್ಕೆ ಅನೇಕ ದಿನಗಳಿಂದ ಚರ್ಚೆಗಳೂ ಸಹ ನಡೆಯುತ್ತಿದ್ದು, ಇದೀಗ ಈ ಸಿನೆಮಾದಲ್ಲಿ ಬಾಲಿವುಡ್ ಯಂಗ್ ಬ್ಯೂಟಿ ಜಾನ್ವಿ ಕಪೂರ್‍ ಯಂಗ್ ಟೈಗರ್‍ ಎನ್.ಟಿ.ಆರ್‍ ಜೊತೆ ರೊಮ್ಯಾನ್ಸ್ ಮಾಡುವುದು ಫಿಕ್ಸ್ ಆಗಿದೆ. ಇನ್ನೂ ನಟಿ ಜಾನ್ವಿ ಕಪೂರ್‍ ಈ ಸಿನೆಮಾದ ಮೂಲಕ ಸೌತ್ ಸಿನಿರಂಗಕ್ಕೆ ಎಂಟ್ರಿ ಕೊಡಲಿದ್ದಾರೆ. ಸೌತ್ ನಲ್ಲಿರವ ಅಪಾರ ಸಂಖ್ಯೆಯಲ್ಲಿ ಶ್ರೀದೇವಿಯ ಅಭಿಮಾನಿಗಳು ಜಾನ್ವಿ ಕಪೂರ್‍ ರವರನ್ನು ಸೌತ್ ಸಿನೆಮಾಗಳಲ್ಲಿ ನೋಡಲು ಆಸಕ್ತಿ ತೋರಿದ್ದರು. ಇದೀಗ ಅವರ ಆಸೆ ಈಡೆರುತ್ತಿದೆ. NTR30 ಸಿನೆಮಾ ಘೋಷಣೆಯಾದಾಗಿನಿಂದ ಅನೇಕ ನಟಿಯರ ಹೆಸರುಗಳು ಕೇಳಿಬಂದವು. ಆದರೆ ಅಂತಿಮವಾಗಿ ಜಾನ್ವಿ ಕಪೂರ್‍ ರವರನ್ನು ಆಯ್ಕೆ ಮಾಡಲಾಗಿದೆ. ಇದೀಗ ಜಾನ್ವಿ ಕಪೂರ್‍ NTR30 ಸಿನೆಮಾಗಾಗಿ ಭಾರಿ ಮೊತ್ತದ ಸಂಭಾವನೆ ಪಡೆದುಕೊಳ್ಳುತ್ತಿದ್ದಾರೆ ಎಂಬ ಸುದ್ದಿ ಟಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ.

ಇನ್ನೂ ಜಾನ್ವಿ ಕಪೂರ್‍ ತಮ್ಮ ಮೊದಲ ಸಿನೆಮಾ ಧಡಕ್ ನಲ್ಲಿ ನಟಿಸಲು 60 ಲಕ್ಷ ಸಂಭಾವನೆ ಪಡೆದುಕೊಂಡಿದ್ದರಂತೆ. ಇದೀಗ NTR30 ಸಿನೆಮಾಗಾಗಿ ಆಕೆ ಭಾರಿ ಮೊತ್ತ ಡಿಮ್ಯಾಂಡ್ ಮಾಡಿದ್ದು. ಅದಕ್ಕೆ ಚಿತ್ರತಂಡ ಸಹ ಒಪ್ಪಿಗೆ ನೀಡಿದೆ ಎನ್ನಲಾಗುತ್ತಿದೆ. ಇನ್ನೂ  NTR30 ನಿರ್ದೇಶಕ ಕೊರಟಾಲ ಶಿವಾ ಸಹ ಜಾನ್ವಿ ಲುಕ್ ಟೆಸ್ಟ್ ಮಾಡಿದ್ದಾರೆ. ಈ ಸಿನೆಮಾಗೆ ಜಾನ್ವಿ ಪಕ್ಕಾ ಮ್ಯಾಚ್ ಆಗುತ್ತಾರೆ ಎಂಬ ನಿರ್ಧಾರಕ್ಕೆ ಬಂದ ಬಳಿಕ ಆಕೆ ಕೇಳಿರುವ ಸಂಭಾವನೆಗೂ ಸಹ ಒಪ್ಪಿದ್ದಾರೆ ಎನ್ನಲಾಗಿದೆ. ಸದ್ಯ ಜಾನ್ವಿ ಕಪೂರ್‍  NTR30 ಸಿನೆಮಾಗಾಗಿ ಬರೊಬ್ಬರಿ 3.5 ಕೋಟಿ ಸಂಭಾವನೆ ಪಡೆದುಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯ ಈ ಬಗ್ಗೆ ಅಧಿಕೃತವಾದ ಮಾಹಿತಿ ಇಲ್ಲ. ಈ ಸುದ್ದಿ ನಿಜವೇ ಆದರೇ ಜಾನ್ವಿ ಕೆರಿಯರ್‍ ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದುಕೊಂಡ ಸಿನೆಮಾ ಇದಾಗಲಿದೆ. ಮೊದಲನೆ ಸಿನೆಮಾದಲ್ಲೆ ಭಾರಿ ಸಂಭಾವನೆ ಪಡೆದುಕೊಳ್ಳುವ ಯಂಗ್ ನಟಿಯಾಗಿಯೂ ಸಹ ಖ್ಯಾತಿ ಪಡೆದುಕೊಳ್ಳಲಿದ್ದಾರೆ.

ಇನ್ನೂ ಜಾನ್ವಿ ಕಪೂರ್‍ ಸಿನೆಮಾಗಳ ಜೊತೆಗೆ ಕೆಲವೊಂದು ಜಾಹಿರಾತುಗಳಲ್ಲೂ ಸಹ ನಟಿಸುತ್ತಾರೆ. ಕೆಲವೊಂದು ಪ್ರಾಡಕ್ಟ್ ಗಳನ್ನು ಪ್ರಮೋಟ್ ಸಹ ಮಾಡುತ್ತಿರುತ್ತಾರೆ. ಆ ಮೂಲಕ ಸಹ ಜಾನ್ವಿ ತುಂಬಾನೆ ಹಣ ಸಂಪಾದನೆ ಮಾಡುತ್ತಿರುತ್ತಾರೆ. ಮೂಲಗಳ ಪ್ರಕಾರ ಆಕೆಯ ವಾರ್ಷಿಕ ಆದಾಯ 6-7 ಕೋಟಿ ಇರಬಹುದು ಎನ್ನಲಾಗುತ್ತಿದೆ. ಇದೀಗ ಜಾನ್ವಿ ಕಪೂರ್‍ NTR30 ಸಿನೆಮಾದಲ್ಲಿ ನಟಿಸಲಿದ್ದು, ಬಾಲಿವುಡ್ ನಲ್ಲಿ ಅಷ್ಟೊಂದು ಸಕ್ಸಸ್ ಕಾಣದ ಈಕೆ ಈ ಸಿನೆಮಾದ ಮೂಲಕ ಯಾವ ರೀತಿಯ ಕ್ರೇಜ್ ಸಂಪಾದಿಸಿಕೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

Most Popular

To Top