ಪ್ರಿಯಕರನ ಜೊತೆಗೆ ಸಿಕ್ಕಿಬಿದ್ದ ಜೂನಿಯರ್ ಶ್ರೀದೇವಿ, ಮುಖ ಮುಚ್ಚಿಕೊಂಡ ಜಾನ್ವಿ ಕಪೂರ್….!

Follow Us :

ಬಾಲಿವುಡ್ ನಲ್ಲಿ ಸದಾ ಸುದ್ದಿಯಲ್ಲಿರುವ ನಟಿಯರಲ್ಲಿ ಜಾನ್ವಿ ಕಪೂರ್‍ ಸದಾ ಮೊದಲಿರುತ್ತಾರೆ. ಸೋಷಿಯಲ್ ಮಿಡಿಯಾದಲ್ಲಂತೂ ಜಾನ್ವಿ ಪ್ರತಿನಿತ್ಯ ಒಂದಲ್ಲ ಒಂದು ರೀತಿಯ ಸುದ್ದಿಯಲ್ಲಿರುತ್ತಾರೆ. ೧ ಇದೀಗ ತನ್ನ ಬಾಯ್ ಫ್ರೆಂಡ್ ಜೊತೆಗೆ ಸಿಕ್ಕಿಬಿದ್ದಿದ್ದಾರೆ. ಸುಮಾರು ದಿನಗಳಿಂದ ರೂಮರ್‍ ಗಳ ಮೂಲಕ ಬಾಯ್ ಫ್ರೆಂಡ್ ಹೆಸರು ಕೇಳಿಬರುತ್ತಿದ್ದು, ಇದೀಗ ನೇರವಾಗಿ ಸಿಕ್ಕಿಬಿದ್ದಿದ್ದಾರೆ. ಈ ಸಂಬಂಧ ಕೆಲವೊಂದು ಪೊಟೋಗಳು ಸೊಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಬಾಲಿವುಡ್ ಯಂಗ್ ಅಂಡ್ ಹಾಟ್ ಬ್ಯೂಟಿ ಜಾನ್ವಿ ಕಪೂರ್‍ ಸಿನೆಮಾಗಳ ಜೊತೆಗೆ ಸೋಷಿಯಲ್ ಮಿಡಿಯಾದಲ್ಲಿ ಬ್ಯುಸಿಯಾಗಿರುತ್ತಾರೆ. ಸಾಲು ಸಾಲು ಸಿನೆಮಾಗಳ ಜೊತೆಗೆ ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಪೊಟೋಶೂಟ್ಸ್ ಮೂಲಕ ಇಂಟರ್‍ ನೆಟ್ ನಲ್ಲಿ ಹಲ್ ಚಲ್ ಸೃಷ್ಟಿಸುತ್ತಿರುತ್ತಾರೆ. ಜೊತೆಗೆ ಬಿಡುವು ಸಿಕ್ಕರೇ ಸಾಕು ವೆಕೇಷನ್ ಗಳಿಗೆ ಹಾರುತ್ತಾ, ಅಲ್ಲೂ ಸಹ ಸೌಂದರ್ಯ ಪ್ರದರ್ಶನದ ಮೂಲಕ ಎಲ್ಲರ ಗಮನ ಸೆಳೆಯುತ್ತಿರುತ್ತಾರೆ. ಅನೇಕ ವೆಕೇಷನ್ ಗಳಿಗೆ ಆಕೆ ತನ್ನ ಭಾಯ್ ಫ್ರೆಂಡ್ ಜೊತೆಗೆ ಹೋಗುತ್ತಿರುತ್ತಾರೆ. ಆದರೆ ಎಂದೂ ಸಹ ಗೆಳೆಯನೊಂದಿಗೆ ಕಾಣಿಸಿಕೊಂಡಿಲ್ಲ. ಸೆಲೆಬ್ರೆಟಿಗಳು ಈ ರೀತಿ ಕದ್ದು ಮುಚ್ಚಿ ಪ್ರೇಮ ಪಯಣ ಸಾಗಿಸುತ್ತಿರಬೇಕಾದರೇ ಎಂದೊ ಒಂದಿ ದಿನ ಸಿಕ್ಕಿಬೀಳುತ್ತಾರೆ. ಅದರಂತೆ ಇದೀಗ ಜಾನ್ವಿ ಹಾಗೂ ಆಕೆಯ ಭಾಯ್ ಪ್ರೆಂಡ್ ಒಂದೇ ಕಾರಿನಲ್ಲಿ ಸಿಕ್ಕಿಬಿದ್ದಿದ್ದಾರೆ.

ನಟಿ ಜಾನ್ವಿ ಕಪೂರ್‍ ತನ್ನ ಸಹೋದರಿ ರಿಯಾ ಕಪೂರ್‍ ಮನೆಯಲ್ಲಿ ಪಾರ್ಟಿಯೊಂದಕ್ಕೆ ಹಾಜರಾಗಲು ಬಂದಿದ್ದರು. ಈ ವೇಳೆ ಕಾರಿನಲ್ಲಿ ಯುವಕನ ಜೊತೆಗೆ ಜಾನ್ವಿ ಕಾರಿನಲ್ಲಿ ಬಂದಿದ್ದರು. ಇನ್ನೂ ಅಲ್ಲಿದ್ದ ಮೀಡಿಯಾ ಕಣ್ಣಿಗೆ ಬಿದ್ದಿದ್ದಾರೆ. ಈ ವೇಳೆ ಕ್ಯಾಮೆರಾದಲ್ಲಿ ಪೊಟೋಗಳನ್ನು ಕ್ಲಿಕ್ಕಿಸಲು ಹೋದಾಗ ಆಕೆ ಮುಖವನ್ನು ಬಚ್ಚಿಟ್ಟುಕೊಂಡಿದ್ದಾರೆ. ಕಾರಿನಲ್ಲಿದ್ದ ಆ ವ್ಯಕ್ತಿ ಬೇರೆ ಯಾರೂ ಅಲ್ಲ ಸುಮಾರು ದಿನಗಳಿಂದ ಜಾನ್ವಿ ಡೇಟಿಂಗ್ ನಲ್ಲಿದ್ದಾರೆ ಎಂದ ಹುಡುಗ. ಆತ ಜಾನ್ವಿ ಕಪೂರ್‍ ಪ್ರೀತಿಸುತ್ತಿರುವ ಶಿಖರ್‍ ಪಹಾರಿಯಾ. ಇವರಿಬ್ಬರೂ ಪಾರ್ಟಿಗೆ ಹೋಗಿದ್ದಾರೆ. ಈ ವೇಳೆ ಕ್ಯಾಮೆರಾ ಕಣ್ಣಿಗೆ ಬೀಳದಂತೆ ಮುಖ ಮುಚ್ಚಿಕೊಂಡಿದ್ದಾರೆ. ಸದ್ಯ ಈ ಪೊಟೋಗಳು ಸೊಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ.

ಜಾನ್ವಿ ಕಪೂರ್‍ ಅನೇಕ ಪಾರ್ಟಿಗಳಿಗೆ ಹಾಜರಾಗುತ್ತಿರುತ್ತಾರೆ. ಯಾವುದೇ ಪಾರ್ಟಿಗೆ ಹೋದರೂ ಸಹ ತುಂಬಾ ಸಾಮಾನ್ಯವಾಗಿ ಎಲ್ಲರೊಂದಿಗೆ ಬೆರೆಯುತ್ತಿರುತ್ತಾರೆ. ಜೊತೆಗೆ ಕ್ಯಾಮೆರಾ ಕಣ್ಣಿಗೂ ಸಹ ಪೋಸ್ ಕೊಡುತ್ತಿರುತ್ತಾರೆ. ಆದರೆ ಇದೀಗ ತನ್ನ ಬಾಯ್ ಫ್ರೆಂಡ್ ಜೊತೆಗೆ ಬಂದಿದ್ದು, ಕ್ಯಾಮೆರಾಗೆ ಪೋಸ್ ಕೊಡಲು ಕೊಂಚ ಕಿರಿಕಿರಿ ಅನುಭವಿಸಿದ್ದಾರೆ.  ಈ ಕಾರಣದಿಂದ ಅವರ ಸುದ್ದಿ ಇದೀಗ ಹಾಟ್ ಟಾಪಿಕ್ ಆಗಿದೆ. ಜೊತೆಗೆ ನೆಟ್ಟಿಗರೂ ಸಹ ವಿಭಿನ್ನ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.