ತಾಯಿಯಾಗಲಿದ್ದಾರೆಯೇ ಕತ್ರಿನಾ ಕೈಫ್, ವೈರಲ್ ಆದ ಕತ್ರಿನಾ ಕೈಫ್ ಪ್ರಗ್ನೆಂಟ್ ಸುದ್ದಿ….!

Follow Us :

ಬಾಲಿವುಡ್ ನ ಕ್ಯೂಟ್ ಕಪಲ್ ಎಂದು ಕರೆಯಲಾಗುವ ಕತ್ರಿಕಾ ಕೈಫ್ ಹಾಗೂ ವಿಕ್ಕಿ ಸಿನೆಮಾಗಳ ಜೊತೆ ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲೂ ಸಹ ಸಕ್ರಿಯರಾಗಿರುತ್ತಾರೆ. ಕಳೆದ ಡಿಸೆಂಬರ್‍ ಮಾಹೆಯಲ್ಲಿ ರಾಜಸ್ಥಾನದ ಮಾಧೌಪುರ್‍ ಸಿಕ್ಸ್ ಸೆನ್ಸಸ್ ಕೋಟೆಯಲ್ಲಿ ಅದ್ದೂರಿಯಾಗಿ ನಡೆಯಿತು. ಈ ಜೋಡಿಗೆ ಮದುವೆಯಾಗಿ ಒಂದು ವರ್ಷ ಕಳೆದಿದ್ದು, ಇದೀಗ ಕತ್ರಿನಾ ಗರ್ಭಿಣಿಯಾಗಿದ್ದಾರೆ ಎಂದು ಸುದ್ದಿ ಹರಿದಾಡುತ್ತಿದೆ.

ಸುಮಾರು ವರ್ಷಗಳ ಕಾಲ ಪ್ರೇಮ ಪಯಣ ಸಾಗಿಸಿ ಮದುವೆಯೆಂಬ ಬಂಧನಕ್ಕೆ ಒಳಗಾದ ಜೋಡಿಗಳಲ್ಲಿ ಕತ್ರಿನಾ ಹಾಗೂ ವಿಕ್ಕಿ ಜೋಡಿ ಸಹ ಒಂದಾಗಿದೆ. ಸದ್ಯ ಈ ಜೋಡಿ ಮದುವೆಯಾದ ಬಳಿಕ ಪುಲ್ ಎಂಜಾಯ್ ಮಾಡುತ್ತಿದ್ದಾರೆ. ಸಿನೆಮಾಗಳಲ್ಲಿ ಬಿಡುವು ಸಿಕ್ಕರೇ ಸಾಕು ದೇಶ ವಿದೇಶಗಳಿಗೆ ಟೂರ್‍ ಪ್ಲಾನ್ ಮಾಡುತ್ತಿರುತ್ತಾರೆ. ಇದೀಗ ಕತ್ರಿನಾ ಗರ್ಭಿಣಿಯಾದರು ಎಂಬ ಸುದ್ದಿ ವೈರಲ್ ಆಗುತ್ತಿದೆ. ಕೆಲವು ದಿನಗಳ ಹಿಂದೆಯಷ್ಟೆ ಕತ್ರಿನಾ ಹಾಗೂ ವಿಕ್ಕಿ ಮುಂಬೈನ ಖ್ಯಾತ ಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಈ ವೇಳೆ ತೆಗೆದ ಕೆಲವೊಂದು ಪೊಟೋಗಳಲ್ಲಿ ಕತ್ರಿನಾ ಬೇಬಿ ಬಂಪ್ ಕಾಣಿಸುತ್ತಿದೆ ಎಂದು ಸೋಷಿಯಲ್ ಮಿಡಿಯಾದಲ್ಲಿ ಕಾಮೆಂಟ್ ಗಳು ಹರಿದುಬರುತ್ತಿದ್ದು, ಗರ್ಭಿಣಿಯಾದ ಕಾರಣದಿಂದಲೇ ಈ ಜೋಡಿ ದೇವಾಸ್ಥಾನಕ್ಕೆ ತೆರಳಿ ದೇವರ ಆರ್ಶೀವಾದ ಪಡೆದಿದ್ದಾರೆ ಎಂಬ ಕಾಮೆಂಟ್ ಗಳು ಬರುತ್ತಿವೆ.

ಮುಂಬೈನಲ್ಲಿನ ಪ್ರಸಿದ್ದ ಗಣಪತಿ ದೇವಾಲಯಕ್ಕೆ ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ಭೇಟಿ ನೀಡಿ, ಅಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಕತ್ರಿನಾ ಕೈಫ್ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿದೆ. ಈ ವಿಡಿಯೋದಲ್ಲಿ ಕತ್ರಿನಾ ಕೈಫ್ ಹೊಟ್ಟೆ ಕೊಂಚ ಮುಂದೆ ಬಂದಿರುವ ಕಾರಣದಿಂದ ಆಕೆ ಗರ್ಭಿಣಿಯಾಗಿದ್ದಾರೆ ಎಂಬ ರೂಮರ್‍ ಹುಟ್ಟಿಕೊಂಡಿದೆ. ಇನ್ನೂ ಇದೇ ಮಾದರಿಯಲ್ಲಿ ಅನೇಕ ಬಾರಿ ಕತ್ರಿನಾ ಕೈಫ್ ಗರ್ಭಿಣಿಯಾಗಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಇದೀಗ ಈ ಸುದ್ದಿ ಸಹ ಕೇವಲ ರೂಮರ್‍ ಅಷ್ಟೆ ಎಂದು ತಳ್ಳಿ ಹಾಕಿದ್ದಾರೆ. ಒಂದು ರೀತಿ ಕತ್ರಿನಾ ಕೈಫ್ ಗರ್ಭಿಣಿ ಆಗಿದಿದ್ದರೇ ಅವರೇ ತಿಳಿಸುತ್ತಿದ್ದರು, ಇದೆಲ್ಲಾ ಸುಳ್ಳು ಸುದ್ದಿಗಳು ಎಂದು ಆಕೆಯ ಅಭಿಮಾನಿಗಳು ಕಾಮೆಂಟ್ ಗಳ ಮೂಲಕ ತಿಳಿಸುತ್ತಿದ್ದಾರೆ.

ನಟಿ ಕತ್ರಿನಾ ಕೈಫ್ ಇತ್ತಿಚಿಗಷ್ಟೆ ಪೋನ್ ಭೂತ್ ಸಿನೆಮಾದ ಮೂಲಕ ತೆರೆ ಮೇಲೆ ಕಾಣಿಸಿಕೊಂಡಿದ್ದರು. ಈ ಸಿನೆಮಾ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಸದ್ಯ ಆಕೆ ಟೈಗರ್‍ -3 ಸಿನೆಮಾದಲ್ಲಿ ಸಲ್ಮಾನ್ ಖಾನ್ ಜೊತೆಗೆ ನಟಿಸುತ್ತಿದ್ದಾರೆ. ಅತ್ತ ವಿಕ್ಕಿ ಕೌಶಲ್ ಸಹ ಎರಡು ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿಗಷ್ಟೆ ವಿಕ್ಕಿ ಗೋವಿಂದ ಮೇರಾ ನಾಮ್ ಎಂಬ ಸಿನೆಮಾದ ಮೂಲಕ ತೆರೆಯ ಮೇಲೆ ಕಾಣಿಸಿಕೊಂಡಿದ್ದರು.