ಸ್ಪೋಟಕ ಭವಿಷ್ಯ ನುಡಿದ ನೊಣವಿಕೆರೆ ಯಶ್ವಂತ ಗುರೂಜಿ, ಈ ಬಾರಿ ಭಾರತಕ್ಕೆ ಮಹಿಳೆ ಪ್ರಧಾನಿಯಾಗ್ತಾರಂತೆ…!

Follow Us :

ಭಾರತದಲ್ಲಿ ಸದ್ಯ ಲೋಕಸಭಾ ಚುನಾವಣೆ 2024 ದಿನೇ ದಿನೇ ರಂಗೇರುತ್ತಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಘೋಷಣೆಯಾಗಲಿದೆ. ರಾಜಕೀಯ ಪಕ್ಷಗಳು ತಮ್ಮ ಪಕ್ಷವನ್ನು ಗೆಲ್ಲಿಸಲು ಕಸರತ್ತುಗಳನ್ನು ನಡೆಸುತ್ತಿದೆ. ಅನೇಕ ಸಂಸ್ಥೆಗಳು ಪಕ್ಷಗಳ ಗೆಲುವಿನ ಬಗ್ಗೆ ಸಮೀಕ್ಷೆ ಸಹ ಬಿಡುಗಡೆ ಮಾಡಿದೆ. ಇದೀಗ ತುಮಕೂರಿನ ನೊಣವಿನ ಕೆರೆಯ ಯಶ್ವಂತ ಗುರೂಜಿ ಈ ಬಾರಿ ಮಹಿಳೆಯೊಬ್ಬರು ಪ್ರಧಾನಿಯಾಗಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.

ಕರ್ನಾಟಕದ ತಿಪಟೂರು ತಾಲೂಕಿನ ಖ್ಯಾತ ನೊಣವಿನಕೆರೆಯ ಕಾಲಜ್ಞಾನಿ ಡಾ.ಯಶ್ವಂತ ಗುರೂಜಿ ಸ್ಪೋಟಕ ಭವಿಷ್ಯ ನುಡಿದಿದ್ದಾರೆ. ಎರಡು ಭಾರಿ ಪ್ರಧಾನಿಯಾಗಿರುವ ನರೇಂದ್ರ ಮೂರನೇ ಭಾರಿ ಪ್ರಧಾನ ಮಂತ್ರಿಯಾಗಲ್ಲ. ಈ ಬಾರಿ ಭಾರತಕ್ಕೆ ಮಹಿಳೆಯೊಬ್ಬರು ಪ್ರಧಾನಿಯಾಗಲಿದ್ದಾರೆ.  ದೇಶದಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ. ಮಹಿಳಾ ಪ್ರಧಾನಿಯಾಗಿ ಪ್ರಿಯಾಂಕ ಗಾಂಧಿ ಗದ್ದುಗೆ ಏರಲಿದ್ದಾರೆ. ಸ್ತ್ರೀ ಪುರುಷನ ಎದುರು ದುರ್ಗಿಯಂತೆ ನಿಂತು ಪುರುಷನಿಗೆ ಭಯ ಹುಟ್ಟಿಸಿ ತಾನೇ ಅಧಿಕಾರವನ್ನು ಮಾಡುತ್ತಾಳೆ ಎಂದು ಭವಿಷ್ಯ ನುಡಿದಿದ್ದಾರೆ. ಬಳಿಕ ತಾಯಿ ಮಮತೆಯಿಂದ ತನ್ನ ಅಧಿಕಾರವನ್ನು ಬೇರೆಯವರಿಗೆ ತ್ಯಾಗ ಮಾಡುತ್ತಾಳೆ ಎಂದು ಕಾಲಜ್ಞಾನದಲ್ಲಿ ಉಲ್ಲೇಖವಾಗಿದೆ ಎಂದು ಕಾಲಜ್ಞಾನಿ ಡಾ.ಯಶ್ವಂತ ಗುರೂಜಿ ಶಿವರಾತ್ರಿಯ ಕಾಲಜ್ಞಾನ ಭವಿಷ್ಯ ನುಡಿದಿದ್ದಾರೆ.

ಇನ್ನೂ ಶಿವರಾತ್ರಿಗೂ ಮುನ್ನಾ ಲೋಕಸಭಾ ಚುನಾವಣೆ ನಡೆದಿದ್ದರೇ ನರೇಂದ್ರ ಮೋದಿಯವರು ಮತ್ತೆ ಪ್ರಧಾನಿಯಾಗುವ ಯೋಗ ಇತ್ತು. ಆದರೆ ನರೇಂದ್ರ ಮೋದಿಯವರಿಗೆ ಪ್ರಧಾನಿಯಾಗುವ ಯೋಗವಿಲ್ಲ. ಆರೋಗ್ಯ ಸಮಸ್ಯೆ ಸಹ ಅವರಿಗೆ ಕಾಡಬಹುದು. ಅವರು ಅಧಿಕಾರದ ಕಡೆ ಗಮನ ಕೊಡದೇ, ಆರೋಗ್ಯದ ಬಗ್ಗೆ ಗಮನ ತೋರುವುದು ಒಳ್ಳೆಯದು ಎಂದಿದ್ದಾರೆ. ಈ ಹಿಂದೆ ಸಹ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷಕ್ಕೆ 135 ಸಿಟು ಬರಲಿದೆ ಎಂದು ಹೇಳಿದ್ದರು. ಅದೇ ರೀತಿ ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಸಾಧ್ಯತೆಯಿದೆ ಎಂದು ಭವಿಷ್ಯ ನುಡಿದಿದ್ದರು. ಇದೀಗ ಲೋಕಸಭಾ ಚುನಾವಣೆಯ ಬಗ್ಗೆ ಭವಿಷ್ಯ ನುಡಿದಿದ್ದು, ಭಾರಿ ಚರ್ಚೆಗೆ ಕಾರಣವಾಗಿದೆ.