ಆಸ್ಕರ್ ಅವಾರ್ಡ್ ಕಾರ್ಯಕ್ರಮಕ್ಕೆ ದೇಶ ಗರ್ವ ಪಡುವಂತೆ ಭಾರತೀಯನಾಗಿ ಹೋಗುತ್ತೇನೆ ಎಂದ ಜೂನಿಯರ್ ಎನ್.ಟಿ.ಆರ್…!

Follow Us :

ಇಡೀ ವಿಶ್ವವೇ ಮೆಚ್ಚಿದ ಸಿನೆಮಾಗಳಲ್ಲಿ ತೆಲುಗಿನ ಆರ್‍.ಆರ್‍.ಆರ್‍ ಸಿನೆಮಾ ಸಹ ಒಂದಾಗಿದೆ. ಈ ಸಿನೆಮಾದಲ್ಲಿನ ನಾಟು ನಾಟು ಹಾಡು ತುಂಬಾನೇ ಫೇಮಸ್ ಆಗಿದೆ. ಜೊತೆಗೆ ಈ ಹಾಡು ಪ್ರತಿಷ್ಟಿತ ಆಸ್ಕರ್‍ ಅವಾರ್ಡ್‌ಗೂ ಸಹ ನಾಮಿನೇಟ್ ಆಗಿದ್ದು, ಮಾ.12 ರಂದು ಈ ಅವಾರ್ಡ್ ಕಾರ್ಯಕ್ರಮ ನಡೆಯಲಿದೆ. ಈ ಬಗ್ಗೆ ಜೂನಿಯರ್‍ ಎನ್.ಟಿ.ಆರ್‍ ಕೆಲವೊಂದು ಆಸಕ್ತಿಕರವಾದ ಹೇಳಿಕೆಗಳನ್ನು ನೀಡಿದ್ದಾರೆ. ಜೊತೆಗೆ ನಾಟು ನಾಟು ಹಾಡಿನ ಲೈವ್ ಪ್ರದರ್ಶನದ ಬಗ್ಗೆ ಸಹ ಮಾತನಾಡಿದ್ದಾರೆ.

ಆಸ್ಕರ್‍ ಅವಾರ್ಡ್ ಫಂಕ್ಷನ್ ಗೆ RRR ತಂಡ ಅಮೇರಿಕಾದಲ್ಲಿ ಬೀಡು ಬಿಟ್ಟಿದೆ. ರಾಮ್ ಚರಣ್, ಯಂಗ್ ಟೈಗರ್‍ ಎನ್.ಟಿ.ಆರ್‍ ಸಹ ಹಾಲಿವುಡ್ ಮಿಡಿಯಾಗಳಿಗೆ ಸಂದರ್ಶನಗಳನ್ನೂ ಸಹ ನೀಡುತ್ತಿದ್ದಾರೆ. ಜೊತೆಗೆ ಫ್ಯಾನ್ಸ್ ಮೀಟ್ ನಂತಹ ಕಾರ್ಯಕ್ರಮಗಳಲ್ಲೂ ಸಹ ಭಾರಿ ಮಟ್ಟದಲ್ಲೇ ನಡೆಯುತ್ತಿದೆ. ಜೊತೆಗೆ ಪ್ರಮೋಷನ್ಸ್ ಸಹ ದೊಡ್ಡ ಮಟ್ಟದಲ್ಲೇ ನಿರ್ವಹಣೆ ಮಾಡುತ್ತಾ ಆಸ್ಕರ್‍ ಅವಾರ್ಡ್ ಗಾಗಿ ತುಂಭಾನೆ ಪ್ರಯತ್ನಗಳನ್ನು ಸಹ ಮಾಡುತ್ತಿದ್ದಾರೆ. ಇದೀಗ ಹಾಲಿವುಡ್ ಮಿಡಿಯಾದೊಂದಿಗೆ ಜೂನಿಯರ್‍ ಎನ್.ಟಿ.ಆರ್‍ ಮಾತನಾಡುತ್ತಾ ಕೆಲವೊಂದು ಹೇಳಿಕೆಗಳನ್ನು ನೀಡಿದ್ದಾರೆ. ಈ ವೇಳೆ ಮಾತನಾಡಿದ ಎನ್.ಟಿ.ಆರ್‍ ಮೊದಲ ಬಾರಿಗೆ ಆಸ್ಕರ್‍ ಈವೆಂಟ್ ನಲ್ಲಿ ರೆಡ್ ಕಾರ್ಪೇಟ್ ನಲ್ಲಿ ನಡೆಯುತ್ತಿರುವುದು ತುಂಬಾ ಸಂತೋಷವಾಗಿದೆ ಎಂದಿದ್ದಾರೆ.

ಇಡೀ ಪ್ರಪಂಚ ಎದುರು ನೋಡುತ್ತಿರುವ ಈ ಈವೆಂಟ್ ನಲ್ಲಿ ರೆಡ್ ಕಾರ್ಪೆಟ್ ಮೇಲೆ ನಾವು RRR ನಟರಾಗಿ ನಡೆಯುವುದಿಲ್ಲ. ಬದಲಿಗೆ ಭಾರಿತೀಯ ಚಿತ್ರರಂಗದ ನಟನಾಗಿ ಸಹ ನಡೆಯದೇ, ಭಾರತೀಯನಾಗಿ, ಹೃದಯದಲ್ಲಿ ದೇಶದ ಗರ್ವದೊಂದಿಗೆ ನಡೆಯುತ್ತೇನೆ ಎಂದು ಎನ್.ಟಿ.ಆರ್‍ ಎಮೋಷನಲ್ ಆಗಿ ಮಾತನಾಡಿದ್ದಾರೆ. ಇನ್ನೂ ದೇಶಭಕ್ತಿಯಿಂದ ಕೂಡಿ ಎನ್.ಟಿ.ಆರ್‍ ರವರ ಈ ಹೇಳಿಕೆಗಳು ಸೊಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಇನ್ನೂ ಎನ್.ಟಿ.ಆರ್‍ ಅಭಿಮಾನಿಗಳೂ ಸೇರಿದಂತೆ ಭಾರತೀಯರು ಅವರ ದೇಶ ಪ್ರೇಮವನ್ನು ಮೆಚ್ಚಿದ್ದಾರೆ. ಇನ್ನೂ ಇದೇ ಸಮಯದಲ್ಲಿ ನಾಟು ನಾಟು ಹಾಡಿನ ಲೈವ್ ಪ್ರದರ್ಶನದ ಬಗ್ಗೆ ಸಹ ಮಾತನಾಡಿದ್ದಾರೆ.

ಸುಮಾರು ದಿನಗಳಿಂದ ಆಸ್ಕರ್‍ ವೇದಿಕೆಯ ಮೇಲೆ RRR ಸಿನೆಮಾದ ನಾಟು ನಾಟು ಹಾಡಿನ ಲೈವ್ ಪ್ರದರ್ಶನ ಇರಲಿದೆ ಎಂಬ ಸುದ್ದಿ ಕೇಳಿಬರುತ್ತಿದೆ. ಈ ಬಗ್ಗೆ ಸಹ ಎನ್.ಟಿ.ಆರ್‍ ಸ್ಪಷ್ಟನೆ ನೀಡಿದ್ದಾರೆ. ರಿಹಾರ್ಸಲ್ ಇಲ್ಲದ ಕಾರಣದಿಂದ ನಾವು ಲೈವ್ ಪ್ರದರ್ಶನ ನೀಡಲು ಆಗುತ್ತಿಲ್ಲ. ಆದರೆ ಕಾಲಬೈರವ್ ಹಾಗೂ ರಾಹುಲ್ ಸಿಂಪ್ಲಿ ಗಂಜ್ ವೇದಿಕೆಯ ಮೇಲೆ ಹಾಡಲಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ. ಇನ್ನೂ ಆಸ್ಕರ್‍ ವೇದಿಕೆಯ ಮೇಲೆ ನಾಟು ನಾಟು ಹಾಡಿನ ಲೈವ್ ಪ್ರದರ್ಶನ ಇರಲಿದೆ ಎಂದು ಅಭಿಮಾನಿಗಳು ತುಂಬಾ ಆಸೆಯಿಂದ ಇದ್ದರು. ಆದರೆ ಅದು ಕೊಂಚ ನಿರಾಸೆಯೇ ಎಂದು ಹೇಳಬಹುದು. ಆದರೆ ದೇಶದ ನಟರು ಆಸ್ಕರ್‍ ನಲ್ಲಿ ಭಾಗಿಯಾಗುತ್ತಿರುವುದು ಹೆಮ್ಮೆಯ ವಿಚಾರ ಎಂದು ಸಂತಸ ವ್ಯಕ್ತಪಡಿಸುತ್ತಿದ್ದಾರೆ.