ಪವನ್ ಕಲ್ಯಾಣ್ ಡೈಲಾಗ್ ಹೇಳಿ ಹೇಳಿದ ಜೂನಿಯರ್ ಎನ್.ಟಿ.ಆರ್, ದೇವರ ಬಗ್ಗೆ ಗೂಸ್ ಬಂಪ್ಸ್ ತರಿಸುವ ಹೇಳಿಕೆ ಕೊಟ್ಟ ನಟ…..!

Follow Us :

ಓರ್ವ ಸ್ಟಾರ್‍ ನಟನ ಡೈಲಾಗ್ ಮತ್ತೋರ್ವ ಸ್ಟಾರ್‍ ನಟ ಹೊಡೆದರೇ ಅದರ ಕಿಕ್ ಬೇರೆ ಎಂದು ಹೇಳಬಹುದಾಗಿದೆ. ಇದೀಗ ಗ್ಲೋಬಲ್ ಸ್ಟಾರ್‍ ಜೂನಿಯರ್‍ ಎನ್.ಟಿ.ಆರ್‍ ರವರು ಪವರ್‍ ಸ್ಟಾರ್‍ ಪವನ್ ಕಲ್ಯಾಣ್ ರವರ ಡೈಲಾಗ್ ಹೊಡೆದು ಅಭಿಮಾನಿಗಳು ಕೇಕೆ ಹಾಕುವಂತೆ ಮಾಡಿದ್ದಾರೆ. ಇತ್ತೀಚಿಗಷ್ಟೆ ತೆರೆಕಂಡ ಟಿಲ್ಲು ಸ್ಕ್ವೇರ್‍ ಸಿನೆಮಾ ನೂರು ಕೋಟಿ ಕ್ಲಬ್ ಸೇರಿದ್ದು, ಬಾಕ್ಸ್ ಆಫೀಸ್ ನಲ್ಲಿ ಕಲೆಕ್ಷನ್ ಇನ್ನೂ ಮುಂದುವರೆಸುತ್ತಿದೆ. ಸದ್ಯ ಈ ಸಕ್ಸಸ್ ಪಾರ್ಟಿಯನ್ನು ಅದ್ದೂರಿಯಾಗಿ ನಿರ್ವಹಿಸಿದ್ದರು. ಈ ಕಾರ್ಯಕ್ರಮಕ್ಕೆ ಜೂನಿಯರ್‍ ಎನ್.ಟಿ.ಆರ್‍ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.

ಈ ಸಕ್ಸಸ್ ಮೀಟ್ ಈವೆಂಟ್ ನಲ್ಲಿ ಯಂಗ್ ಟೈಗರ್‍ ಎನ್.ಟಿ.ಆರ್‍ ಜೊತೆಗೆ ಖ್ಯಾತ ನಿರ್ದೇಶಕ ಮಾತಿನ ಮಾಂತ್ರಿಕ ತ್ರಿವಿಕ್ರಮ್ ಶ್ರೀನಿವಾಸ್ ಸಹ ಭಾಗಿಯಾಗಿದ್ದರು. ಈ ವೇಳೆ ಎನ್.ಟಿ.ಆರ್‍ ರವರು ಟಿಲ್ಲು ಸ್ಕ್ವೇರ್‍ ಸಿನೆಮಾ ತಂಡವನ್ನು ಅಭಿನಂದಿಸಿದರು. ಕೋವಿಡ್ ಗೂ ಮುಂಚೆ ಸಿದ್ದು ಜೊನ್ನಲಗಡ್ಡ ಜೊತೆ ನನಗೆ ಅಷ್ಟೊಂದು ಪರಿಚಯವಿರಲಿಲ್ಲ. ಕೋವಿಡ್ ಪ್ಯಾಂಡಮಿಕ್ ಬಳಿಕ ಆತನೊಂದಿಗೆ ಮಾತನಾಡಿದೆ. ಆತನೊಂದಿಗೆ ಪರಿಚಯದ ಬಳಿಕ ನನಗೆ ಅರ್ಥವಾಗಿದ್ದು ಒಂದೇ, ಆತನಿಗೆ ಸಿನೆಮಾ ಬಿಟ್ಟು ಬೇರೆ ಪ್ರಪಂಚ ಇಲ್ಲ ಅಂತಾ. ಟಿಲ್ಲು ಪಾತ್ರವನ್ನು ಆತ ತುಂಬಾ ಪ್ರೀತಿಸಿದ್ದಾನೆ. ಈ ಸಿನೆಮಾ ನೋಡುತಿದ್ದ ಸಮಯ ತುಂಬಾ ನಾನು ನಗುತ್ತಲೇ ಇದೆ. ನಾನು ನಗೋದು ಶುರು ಮಾಡಿದ್ರೆ ನಿಲ್ಲಿಸೋದು ಕಷ್ಟ. ನನ್ನಿಂದ ಅದುರ್ಸ್ ಸಿನೆಮಾ ಸಮಯದಲ್ಲಿ ವಿನಾಯಕ್ ರವರು ತುಂಬಾನೆ ಸಮಸ್ಯೆಪಟ್ಟರು. ಬ್ರಹ್ಮಾನಂದ ರವರ ಮುಖ ನೋಡಿದರೇ ನನಗೆ ನಗು ಬರುತ್ತಿತ್ತು. ಅದಕ್ಕು ಮೀರಿ ಸಿದ್ದು ನನ್ನನ್ನು ನಗಿಸಿದ್ದಾರೆ ಎಂದರು.

ಸಿದ್ದು ಭವಿಷ್ಯತ್ ನಲ್ಲಿ ಇಂತಹ ಸಿನೆಮಾಗಳನ್ನು ಮತಷ್ಟು ಮಾಡಬೇಕು. ದೇವರ ಸಿನೆಮಾದಲ್ಲಿ ಒಂದು ಡೈಲಾಗ್ ಇದೆ. ಕನಸು ಕಾಣೋಕೆ ಧೈರ್ಯ ಬೇಕು, ಆ ಕನಸನ್ನು ಸಾರ್ಥಕತೆ ಮಾಡಿಕೊಳ್ಳಲು ಭಯ ಬೇಕು ಎಂದು ಹೇಳಿದರು. ಈ ಡೈಲಾಗ್ ಹೊಡೆಯುತ್ತಿದ್ದಂತೆ ನೆರೆದಿದ್ದ ಜನರು ಜೋರಾಗಿ ಕೂಗಾಡಿದರು. ಈ ಡೈಲಾಗ್ ಬಳಿಕ ತ್ರಿವಿಕ್ರಮ್ ಕಡೆ ನೋಡುತ್ತಾ ಆದರೆ ಸರಿಪಡಿಸಿ, ಇಲ್ಲ ಕ್ಷಮಿಸಿ, ಆದರೆ ನಾವಿದ್ದಿವಿ ಅಂತಾ ಗುರ್ತಿಸಿ ಎಂದು ಅತ್ತಾರಿಂಟಿಕಿ ದಾರೇದಿ ಸಿನೆಮಾದಲ್ಲಿ ಪವನ್ ಕಲ್ಯಾಣ್ ಹೊಡೆದ ಡೈಲಾಗ್ ಮಾದರಿ ಡೈಲಾಗ್ ಹೊಡೆದರು. ಇದರಿಂದ ನೆರೆದಿದ್ದ ಜನರೆಲ್ಲಾ ಶಿಳ್ಳೆ, ಕೇಕೆಗಳನ್ನು ಹಾಕಿ ಜೋರು ಸದ್ದು ಮಾಡಿದರು.

ಕೊನೆಯದಾಗಿ ನಾನು ಈ ಶರ್ಟ್ ಹಾಕಿಕೊಂಡು ಬಂದಿದ್ದೇನೆ. ದೇವರ ಸಿನೆಮಾ ರಿಲೀಸ್ ಕೊಂಚ ತಡವಾದರೂ ಸಹ ಫ್ಯಾನ್ಸ್ ಎಲ್ಲಾ ಶರ್ಟ್ ಕಾಲರ್‍ ಎತ್ತಿಹಿಡಿಯುವಂತೆ ಈ ಸಿನೆಮಾ ಇರುತ್ತದೆ ಎಂದು ಹೇಳಿದರು. ಇದೀಗ ಜೂನಿಯರ್‍ ಎನ್.ಟಿ.ಆರ್‍ ಹೇಳಿಕೆಗಳು ವೈರಲ್ ಆಗುತ್ತಿವೆ.